ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಡ್ರಗ್ ಮಾಫಿಯಾ ಘಾಟಿದೆ ಎಂದು ಆರೋಪಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿಚಾರಣೆಗೆ ಹಾಜರಾಗಿದ್ದಾರೆ.
ದಾಖಲೆ ಸಮೇತ ಸಿಸಿಬಿ ಕಚೇರಿಗೆ ಆಗಮಿಸಿದ ಇಂದ್ರಜಿತ್ ಲಂಕೇಶ್! - ಎಸಿಪಿ ಗೌತಮ್
ಸ್ಯಾಂಡಲ್ವುಡ್ನಲ್ಲಿ ಡ್ರಗ್ ಮಾಫಿಯಾ ನೆಲೆಯೂರಿದೆ ಎಂಬ ಇಂದ್ರಜಿತ್ ಲಂಕೇಶ್ ಆರೋಪ ಹಿನ್ನೆಲೆ ಸಿಸಿಬಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ತಿಳಿಸಿತ್ತು. ಇದೀಗ ದಾಖಲೆ ಸಮೇತ ಅವರು ಕಚೇರಿಗೆ ಆಗಮಿಸಿದ್ದಾರೆ.
ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ದಾಖಲೆ ಸಮೇತರಾಗಿ ಆಗಮಿಸಿದ್ದಾರೆ. ಎನ್ಸಿಬಿ ಡ್ರಗ್ ಡೀಲರ್ ಅನಿಕಾಲನ್ನು ಬಂಧನ ಮಾಡಿದಾಗ ಸ್ಯಾಂಡಲ್ವುಡ್ಗೆ ಡ್ರಗ್ ಸಪ್ಲೇ ಮಾಡಿರುವ ವಿಚಾರ ಬಯಲಾಗಿತ್ತು. ಹೀಗಾಗಿ ಇದರ ಬಗ್ಗೆ ಮಾಧ್ಯಮಗಳ ಜೊತೆ ಮಾತಾನಾಡಿದ ಇಂದ್ರಜಿತ್ ಲಂಕೇಶ್, ಪೊಲೀಸರು ಭದ್ರತೆ ನೀಡಿದ್ರೆ ಸ್ಯಾಂಡಲ್ವುಡ್ ಬಗ್ಗೆ ಮಾಹಿತಿ ಕೊಡುವುದಾಗಿ ತಿಳಿಸಿದ್ದರು.
ಸದ್ಯ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ ಹಿನ್ನೆಲೆ ಸಿಸಿಬಿ ಕಚೇರಿಗೆ ಆಗಮಿಸಿದ ಇಂದ್ರಜಿತ್, ಎಸಿಪಿ ಗೌತಮ್ ಮುಂದೆ ಮಾಹಿತಿ ನೀಡಲಿದ್ದಾರೆ. ಇನ್ನು ಅಧಿಕಾರಿಗಳು ಮಾಹಿತಿ ಸಂಗ್ರಹಿಸಿ ಡಿಸಿಪಿ ರವಿಕುಮಾರ್ ಮುಂದೆ ಹೇಳಿಕೆ ದಾಖಲು ಮಾಡಲಿದ್ದಾರೆ.