ಬೆಂಗಳೂರು: ಕಳೆದ ಐದಾದು ದಿನಗಳಿಂದ ನಟ ದರ್ಶನ್ ಹಾಗು ನಿರ್ದೇಶಕ ಇಂದ್ರಜಿತ್ ಲಂಕೇಶ್ ನಡುವಿನ ವಾಕ್ಸಮರ ತಾರಕಕ್ಕೇರುತ್ತಿದೆ. ಇದೀಗ ದರ್ಶನ್ ಬೆಂಬಲಿಗರು ಹಾಗೂ ಅಭಿಮಾನಿಗಳು ಫೋನ್ ಕಾಲ್ ಮಾಡಿ ಹಾಗೂ ಮೆಸೇಜ್‌ಗಳನ್ನು ಕಳುಹಿಸುವ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದರ್ಶನ್ ಅಭಿಮಾನಿಗಳು ಹಾಗೂ ಅವರ ಬೆಂಬಲಿಗರು ಸತತವಾಗಿ ನನಗೆ ಕರೆ ಮಾಡುತ್ತಿದ್ದಾರೆ. ಅಶ್ಲೀಲ ಚಿತ್ರಗಳನ್ನು ಬಳಸಿ ಟ್ರೋಲ್ ಮಾಡುತ್ತಿದ್ದಾರೆ. ಬೇರೆ ನಂಬರ್‌ಗಳಿಂದ ಫೋನ್ ಮಾಡಿ, ಹೆದರಿಸಬಹುದು ಅಂದುಕೊಂಡ್ರೆ ಅದು ತಪ್ಪು. ನಾನು ಹೆದರೋಲ್ಲ ಎಂದು ಅವರು ಹೇಳಿದರು.