ಬೆಂಗಳೂರು:ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇಂದಿರಾ ಕ್ಯಾಂಟೀನ್ಗೆ ಪದೇ ಪದೇ ಹಿನ್ನಡೆಯಾಗುತ್ತಿದ್ದು,ಇನ್ನೂ ಹದಿನೈದು ದಿನಗಳ ಕಾಲ ಹಳೆ ಟೆಂಡರ್ರನ್ನೇ ಮುಂದುವರಿಸುವಂತೆ ಗುತ್ತಿಗೆ ಸಂಸ್ಥೆಗಳಿಗೆ ಸೂಚಿಸಲಾಗಿದೆ.
ಇಂದಿರಾ ಕ್ಯಾಂಟೀನ್ ಹೊಸ ಟೆಂಡರ್ ವಿಳಂಬ: ಇನ್ನೂ 15 ದಿನ ಹಳೆ ಟೆಂಡರೇ ಮುಂದುವರಿಸಲು ಸೂಚನೆ - banglore latest news
ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇಂದಿರಾ ಕ್ಯಾಂಟೀನ್ಗೆ ಪದೇ ಪದೇ ಹಿನ್ನಡೆಯಾಗುತ್ತಿದ್ದು,ಇನ್ನೂ ಹದಿನೈದು ದಿನಗಳ ಕಾಲ ಹಳೆ ಟೆಂಡರ್ರನ್ನೇ ಮುಂದುವರಿಸುವಂತೆ ಗುತ್ತಿಗೆ ಸಂಸ್ಥೆಗಳಿಗೆ ಸೂಚಿಸಲಾಗಿದೆ.
ಆಗಸ್ಟ್ 15 ಕ್ಕೆ ಈಗಾಗಲೇ ಇರುವ ಚೆಫ್ಟಾಕ್ ಹಾಗೂ ರಿವಾರ್ಡ್ಸ್ ಸಂಸ್ಥೆಯ ಟೆಂಡರ್ ಕೊನೆಗೊಳ್ಳಲಿದೆ. ಹೊಸ ಟೆಂಡರ್ ಜಾರಿಯಾಗಲಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಈ ಹಿಂದೆ ತಿಳಿಸಿದ್ದರು. ಆದರೆ ಹೊಸ ಸರ್ಕಾರ ಬಂದ ಮೇಲೆ ಹೊಸ ಯೋಜನೆಗಳಿಗೆ ಹಾಗೂ ಟೆಂಡರ್ಗಳಿಗೆ ತಡೆ ನೀಡಿರುವುದರಿಂದ ಇಂದಿರಾ ಕ್ಯಾಂಟೀನ್ ಹೊಸ ಟೆಂಡರ್ಗೂ ಅಡ್ಡಿಯಾಗಿದೆ. ಹೀಗಾಗಿ ಇನ್ನೂ ಹದಿನೈದು ದಿನಗಳ ಕಾಲ ಹಳೆ ಟೆಂಡರ್ರನ್ನೇ ಮುಂದುವರಿಸುವಂತೆ ಎರಡೂ ಗುತ್ತಿಗೆ ಸಂಸ್ಥೆಗಳಿಗೆ ಸೂಚಿಸಲಾಗಿದೆ.
ಆಡಳಿತ ಪಕ್ಷದ ನಾಯಕ ವಾಜಿದ್ ಮಾತನಾಡಿ, ಟೆಂಡರ್ ಫೈನಲ್ ಮಾಡಲು ಟೆಕ್ನಿಕಲ್ ಸಮಸ್ಯೆ ಉಂಟಾಗಿದೆಯಷ್ಟೇ. ಯೋಜನೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದಿದ್ದಾರೆ. ರಿವಾರ್ಡ್ಸ್ ಸಂಸ್ಥೆಯ ಮ್ಯಾನೇಜರ್ ಬಲ್ದೇವ್ ಸಿಂಗ್ ಮಾತನಾಡಿ, ಹದಿನೈದು ದಿನ ಹಳೇ ಟೆಂಡರ್ ಮುಂದುವರಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.