ಬೆಂಗಳೂರು: ಸಿ ಎಂ ವಿಶ್ವಾಸಮತಯಾನೆ ಮಾಡಿ ಕೊನೆಗೆ ವಿದಾಯ ಭಾಷಣ ಮಾಡಲಿದ್ದಾರೆ ಎಂಬಂತಹ ವಿಷಯಗಳು ರಾಜ್ಯದಲ್ಲಿ ಚರ್ಚೆಯಾಗುತ್ತಿವೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಮತಕ್ಕೆ ಹೋಗೋಣ ಎಂದಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಕೂಡ ಇಂದೇ ಮತಕ್ಕೆ ಹೋಗುವುದಾಗಿ ತಿಳಿಸಿದ್ದಾರೆ. ಆದರೆ ದೋಸ್ತಿಗಳ ನಡೆ ನಿಗೂಢವಾಗಿದ್ದು, ಇಂದು ವಿಶ್ವಾಸಮತಕ್ಕೆ ಹೋಗದೇ ಇನ್ನೊಂದು ದಿನ ದೂಡುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ.
ಸುಪ್ರೀಂ ಕೋರ್ಟಿನ ತೀರ್ಪಿನ ನಂತರ ಏನಾಗಲಿದೆ ಎನ್ನುವುದನ್ನು ನೋಡಿ, ಚರ್ಚಿಸಿ ನಾಳೆ ವಿಧಾನಸಭೆಯಲ್ಲಿ ನಿರ್ಧಾರ ಕೈಗೊಳ್ಳಲು ದೋಸ್ತಿಗಳು ಒಳಗೊಳಗೆ ಯೋಜನೆ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ಇಂದಿನ ಚರ್ಚೆಯ ಬಳಿಕ ಸಿಎಂ ವಿಶ್ವಾಸಮತಯಾಚಿಸ್ತಾರಾ? ಇಂದು ವಿಶ್ವಾಸಮತ ಯಾಚನೆ ಮಾಡ್ತಾರೆ ಎಂದಿರುವ ಸಿದ್ದರಾಮಯ್ಯ ಮಾತು ನಿಜವಾಗುವುದಾ? ಎನ್ನುವುದನ್ನು ಕಾದು ನೋಡಬೇಕಿದೆ.