ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಪಿಒಪಿ ಗಣೇಶನ ನಿಷೇಧವಿದ್ದರೂ 1,654 ಪಿಒಪಿ ವಿಗ್ರಹಗಳು ಪತ್ತೆಯಾಗಿವೆ ಎಂದು ಹೈಕೋರ್ಟ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಮಾಣಪತ್ರ ಸಲ್ಲಿಕೆ ಮಾಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶ ವಿಸರ್ಜನೆ: ಮಾಲಿನ್ಯ ಮಂಡಳಿಯಿಂದ ಹೈಕೋರ್ಟ್ಗೆ ಮಾಹಿತಿ - ಪಿಒಪಿ ಗಣೇಶನ ನಿಷೇಧ
ಬಿಬಿಎಂಪಿ ವ್ಯಾಪ್ತಿಯಲ್ಲಿ ಪಿಒಪಿ ಗಣೇಶನ ನಿಷೇಧವಿದ್ದರೂ, ವಿಸರ್ಜನೆ ವೇಳೆ ಸಾವಿರಾರು ವಿಗ್ರಹಗಳು ಪತ್ತಯಾಗಿವೆ ಎಂದು, ಕ.ರಾ.ಮಾ.ನಿ.ಮಂಡಳಿ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಹೈಕೋರ್ಟ್
ಕೆರೆಗಳ ಸಂರಕ್ಷಣೆ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ, ಈ ಮಾಹಿತಿಯನ್ನ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೈಕೋರ್ಟ್ಗೆ ನೀಡಿದೆ.
2019ರ ಸೆಪ್ಟೆಂಬರ್ 2ರಂದು ಬಿಬಿಎಂಪಿ ವ್ಯಾಪ್ತಿಯಲ್ಲಿ 1,91,247 ಗಣೇಶ ಮೂರ್ತಿಗಳನ್ನ ಇಡಲಾಗಿದ್ದು, ಅವನ್ನು ವಿಸರ್ಜಿಸಲಾಗಿದೆ. ಆದರೆ, ಮತ್ತೊಂದೆಡೆ ನಿಯಮಗಳನ್ನ ಗಾಳಿಗೆ ತೂರಿದ್ದು 1,654 ಪಿಒಪಿ ಗಣೇಶನ ವಿಗ್ರಹಗಳು ಪತ್ತೆಯಾಗಿವೆ ಎಂದು, ಪ್ರಮಾಣ ಪತ್ರದಲ್ಲಿ ವಿವರಿಸಿದ್ದಾರೆ. ಇನ್ನು ನ್ಯಾಯಾಲಯ ಪ್ರಮಾಣ ಪತ್ರ ದಾಖಲಿಸಿಕೊಂಡು ವಿಚಾರಣೆ ಮುಂದೂಡಿಕೆ ಮಾಡಿದೆ.