ಬೆಂಗಳೂರು : ಹಣ ವಂಚನೆ ಆರೋಪದಡಿ ಇನ್ಫೋಸಿಸ್ ಕಂಪನಿಯ ಮೂವರು ಉದ್ಯೋಗಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
ಹಣ ವಂಚನೆ ಆರೋಪ : ಇನ್ಫೋಸಿಸ್ ಕಂಪನಿಯ ಮೂವರು ಉದ್ಯೋಗಿಗಳ ಬಂಧನ.. - Latest News in bangalore
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
![ಹಣ ವಂಚನೆ ಆರೋಪ : ಇನ್ಫೋಸಿಸ್ ಕಂಪನಿಯ ಮೂವರು ಉದ್ಯೋಗಿಗಳ ಬಂಧನ.. infosys-employee-arrested-in-bangalore](https://etvbharatimages.akamaized.net/etvbharat/prod-images/768-512-6342232-thumbnail-3x2-dr.jpg)
ಇನ್ಫೋಸಿಸ್ ಕಂಪೆನಿಯ ಮೂವರು ಉದ್ಯೋಗಿಗಳ ಬಂಧನ
ಪ್ರಕಾಶ್, ಕಲ್ಯಾಣ ಹಾಗೂ ದೇವಿಶ್ರೀ ರೆಡ್ಡಿ ಬಂಧಿತ ಆರೋಪಿಗಳು. ಮೂಲತಃ ಹೈದರಾಬಾದ್ ನಿವಾಸಿಗಳಾದ ಆರೋಪಿಗಳು ಬೆಂಗಳೂರಿನ ಪ್ರತಿಷ್ಠಿತ ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಿಪಿಸಿ ಎಂಬ ಪ್ರಾಜೆಕ್ಟ್‌ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಇವರು, ತೆರಿಗೆ ಮರುಪಾವತಿ ಮಾಡಿಕೊಳ್ಳುವವರಿಗೆ 7 ದಿನಗಳಲ್ಲಿ ಹಣ ರಿಫಂಡ್ ಮಾಡುವುದಾಗಿ ಕಮಿಷನ್ ಪಡೆಯುತ್ತಿದ್ದರು ಎಂದು ದೂರು ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.