ಕರ್ನಾಟಕ

karnataka

ETV Bharat / state

Gramin Dak Sevak Job: ಅಂಚೆ ಇಲಾಖೆಯಿಂದ ಬೃಹತ್​ ನೇಮಕಾತಿ.. ರಾಜ್ಯದಲ್ಲಿ 1714 ಡಾಕ್​ ಸೇವಕ್​ ಹುದ್ದೆಗೆ ಅರ್ಜಿ ಆಹ್ವಾನ - ಭಾರತೀಯ ಅಂಚೆ ಇಲಾಖೆ

ಕರ್ನಾಟಕ ಅಂಚೆ​ ವೃತ್ತದಿಂದ ಒಟ್ಟು 1214 ಗ್ರಾಮೀಣ ಡಾಕ್​ ಸೇವಕ್​ (ಪಿಬಿಎಂ/ ಎಬಿಪಿಎಂ) ಹುದ್ದೆ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

Indian Post GDS Recruitment in Karnataka
Indian Post GDS Recruitment in Karnataka

By

Published : Aug 3, 2023, 3:51 PM IST

ಕರ್ನಾಟಕ ಅಂಚೆ ವೃತ್ತದಲ್ಲಿ ಡಾಕ್​ ಸೇವಕ್​ ಹುದ್ದೆ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಭಾರತೀಯ ಅಂಚೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಒಟ್ಟು 1714 ಗ್ರಾಮೀಣ ಡಾಕ್​ ಸೇವಕ್​ ಉದ್ಯೋಗ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಬ್ರಾಂಚ್​ ಪೋಸ್ಟ್​ ಮಾಸ್ಟರ್​ (ಬಿಪಿಎಂ) ಅಸಿಸ್ಟೆಂಟ್​ ಬ್ರಾಂಚ್​ ಪೋಸ್ಟ್​ ಮಾಸ್ಟರ್​​ (ಎಬಿಪಿಎಂ) ಹುದ್ದೆಗಳ ನೇಮಕಾತಿ ನಡೆಯಲಿದೆ. 10 ನೇ ತರಗತಿ ಓದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತು ಅರ್ಜಿ ಸಲ್ಲಿಕೆ, ವೇತನ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.

ಅಧಿಸೂಚನೆ

ಹುದ್ದೆ ವಿವರ: ಕರ್ನಾಟಕ ಅಂಚೆ​ ವೃತ್ತದಿಂದ ಒಟ್ಟು 1214 ಗ್ರಾಮೀಣ ಡಾಕ್​ ಸೇವಕ್​ (ಪಿಬಿಎಂ/ ಎಬಿಪಿಎಂ) ಹುದ್ದೆಗೆ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

ಜಿಲ್ಲೆಯಲ್ಲಿರುವ ಹುದ್ದೆಗಳ ವಿವರ

ಯಾವ ಜಿಲ್ಲೆಗೆ ಎಷ್ಟು ಹುದ್ದೆ ಇಲ್ಲಿದೆ ವಿವರ:

  • ಬಾಗಲಕೋಟೆ- 29
  • ಬಳ್ಳಾರಿ- 43
  • ಬೆಳಗಾವಿ- 42
  • ಬೆಂಗಳೂರು ಪೂರ್ವ- 11
  • ಬೆಂಗಳೂರು ದಕ್ಷಿಣ- 4
  • ಬೆಂಗಳೂರು ಪಶ್ಚಿಮ- 6
  • ಬೀದರ್​- 49
  • ಚನ್ನಪಟ್ಟಣ- 66
  • ಚಿಕ್ಕಮಗಳೂರು- 63
  • ಚಿಕ್ಕೋಡಿ- 45
  • ಚಿತ್ರದುರ್ಗ- 51
  • ದಾವಣಗೆರೆ- 47
  • ಧಾರವಾಡ- 36
  • ಗದಗ- 63
  • ಗೋಕಾಕ್​- 13
  • ಹಾಸನ್​- 84
  • ಹಾವೇರಿ- 33
  • ಕಲ್ಬುರ್ಗಿ-44
  • ಕಾರವಾರ- 53
  • ಕೊಡಗು- 44
  • ಕೋಲಾರ- 75
  • ಮಂಡ್ಯಾ-78
  • ಮಂಗಳೂರು- 52
  • ಮೈಸೂರು- 43
  • ನಂಜನಗೂಡು-41
  • ಪುತ್ತೂರು- 89
  • ರಾಯಚೂರು- 49
  • ಆರ್​ಎಂಎಸ್​ ಎಚ್​ಬಿ- 44
  • ಆರ್​ಎಂಎಸ್​ ಕ್ಯೂ 6
  • ಶಿವಮೊಗ್ಗ-74
  • ಉಡುಪಿ- 110
  • ವಿಜಯಪುರ- 65
  • ಯಾದಗಿರಿ- 33

ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ 40 ವರ್ಷಗಳಾಗಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲ ಚೇತನ, ತೃತೀಯ ಲಿಂಗಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಇತರೆ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ವೇತನ:ಗ್ರಾಮೀಣ ಡಾಕ್​ ಸೇವಕ್​ ಬ್ರಾಂಚ್​ ಪೋಸ್ಟ್​ ಮಾಸ್ಟರ್​ (ಬಿಪಿಎಂ) ಹುದ್ದೆಗೆ 12,000-29,380ರೂವರೆಗೆ ಗ್ರಾಮೀಣ ಡಾಕ್​ ಸೇವಕ್​ ಅಸಿಸ್ಟೆಂಟ್​ ಬ್ರಾಂಚ್​ ಪೋಸ್ಟ್​ ಮಾಸ್ಟರ್​​ (ಎಬಿಪಿಎಂ) ಹುದ್ದಗೆ 10000-24470ರೂ. ವರೆಗೆ ವೇತನ ನಿಗದಿಪಡಿಸಲಾಗಿದೆ.

ಆಯ್ಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಮೆರಿಟ್​ ಪಟ್ಟಿ, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಈ ಹುದ್ದೆಗೆ ಅಭ್ಯರ್ಥಿಗಳು ಆಗಸ್ಟ್​ 3ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​​ 23 ಆಗಿದೆ. ಅರ್ಜಿ ತಪ್ಪು ಸರಿಪಡಿಸುವಿಕೆಗೆ ಆಗಸ್ಟ್​ 24ರಿಂದ ಆಗಸ್ಟ್​ 26ರ ವರೆಗೆ ಕಾಲ ಅವಕಾಶ ನೀಡಲಾಗಿದೆ.

ಈ ಹುದ್ದೆ ಕುರಿತು ಸಂಪೂರ್ಣ ವಿವರಣೆ, ಅರ್ಜಿ ಸಲ್ಲಿಕೆ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯ ಅಧಿಕೃತ ಜಾಲತಾಣವಾದ indiapost.gov.in ಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ:Jobs in Koppal: ಕೊಪ್ಪಳ ಜಿಲ್ಲಾ ಪಂಚಾಯತ್​ನಲ್ಲಿ ಉದ್ಯೋಗಾವಕಾಶ.. 13 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ABOUT THE AUTHOR

...view details