ಬೆಂಗಳೂರು:ರಾಜಧಾನಿಯಡ್ರಗ್ಸ್ ಜಾಲ ನಂಟು ಆರೋಪ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಸಂಗೀತ್ ದಂತಕುಡಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಡ್ರಗ್ಸ್ ಜಾಲ ಪ್ರಕರಣ: ಮತ್ತೋರ್ವ ಶಂಕಿತ ಆರೋಪಿ ಸಿಸಿಬಿ ಪೊಲೀಸರ ವಶಕ್ಕೆ - Sandalwood Drug link Case
ಡ್ರಗ್ ಜಾಲ ನಂಟು ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ದಿನಕ್ಕೊಬ್ಬರನ್ನು ಕರೆದು ವಿಚಾರಣೆ ನಡೆಸುತ್ತಿದ್ದು, ಇಂದು ಕೂಡ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಈತ ಭೂಗತ ದೊರೆಯಾಗಿದ್ದ ಮುತ್ತಪ್ಪ ರೈ ಆಪ್ತರ ವಲಯದಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗ್ತಿದೆ. ಸದಾಶಿವನಗರದ ಫ್ಲಾಟ್ನಲ್ಲಿ ಸಿಸಿಬಿ ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈತ ಈಗಾಗಲೇ ಬಂಧನಕ್ಕೊಳಗಾಗಿರುವ ಆರೋಪಿಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಮತ್ತು ರಾತ್ರಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದನಂತೆ. ಈ ಹಿನ್ನೆಲೆ ಇಂದು ಬೆಳಗ್ಗೆಯಿಂದ ಸಂಗೀತ್ನನ್ನು ಸಿಸಿಬಿ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಎರಡನೇ ಬಾರಿ ವಿಚಾರಣೆಗೆ ಹಾಜರಾದ ರಮೇಶ್: ಈಗಾಗಲೇ ಬಂಧಿತನಾಗಿರುವ ವಿರೇನ್ ಖನ್ನಾ ಸೇರಿದಂತೆ 10 ಮಂದಿ ಆರೋಪಿಗಳ ಜೊತೆ ಗುರುತಿಸಿಕೊಂಡಿದ್ದ ವಸ್ತ್ರ ವಿನ್ಯಾಸಕ ರಮೇಶ್ ದೆಂಬುಲಾ ಎಂಬಾತನನ್ನು ಕಳೆದ ಶನಿವಾರ ಇಡೀ ದಿನ ಸಿಸಿಬಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು. ಇದೀಗ ಮತ್ತೆ ನೊಟೀಸ್ ನೀಡಿ ಕರೆಸಿ ತೀವ್ರ ವಿಚಾರಣೆ ನಡೆಸಿದ್ದಾರೆ.