ದೇವನಹಳ್ಳಿ: ಪ್ರಯಾಣದ ಜೊತೆಯಲ್ಲಿ 41 ಇಂಚಿನ ಹಾಕಿ ಸ್ಟಿಕ್ ತೆಗೆದುಕೊಂಡು ಹೋಗಲು ಒಲಿಂಪಿಕ್ ಕಂಚಿನ ಪದಕ ವಿಜೇತನಿಗೆ ಇಂಡಿಗೋ ಸಂಸ್ಥೆ 1500 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಿದೆ.
ಭಾರತ ಹಾಕಿ ತಂಡದ ಗೋಲ್ ಕೀಪರ್ ಮತ್ತು ಒಲಿಂಪಿಕ್ ಕಂಚಿನ ಪದಕ ವಿಜೇತ ಶ್ರೀಜೇಶ್ ಪಿ ಆರ್ ಸೆಪ್ಟೆಂಬರ್ 23ರಂದು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೊಚ್ಚಿಗೆ ಪ್ರಯಾಣಿಸಬೇಕಿತ್ತು. ಅಂದು ರಾತ್ರಿ 7 ಗಂಟೆಗೆ ಇಂಡಿಗೋ ವಿಮಾನದ 6E 382 ವಿಮಾನದಲ್ಲಿ ಪ್ರಯಾಣಿಸಬೇಕಿತ್ತು.
ವಿಮಾನ ಹತ್ತುವ ಮುನ್ನ ಅವರ ಕಿಟ್ ನಲ್ಲಿ 41 ಇಂಚಿನ ಹಾಕಿ ಸ್ಟಿಕ್ ಇತ್ತು. 38 ಇಂಚಿನ ಹಾಕಿ ಸ್ಟಿಕ್ ಗೆ ಮಾತ್ರ ಅನುಮತಿ ಇದ್ದು, 3 ಇಂಚು ಹೆಚ್ಚು ಉದ್ದ ಇರುವ ಹಾಕಿ ಸ್ಟಿಕ್ ಗೆ ಹೆಚ್ಚುವರಿ 1500 ಶುಲ್ಕ ಪಾವತಿಸುವಂತೆ ಏರ್ ಲೈನ್ಸ್ ಸಿಬ್ಬಂದಿ ಹೇಳಿದ್ದಾರೆ. ಶ್ರೀಜೇಶ್ ಹೆಚ್ಚುವರಿ ಶುಲ್ಕ ಪಾವತಿಸಿ ಕೊಚ್ಚಿನ್ ಗೆ ಪ್ರಯಾಣ ಬೆಳೆಸಿದ್ದರು.