ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಪ್ರಾಯೋಗಿಕ ಇಂದೋರ್​​​ ಮಾದರಿ ಕಸ ವಿಲೇವಾರಿ ಪ್ರಯತ್ನ ಯಶಸ್ವಿ! - ಬೆಂಗಳೂರು ಮಹಾನಗರ ಪಾಲಿಕೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ನಾಲ್ಕು ವಾರ್ಡ್​​ಗಳಲ್ಲಿ ಜಾರಿ ಮಾಡಿರುವ ಇಂದೋರ್ ಮಾದರಿ ಕಸ ವಿಲೇವಾರಿ ಯಶಸ್ವಿಯಾಗಿ ನಡೆಯುತ್ತಿದೆ.

Indore Model Garbage Disposal In Bangalore Successful!
ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಇಂದೋರ್ ಮಾದರಿ ಕಸ ವಿಲೇವಾರಿ ಯಶಸ್ವಿ!

By

Published : Feb 22, 2020, 8:15 PM IST

ಬೆಂಗಳೂರು:ಪ್ರಾಯೋಗಿಕವಾಗಿ ನಗರದ ನಾಲ್ಕು ವಾರ್ಡ್​​ಗಳಲ್ಲಿ ಜಾರಿ ಮಾಡಿರುವ ಇಂದೋರ್ ಮಾದರಿ ಕಸ ವಿಲೇವಾರಿ ಯಶಸ್ವಿಯಾಗಿ ನಡೆಯುತ್ತಿದೆ.

ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಹೊತ್ತಲ್ಲಿ ಮೂರು ಪಾಳಿಯಲ್ಲಿ ಕಸ ಸಂಗ್ರಹಿಸಲಾಗುತ್ತಿದೆ. ಅಲ್ಲದೆ ಮಿಶ್ರ ಕಸ ತಂದರೆ ಕಸದ ಆಟೋಗೆ ನೀಡುವ ಮೊದಲೇ ಹಸಿ ಕಸ, ಒಣ ಕಸವಾಗಿ ವಿಂಗಡಿಸಲು ಕಡ್ಡಾಯ ಮಾಡಲಾಗುತ್ತಿದೆ. ಸ್ಥಳದಲ್ಲೇ ಮಾರ್ಷಲ್​ಗಳು ನಿಂತು ಕಸ ಸಂಗ್ರಹಿಸಿರುವ ಬಗ್ಗೆ ಹಾಗೂ ಕಸ ವಿಂಗಡಿಸಿರುವ ಬಗ್ಗೆ ನೋಡಿಕೊಳ್ಳುತ್ತಿದ್ದಾರೆ. ನಗರವನ್ನು ಕಸ ಮುಕ್ತಗೊಳಿಸಲು ಬಿಬಿಎಂಪಿಯ ಎಲ್ಲಾ ವಾರ್ಡ್​ಗಳಲ್ಲಿ ಇಂದೋರ್ ಮಾದರಿಯನ್ನು ಜಾರಿಗೊಳಿಸಲು ಬಿಬಿಎಂಪಿ ಮುಂದಾಗಿದೆ.

ಮೇಯರ್​ ಗೌತಮ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಕಸ ವಿಂಗಡಣೆಯ ಫೋಟೋ ಹಂಚಿಕೊಂಡಿದ್ದಕ್ಕೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ. ಬಿಬಿಎಂಪಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ, ಯಾವುದೇ ಯೋಜನೆ ಜಾರಿಯಾದರೂ ಕಸ ಸಮಸ್ಯೆ ಪರಿಹಾರ ಆಗುವುದಿಲ್ಲ. ಮಾಂಸದ ತ್ಯಾಜ್ಯದಿಂದ ಸ್ಥಳೀಯರು ಹೈರಾಣಾಗಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ.

ABOUT THE AUTHOR

...view details