ಆನೇಕಲ್(ಬೆಂಗಳೂರು):ರಾಜ್ಯದಲ್ಲಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಟ ಕೂಲಿ ನೀಡಬೇಕೆಂದು ಭಾರತೀಯ ಮಜ್ದೂರ್ ಸಂಘ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿತು.
ಕಾರ್ಮಿಕ ವಿರೋಧಿ ಕಾನೂನು, ಎಲ್ಲವೂ ಖಾಸಗೀಕರಣ.. ಭಾರತೀಯ ಮಜ್ದೂರ್ ಸಂಘ ಕಿಡಿ - Appeal to Tahsildars
ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಟ ಕೂಲಿ ನೀಡಬೇಕೆಂದು ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘ ತಹಶೀಲ್ದಾರರಿಗೆ ಮನವಿ ಪತ್ರ ಲ್ಲಿಸಿತು.
indian-mazdoor-association-appeal-to-tahsildars-at-annekal
ದಂಡಾಧಿಕಾರಿಗಳ ಕಚೇರಿ ಮುಂದೆ ಸೇರಿದ್ದ ನೂರಾರು ಕಾರ್ಯಕರ್ತೆಯರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಅವರ ಜೊತೆಗೆ ಮಜ್ದೂರ್ ಸಂಘದ ರಾಜ್ಯ ಸಮಿತಿ ಸದಸ್ಯರು ಸಾಥ್ ನೀಡಿದರು. ಅಸಂಘಟಿತ ಕಾರ್ಮಿಕ ವರ್ಗಕ್ಕೆ ಕನಿಷ್ಟ ಕೂಲಿ ನೀಡಬೇಕು ಮತ್ತು ಅವರಿಗೆ ಮೂಲಸೌಲಭ್ಯಗಳನ್ನ ನೀಡಬೇಕು. ಇಪಿಎಫ್,ಪಿಎಫ್,ಇಎಸ್ಐ ಸೇರಿ ಇತರ ಸೌಲಭ್ಯಗಳನ್ನು ಒದಗಿಸಬೇಕೆಂದು ಮನವಿಯಲ್ಲಿ ಕೋರಿದ್ದಾರೆ.