ಬೆಂಗಳೂರು : ಭಾರತೀಯ ಎಲ್ಲ ಕಾಫಿ ಕಣಿವೆಯ ಕಾಫಿ ರುಚಿ ಜಗತ್ತಿನಾದ್ಯಂತ ವಿಸ್ತರಣೆಯಾಗಬೇಕು. ಇದನ್ನು ಮಿಷನ್ ಆಗಿ ಪರಿಗಣಿಸಬೇಕು. ದೇಶದ ವಿವಿಧ ರಾಜ್ಯಗಳ ಕಣಿವೆಗಳಲ್ಲಿಯೂ ಕಾಫಿ ವ್ಯಾಲಿ ಪಸರಿಸಬೇಕು ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಕರೆ ನೀಡಿದ್ದಾರೆ.
ಭಾರತೀಯ ಕಾಫಿ ಮಂಡಳಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ರಾಜ್ಯ ಸರ್ಕಾರ ಮತ್ತು ಕಾಫಿ ಉದ್ಯಮದ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಕಾಫಿ ಸಂಸ್ಥೆ ನಗರದ ಅರಮನೆ ಮೈದಾನದಲ್ಲಿ ನಾಲ್ಕು ದಿನಗಳ ಕಾಫಿ ಸಮ್ಮೇಳನ ಆಯೋಜನೆ ಮಾಡಿದೆ. ಈ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಸ್ಟಾರ್ಟ್ ಅಪ್ ರಾಜಧಾನಿಯಾಗಿರುವ ಸಿಲಿಕಾನ್ ಸಿಟಿಯಲ್ಲಿ ಕಾಫಿ ಸಮ್ಮೇಳನ ಆಯೋಜನೆ ಅರ್ಥಪೂರ್ಣವಾಗಿದೆ. ಪರಿಮಳ ಮತ್ತು ಆವಿಷ್ಕಾರದ ಕೇಂದ್ರ ಬಿಂದುವಾಗಿ ಬೆಂಗಳೂರನ್ನು ಆಯ್ಕೆ ಮಾಡಿದ್ದು ಉತ್ತಮ ನಿರ್ಧಾರವಾಗಿದೆ.
ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂದು ಕಾಫಿ ಕುಟುಂಬ ಕಾಫಿ ಉತ್ಪನ್ನಗಳ ಕುರಿತು ಸಮಗ್ರ ಆವಿಷ್ಕಾರಗಳು ನಡೆಯಬೇಕು. ನಮ್ಮ ಕಾಫಿ ಕುಟುಂಬ ಬೆಂಗಳೂರಿನಲ್ಲಿ ಕಾಫಿ ಉದ್ಯಮಕ್ಕೆ ಸುಸ್ಥಿರ ರಹದಾರಿ ರೂಪಿಸಬೇಕು. ಜಗತ್ತಿನ ಕಾಫಿ ಉದ್ಯಮ ಉಳಿಸಿ ಬೆಳೆಸುವ ಅನಿವಾರ್ಯತೆ ಇದ್ದು ಅದಕ್ಕೆ ಪೂರಕವಾಗಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಇಲ್ಲಿ ಚರ್ಚೆ ನಡೆಸಯಲಿದೆ ಎನ್ನುವ ವಿಶ್ವಾಸ ಇದೆ ಎಂದರು.
ತ್ಯಾಜ್ಯ ಕಡಿಮೆ ಮಾಡಬೇಕು : ಕಾಫಿ ಸಮ್ಮೇಳನದಲ್ಲಿ ನಡೆಯಲಿರುವ ಚರ್ಚೆಗಳಿಂದಾಗಿ ಕಾಫಿ ಉದ್ಯಮಕ್ಕೆ ಹೊಸತ ಸಿಗಲಿದ್ದು, ಕಾಫಿ ಉದ್ಯಮದ ಬೆಳವಣಿಗೆ ಸಹಕಾರಿಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಆದ್ಯತೆ ಸುಸ್ಥಿರತೆ ಮತ್ತು ಮರು ಬಳಕೆಗೆ ಆಧ್ಯತೆ ನೀಡಿದ್ದು, ಕಾಫಿ ಉದ್ಯಮದ ತ್ಯಾಜ್ಯ ಕಡಿಮೆ ಮಾಡುವುದು. ಪರಿಸರ ಪೂರಕ ಚಟುವಟಿಕೆ ಹಮ್ಮಿಕೊಳ್ಳುವುದು ನಮ್ಮ ಜವಾಬ್ದಾರಿ. ಆ ನಿಟ್ಟಿನಲ್ಲಿ ಕಾಫಿ ಉದ್ಯಮಗಳು ಆವಿಷ್ಕಾರಗಳನ್ನು ಮಾಡಬೇಕು. ತ್ಯಾಜ್ಯ ಅತಿದೊಡ್ಡ ಸಮಸ್ಯೆ, ಇದರಿಂದ ಪರಿಸರ ಸಮಸ್ಯೆಗೆ ಸಿಲುಕುತ್ತಿದೆ. ಕಾಫಿ ಉದ್ಯಮ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ತ್ಯಾಜ್ಯ ಕಡಿಮೆ ಮಾಡಬೇಕು ಎಂದು ಕೇಂದ್ರ ಸಚಿವ ಸಲಹೆ ನೀಡಿದರು.
17ನೇ ಶತಮಾನದಲ್ಲಿ ಕಾಫಿ ಉದ್ಯಮ ಭಾರತದಲ್ಲಿ ಆರಂಭವಾಯಿತು. ಚಿಕ್ಕಮಗಳೂರಿನಲ್ಲಿ ಮೊದಲ ಬಾರಿಗೆ ಕಾಫಿ ಕೃಷಿ ಆರಂಭವಾಯಿತು. ಶೇ.70 ರಷ್ಟು ದೇಶದ ಕಾಫಿ ಉತ್ಪಾದನೆ ಕರ್ನಾಟಕದಲ್ಲಿಯೆ ಆಗುತ್ತಿದೆ. 300 ವರ್ಷದ ಹಿಂದೆ ದೇಶಕ್ಕೆ ಬಂದ ಕಾಫಿ ತಳಿ ಕಾಫಿ ಕ್ರಾಂತಿಯನ್ನೇ ಮಾಡಿದೆ. ಮೈಸೂರು, ಚಿಕ್ಕಮಗಳೂರು ಸೇರಿ ಇತರ ಪ್ರದೇಶದಲ್ಲಿ ಬೆಳೆ ಆರಂಭಗೊಂಡು ಕಾಫಿಯ ಹೊಸ ಶೆಕೆಯನ್ನು ಆರಂಭಿಸಿದೆ. ಇಂದಿನ ಸಮ್ಮೇಳನದಲ್ಲಿ 90 ದೇಶಗಳು ಭಾಗಿಯಾಗಿವೆ. ಜಗತ್ತಿನ ಎಲ್ಲ ದೇಶಗಳೂ ಕಾಫಿ ಮಾರುಕಟ್ಟೆಗಳಾಗಿವೆ. ಎಲ್ಲೆಡೆ ವಿಭಿನ್ನ ಪ್ರಬೇಧದ ಕಾಫಿ ಇದೆ. ಸಾಂಕ್ರಾಮಿಕದ ವೇಳೆ ರಕ್ಷಣೆಗೆ ಕಾಫಿ ಸಹಕಾರಿಯಾಗಿತ್ತು ಎನ್ನುವುದನ್ನು ಯಾರೂ ಮರೆಯುವಂತಿಲ್ಲ ಎಂದು ಪಿಯೂಷ್ ಗೋಯಲ್ ತಿಳಿಸಿದರು.