ಬೆಂಗಳೂರು: ಭಾರತದಲ್ಲಿ ಉತ್ಪಾದಿಸಿದ ಕೆಮ್ಮು ಸಿರಪ್‌ನಿಂದಾಗಿ ಆಫ್ರಿಕಾದ ಗ್ಯಾಂಬಿಯಾದಲ್ಲಿ 66 ಮಕ್ಕಳು ಸಾವನ್ನಪ್ಪಿದ್ದು, ಇದು ದೇಶಕ್ಕೆ ಆದ ದೊಡ್ಡ ಅವಮಾನ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಹೇಳಿದ್ದಾರೆ.
ಇನ್ಫೋಸಿಸ್ ಸೈನ್ಸ್ ಫೌಂಡೇಶನ್ ವತಿಯಿಂದ ಆರು ಜನ ಗಣ್ಯರಿಗೆ ಇನ್ಫೋಸಿಸ್ ಪ್ರಶಸ್ತಿ ಘೋಷಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ನಾರಾಯಣಮೂರ್ತಿ, ಭಾರತವು ಕೋವಿಡ್ ಉತ್ಪಾದಿಸುವ ಹಾಗೂ ದೇಶದ ಜನರಿಗೆ ಲಸಿಕೆ ಹಾಕುವ ಸಾಧನೆಯನ್ನು ಸಾಧಿಸಿದ್ದರೂ ಸಹ ಸಂಶೋಧನಾ ಕ್ಷೇತ್ರದಲ್ಲಿ ಸವಾಲುಗಳನ್ನು ಎದುರಿಸುತ್ತಿದೆ ಎಂದರು.
ಇದನ್ನೂ ಓದಿ:6 ವಿಭಾಗಗಳಲ್ಲಿ ಪ್ರಶಸ್ತಿ ಘೋಷಿಸಿದ ಇನ್ಫೋಸಿಸ್ ಸೈನ್ಸ್ ಫೌಂಡೇಷನ್
100 ಕೋಟಿ ಕೋವಿಡ್ 19 ಲಸಿಕೆಗಳನ್ನು ತಯಾರಿಸಿದ ಮತ್ತು ಸರಬರಾಜು ಮಾಡಿದ ಕಂಪನಿಗಳನ್ನು ಶ್ಲಾಘಿಸಿದ ಅವರು, ಇದು ಅದ್ಭುತ ಸಾಧನೆಯಾಗಿದೆ. ಅಲ್ಲದೇ, ಪ್ರೊಫೆಸರ್ ಕಸ್ತೂರಿರಂಗನ್ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹೊರತಂದಿರುವುದು ಶ್ಲಾಘನೀಯ ಎಂದು ಹೇಳಿದ್ದಾರೆ.
ದೊಡ್ದ ಸವಾಲುಗಳು ಎದುರಿವೆ: ಪ್ರೊಫೆಸರ್ ಗಗನ್‌ದೀಪ್ ಕಾಂಗ್ ಸೇರಿದಂತೆ ಹಲವರು ಲಂಡನ್‌ನಲ್ಲಿರುವ ರಾಯಲ್ ಸೊಸೈಟಿ ಸಂಶೋಧಕರಾಗಿದ್ದಾರೆ. ಅಲ್ಲದೇ, ಪ್ರೊಫೆಸರ್ ಅಶೋಕ್ ಸೇನ್ ಮಿಲೇನಿಯಂ ಪ್ರಶಸ್ತಿ ಗೆದ್ದಿದ್ದಾರೆ. ಇದೆಲ್ಲವೂ ನಮಗೆ ಪ್ರೇರಣೆ ಹಾಗೂ ಸಂತಸದ ಘಟನೆಗಳಾಗಿವೆ. ಭಾರತದ ಸಂಪೂರ್ಣವಾಗಿ ಈಗ ಬೆಳವಣಿಗೆ ಹಂತದಲ್ಲಿದೆ. ಆದರೆ ನಮಗೆ ಇನ್ನೂ ದೊಡ್ಡ ಸವಾಲುಗಳಿವೆ ಎಂದು ನಾರಾಯಣಮೂರ್ತಿ ತಿಳಿಸಿದ್ದಾರೆ.
ಡೆಂಘೀ ಚಿಕೂನ್ ಗುನ್ಯಾ ರೋಗಗಳಿಗೆ ಲಸಿಕೆ ಇಲ್ಲ:2020ರಲ್ಲಿ ಘೋಷಿಸಲಾದ ವಿಶ್ವವಿದ್ಯಾನಿಲಯದ ಜಾಗತಿಕ ಶ್ರೇಯಾಂಕದ ಟಾಪ್ 250ರಲ್ಲಿ ಭಾರತದ ಉನ್ನತ ಶಿಕ್ಷಣ ಸಂಸ್ಥೆಯ ಒಂದೇ ಒಂದು ಸಂಸ್ಥೆಯೂ ಇಲ್ಲ. ನಾವು ತಯಾರಿಸಿದ ಲಸಿಕೆಗಳು ಮುಂದುವರಿದ ದೇಶಗಳ ತಂತ್ರಜ್ಞಾನ ಆಧರಿಸಿ ಅಥವಾ ಅಭಿವೃದ್ಧಿ ಹೊಂದಿದ ಸಂಶೋಧನೆಯ ಆಧಾರದ ಮೇಲೆ ಜಗತ್ತು ಉತ್ತೇಜನಗೊಂಡಿದೆ.