ಕರ್ನಾಟಕ

karnataka

ETV Bharat / state

ಮೋದಿ ಆಡಳಿತ ಸೂತ್ರದಿಂದ ಭಾರತ ಯಶಸ್ವಿ ರಾಷ್ಟ್ರವಾಗಲಿದೆ: ಸದಾನಂದಗೌಡ

ಮಾತುಗಳಿಗಿಂತ ಕೃತಿ ಮುಖ್ಯ ಆಗಬೇಕು. ಭವಿಷ್ಯದಲ್ಲಿ ನನಗೆ ಪ್ರಕೋಷ್ಠಗಳಲ್ಲಿ ತೊಡಗಿಕೊಳ್ಳುವ ಇಚ್ಛೆ ಇದೆ. ಸರ್ವಸ್ಪರ್ಶಿ ಸರ್ವವ್ಯಾಪಿ, ಸರ್ವವೇದ್ಯ ಆದಾಗ ರಾಜಕೀಯವು ಯಶಸ್ಸು ಪಡೆಯುತ್ತದೆ ಎಂದು ಕೇಂದ್ರದ ಮಾಜಿ ಸಚಿವ ಡಿ ವಿ ಸದಾನಂದಗೌಡ ಹೇಳಿದ್ದಾರೆ.

india-will-become-a-successful-nation-with-modis-governance-formula
ಮೋದಿ ಆಡಳಿತ ಸೂತ್ರದಿಂದ ಭಾರತ ಯಶಸ್ಸಿನ ರಾಷ್ಟ್ರವಾಗಲಿದೆ: ಡಿ.ವಿ.ಸದಾನಂದಗೌಡ

By

Published : Oct 16, 2022, 10:40 PM IST

ಬೆಂಗಳೂರು: ನರೇಂದ್ರ ಮೋದಿಯವರ ಆಡಳಿತ ಸೂತ್ರದ ಮೂಲಕ ಭಾರತ ಮುಂದಿನ ದಿನಗಳಲ್ಲಿ ಯಶಸ್ವಿ ರಾಷ್ಟ್ರವಾಗಲಿದೆ ಎಂದು ಕೇಂದ್ರದ ಮಾಜಿ ಸಚಿವ ಡಿ ವಿ ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ರಾಜಾಜಿನಗರದ ಕೆ.ಎಲ್.ಇ ಸೊಸೈಟಿಯ ಎಸ್. ನಿಜಲಿಂಗಪ್ಪ ಕಾಲೇಜಿನಲ್ಲಿ ನಡೆದ ಬಿಜೆಪಿಯ 24 ಪ್ರಕೋಷ್ಠಗಳ ರಾಜ್ಯ ಸಂಚಾಲಕರು ಮತ್ತು ಸಹಸಂಚಾಲಕರ ಸಭೆ ಉದ್ಘಾಟಿಸಿ ಮಾತನಾಡಿದರು. ಗುಲಾಮಗಿರಿಯ ಅಂಶಗಳು ನಮ್ಮ ರಕ್ತದಲ್ಲಿವೆ. ಈ ದಾಸ್ಯದ ಗುರುತುಗಳನ್ನು ತೊಲಗಿಸಿ ಹೊಸ ಆಡಳಿತ ಸೂತ್ರ ನೀಡಲು ಮೋದಿ ಮುಂದಾಗಿದ್ದಾರೆ. ಇದು ಕೇವಲ ಹಿಂದೂಗಳಿಗೆ ಸಂಬಂಧಿಸಿದ್ದಲ್ಲ. ದಾಸ್ಯದ ಗುರುತೇ ಇರಬಾರದೆಂಬ ಚಿಂತನೆ ಅವರದು ಎಂದು ಹೇಳಿದರು.

ಮಾತುಗಳಿಗಿಂತ ಕೃತಿ ಮುಖ್ಯ ಆಗಬೇಕು. ಭವಿಷ್ಯದಲ್ಲಿ ನನಗೆ ಪ್ರಕೋಷ್ಠಗಳಲ್ಲಿ ತೊಡಗಿಕೊಳ್ಳುವ ಇಚ್ಛೆ ಇದೆ. ಸರ್ವಸ್ಪರ್ಶಿ, ಸರ್ವವ್ಯಾಪಿ, ಸರ್ವವೇದ್ಯ ಆದಾಗ ರಾಜಕೀಯವು ಯಶಸ್ಸು ಪಡೆಯುತ್ತದೆ ಎಂದು ತಿಳಿಸಿದರು.

ಮೋದಿ ಜಾಗತಿಕ ನಾಯಕ: ಮೋದಿ ಇದೀಗ ಜಾಗತಿಕ ನಾಯಕರಾಗಿ ಹೊರಹೊಮ್ಮಿದ್ದಾರೆ. ಇಂದಿರಾ ಗಾಂಧಿ, ವಿ.ಪಿ. ಸಿಂಗ್ ಅವರಿಗಿಂತ ಹೆಚ್ಚು ಜನಾಶೀರ್ವಾದವನ್ನು ಮೋದಿಯವರು ಪಡೆದಿದ್ದಾರೆ. ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಮೋದಿಯವರ ಜನಾಶೀರ್ವಾದದ ಪ್ರಮಾಣ ಹೆಚ್ಚುತ್ತ ಸಾಗಿದೆ. ಅವರ ನಡವಳಿಕೆ, ವ್ಯಕ್ತಿತ್ವ, ದೇಶಪ್ರೇಮ ಮತ್ತು ಈ ಮೂರನ್ನು ಸೇರಿಸಿದ ಸೈದ್ಧಾಂತಿಕ ವ್ಯವಸ್ಥೆಗಳು ಇದಕ್ಕೆ ಕಾರಣ. ಪ್ರಕೋಷ್ಠಗಳ ಮೂಲಕ ರಾಜಕೀಯದಲ್ಲಿ ಪರಿವರ್ತನೆ ಸಾಧ್ಯ. ವ್ಯಕ್ತಿಯ ಸಚ್ಚಾರಿತ್ರ್ಯ, ಮಾತೃಭೂಮಿಯ ಬಗೆಗಿನ ಅವರ ಪರಿಕಲ್ಪನೆ, ಸಮಾಜದ ಜೊತೆಗಿನ ಅವರ ಸಂಬಂಧಗಳ ಆಧಾರಿತ ಜೀವನಪದ್ಧತಿ ಭಾರತದ್ದಾಗಿತ್ತು. ಅದನ್ನು ಜಗತ್ತು ಒಪ್ಪಿಕೊಂಡಿತ್ತು ಎಂದು ಹೇಳಿದರು.

ಇಲ್ಲಿನ ವಿವಿಧ ಪ್ರಕೋಷ್ಠಗಳು ವೃತ್ತಿ ಆಧಾರಿತ ಕಲ್ಪನೆಯಡಿ ಜೋಡಣೆಗೊಂಡಿವೆ. ಈ ದೇಶ ಇನ್ನಷ್ಟು ಯಶಸ್ವಿ ರಾಷ್ಟ್ರ ಆಗಲು ಜಾತಿಗಿಂತ ಮೀರಿ, ವೃತ್ತಿ ಆಧಾರಿತ ಮತ್ತು ನಮ್ಮ ಸಂಘಟನೆಗಳ ಪರಿಕಲ್ಪನೆಯ ರಾಜನೀತಿ ಈ ದೇಶದಲ್ಲಿ ಬರಬೇಕು. ಜಾತಿಗಿಂತ ನೀತಿ ಮೇಲು ಎಂಬ ಚಿಂತನೆ ಅನುಷ್ಠಾನಕ್ಕೆ ಬರಲಿ ಎಂದು ಹೇಳಿದರು.

ಇದನ್ನೂ ಓದಿ :ಕರ್ನಾಟಕದಲ್ಲಿ ​ಬಿಜೆಪಿ ಪರ ಟ್ರೆಂಡ್, ಮತ್ತೆ ಗೆಲುವು ನಿಶ್ಚಿತ: ಅರುಣ್ ಸಿಂಗ್

ABOUT THE AUTHOR

...view details