ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಪ್ರವಾಹ: ಮಳೆ ಪೀಡಿತ ಬಡಾವಣೆಗಳಲ್ಲೀಗ ಸಾಂಕ್ರಾಮಿಕ ರೋಗದ ಭೀತಿ

ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಜನರು ಬದುಕು ದುಸ್ತರವಾಗಿದೆ.

ಬೆಂಗಳೂರಿನಲ್ಲಿ ಪ್ರವಾಹ
ಬೆಂಗಳೂರಿನಲ್ಲಿ ಪ್ರವಾಹ

By

Published : Sep 8, 2022, 8:42 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮೂರು ದಿನಗಳಿಂದ ಸುರಿದ ಮಳೆ ಪ್ರಮಾಣ ತಗ್ಗಿದೆ. ಆದರೆ, ಮಹದೇವಪುರ, ರೈನ್‌ಬೋ ಬಡಾವಣೆ ಸೇರಿದಂತೆ ಇತರ ಪ್ರದೇಶಗಳ ಅಪಾರ್ಟ್​ಮೆಂಟ್​ಗಳಲ್ಲಿ ಕೊಳಚೆ ನೀರು ಸಂಗ್ರಹವಾಗಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಹಲವು ಕಡೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

ಬೆಂಗಳೂರಿನಲ್ಲಿನ ಪ್ರವಾಹಪೀಡಿತ ಬಡಾವಣೆಗಳಲ್ಲಿ ಸಾಂಕ್ರಾಮಿಕ ರೋಗದ ಭೀತಿ

ಜಲಾವೃತಗೊಂಡಿರುವ ಕರಿಯಮ್ಮನ ಅಗ್ರಹಾರ, ಮಾರತಹಳ್ಳಿ, ಹೊರವರ್ತುಲ ರಸ್ತೆಯ ಕೆಲವು ಭಾಗಗಳಲ್ಲಿನ ಜನರ ಬದುಕು ದುಸ್ತರವಾಗಿದೆ. ಯಮಲೂರಿನಲ್ಲಿ ಪರಿಸ್ಥಿತಿ ಸುಧಾರಿಸುತ್ತಿದ್ದು, ಕ್ರಮೇಣ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಅಪಾರ್ಟ್‌ಮೆಂಟ್​ಗಳಲ್ಲಿ ಕೊಳಚೆ ನೀರು ಸಂಗ್ರಹವಾಗಿದ್ದು, ನೀರನ್ನು ಹೊರ ಹಾಕುವ ಕಾರ್ಯಗೊಂಡಿಲ್ಲ. ಕಳೆದ ಮೂರು ದಿನಗಳಿಂದ ಕೊಳಚೆ ನೀರು ನಿಂತಿದೆ. ನೀರು ಸರಾಗವಾಗಿ ಹರಿಯುವಂತೆ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ರೈನ್ ಬೊ ಲೇಔಟ್‌ ಅಪಾರ್ಟ್‌ಮೆಂಟ್‌ನ ಬೇಸ್​ಮೆಂಟ್​ನಲ್ಲಿ ಕೊಳಚೆ ನೀರು ಸಂಗ್ರಹವಾಗಿದ್ದು, ಜನರು ಮನೆ, ಮಠ ತೊರೆಯುವಂತಾಗಿದೆ. ಕೊಳಚೆ ನೀರು ನಿಂತಿರುವುದರಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಕೆಲವು ಪ್ರದೇಶಗಳು ಕೆಸರುಗದ್ದೆಯಾಗಿ ಮಾರ್ಪಟ್ಟಿದ್ದು, ಜನರು ಆತಂಕದಲ್ಲೇ ಬದುಕು ಕಳೆಯುವಂತಾಗಿದೆ. ಈ ವಿಲ್ಲಾಗಳ ಸುತ್ತಮುತ್ತ ನೀರು ನಿಂತಿದ್ದು, ರೋಗದ ಭೀತಿಗೆ ವಿಲ್ಲಾಗಳನ್ನು ತೊರೆಯುವ ಹಂತಕ್ಕೆ ನಿವಾಸಿಗಳು ಬಂದಿದ್ದಾರೆ.

ಓದಿ:ಮಹಾಮಳೆಯಿಂದ ಬೋಟ್​ನಲ್ಲಿ ಓಡಾಡೋ ಪರಿಸ್ಥಿತಿ ನಿರ್ಮಾಣ ಆಗಿದೆ: ಮಾಜಿ ಸಿಎಂ ಸಿದ್ದರಾಮಯ್ಯ

ABOUT THE AUTHOR

...view details