ಕರ್ನಾಟಕ

karnataka

ETV Bharat / state

ವಿಚಾರಣೆ ಮುಗಿಸಿ ಸಿಸಿಬಿ ಕಚೇರಿಯಿಂದ ಹೊರ ಬಂದ ಇಂದ್ರಜಿತ್​​ ಲಂಕೇಶ್ ಹೇಳಿದ್ದೇನು? - ಬೆಂಗಳೂರು ಸುದ್ದಿ

ನಿರ್ಮಾಪಕ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಇಂದು ವಿಚಾರಣೆಗೆ ಹಾಜರಾಗಿದ್ದು, ಸುಮಾರು 40 ನಿಮಿಷಗಳ ಕಾಲ ತನಿಖಾಧಿಕಾರಿಗಳ ಎದುರು ಹಾಜರಾಗಿದ್ದರು.

ಇಂದ್ರಜಿತ್​​ ಲಂಕೇಶ್
ಇಂದ್ರಜಿತ್​​ ಲಂಕೇಶ್

By

Published : Sep 3, 2020, 1:04 PM IST

ಬೆಂಗಳೂರು: ಸ್ಯಾಂಡಲ್​ವುಡ್​ನ ಕೆಲ ನಟ-ನಟಿಯರು ಡ್ರಗ್ಸ್​​ ಜಾಲದಲ್ಲಿ ಇದ್ದಾರೆ ಎಂದು ಹೇಳಿಕೆ ಕೊಟ್ಟ ನಿರ್ಮಾಪಕ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಇಂದು ಸಿಸಿಬಿ ವಿಚಾರಣೆಗೆ ಹಾಜರಾಗಿದ್ದರು. ಸುಮಾರು 40 ನಿಮಿಷಗಳ ಕಾಲ ತನಿಖಾಧಿಕಾರಿಗಳ ಎದುರು ಹಾಜರಾಗಿ ಹೊರ ಬಂದಿದ್ದಾರೆ.

ಸದ್ಯ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿ ಅವರ ಎದುರು ಹಾಜರಾದ ಇಂದ್ರಜಿತ್, ಕರ್ನಾಟಕದ ಪ್ರತಿಯೊಬ್ಬ ಮಾಧ್ಯಮ ಮಿತ್ರರು ನನಗೆ ಬೆಂಬಲ ಕೊಟ್ಟಿದ್ದಕ್ಕೆ ಧನ್ಯವಾದ. ಎರಡನೇ ನೋಟಿಸ್ ಕೊಟ್ಟ ಕಾರಣ ನಾನು 40 ನಿಮಿಷ ತನಿಖಾಧಿಕಾರಿಗಳ ಎದುರು ಹಾಜರಾಗಿದ್ದೇನೆ. ನಾನು ಈ ಹಿಂದೆ ಕೊಟ್ಟಿದ್ದ ಹೇಳಿಕೆಗೆ ಸ್ಪಷ್ಟನೆ ನೀಡಲು ಬಂದಿದ್ದೆ ಎಂದರು.

ನಾನು ನಿಮ್ಮಲ್ಲಿ ಒಂದು ಕೇಳಿಕೊಳ್ಳುತ್ತೇನೆ. ನಾನು ಈ ಹಿಂದೆ ಕೊಟ್ಟ ಮಾಹಿತಿಗೆ ದಾಖಲೆ ಬೇಕಿತ್ತು, ಅದನ್ನ ಕೊಟ್ಟೆ ಅಷ್ಟೇ. ತನಿಖಾಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಸದ್ಯ ಹಲವಾರು ಸಿನಿಮಾಗಳನ್ನು ನಾನು ಮಾಡಿದ್ದೇನೆ. ಹಾಗಾಗಿ ಜನ ನಂಗೆ ರಿಸಲ್ಟ್ ಕೊಟ್ಟಿದ್ದಾರೆ. ನನಗೆ ಯಾರು ಏನೇ ಅನ್ನಲ್ಲಿ ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದರು.

ತನಿಖಾಧಿಕಾರಿಗಳು ಸ್ಟ್ರಾಂಗ್ ಇದ್ದು, ನನಗೇನು ಗೊತ್ತೊ ಅದನ್ನ ಹೇಳಿದ್ದೇನೆ. ಪ್ರತಿಯೊಬ್ಬ ಕಾಲೇಜಿನ ಮಕ್ಕಳು, ಯುವಕರು ಈ ಡ್ರಗ್ಸ್​ನಿಂದ ಹೊರಬರಬೇಕು. ಸದ್ಯ ಸಮಾಜಕ್ಕೆ ಒಂದು ಭಯ, ಅರಿವು ಮೂಡಿದೆ. ತನಿಖೆಯನ್ನ ಹೊರತುಪಡಿಸಿ ನಾನು ಏನೂ ಹೇಳಲ್ಲ. ಹಾಗೆ ಸದ್ಯ ರಾಗಿಣಿ ಹಾಗೂ ಸಂಜನಾ ಕುರಿತು ನಾನು ಪ್ರತಿಕ್ರಿಯೆ ನೀಡಲ್ಲವೆಂದು ಇಂದ್ರಜಿತ್​ ಲಂಕೇಶ್​ ಹೇಳಿದ್ದಾರೆ.

ABOUT THE AUTHOR

...view details