ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರಿ ಸದ್ದು ಮಾಡಿದ್ದ ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ಸತತ 10 ಗಂಟೆಗಳಿಂದ ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ನಡೆಸುವವರಿಗೇ ವಿಚಾರಣೆ.. ಬೆಂಗಳೂರು ಮಾಜಿ ಪೊಲೀಸ್ ಆಯುಕ್ತರಿಗೆ ಸಿಬಿಐ ಸಖತ್ ಡ್ರಿಲ್ - Alok kumar recent news
ಇಂದು ಬೆಳ್ಳಗೆ 11 ಗಂಟೆಯಿಂದ ಕೆ.ಕೆ.ಗೆಸ್ಟ್ ಹೌಸ್ಗೆ ಅಲೋಕ್ ಕುಮಾರ್ ಅವರನ್ನು ಕರೆಸಿಕೊಂಡು ಸಿಬಿಐ ತನಿಖಾಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು. ನಿನ್ನೆಯಷ್ಟೇ ಅಲೋಕ್ ಕುಮಾರ್ ಅವರ ನಿವಾಸ ಹಾಗೂ ನೃಪತುಂಗ ರಸ್ತೆ ಕಚೇರಿ ಮೇಲೆ ಏಕಾಏಕಿ ದಾಳಿ ನಡೆಸಿ ಅಗತ್ಯ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು ಇಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.
ಇಂದು ಬೆಳ್ಳಗೆ 11 ಗಂಟೆಯಿಂದ ಕೆ.ಕೆ.ಗೆಸ್ಟ್ ಹೌಸ್ಗೆ ಅಲೋಕ್ ಕುಮಾರ್ ಅವರನ್ನು ಕರೆಸಿಕೊಂಡು ಸಿಬಿಐ ತನಿಖಾಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು. ನಿನ್ನೆಯಷ್ಟೇ ಅಲೋಕ್ ಕುಮಾರ್ ಅವರ ನಿವಾಸ ಹಾಗೂ ನೃಪತುಂಗ ರಸ್ತೆ ಕಚೇರಿ ಮೇಲೆ ಏಕಾಏಕಿ ದಾಳಿ ನಡೆಸಿ ಅಗತ್ಯ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು ಇಂದು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದರು.
ಇದರಂತೆ ಇಂದು ಬೆಳ್ಳಗೆ ವಿಚಾರಣೆ ಹಾಜರಾಗಿದ್ದರು. ಮುಂಜಾನೆಯಿಂದಲೂ ನಡೆದ ಸುದೀರ್ಘ ವಿಚಾರಣೆಯಲ್ಲಿ ಈವರೆಗೂ ಎಷ್ಟು ಮಂದಿಯ ಫೋನ್ ಟ್ಯಾಪಿಂಗ್ ಮಾಡಲಾಗಿದೆ ಎಂಬುದರ ಬಗ್ಗೆ ಪ್ರಶ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ವಿಚಾರಣೆ ನಡೆಸಿದ ಸಿಬಿಐ ತನಿಖೆಗೆ ಅಗತ್ಯಬಿದ್ದರೆ ಮತ್ತೆ ತಮ್ಮ ಮುಂದೆ ಹಾಜರಾಗಬೇಕೆಂದು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.