ಕರ್ನಾಟಕ

karnataka

ETV Bharat / state

ಶುಕ್ರಗ್ರಹ ಅನ್ವೇಷಣೆಗೆ ಇಸ್ರೋ ಜೊತೆ ಸ್ವೀಡನ್ ಸಹಯೋಗ - Bengaluru tech summit -2020

ಬೆಂಗಳೂರು ತಂತ್ರಜ್ಞಾನ ಮೇಳ-2020 ರಲ್ಲಿ 'ಸುಸ್ಥಿರ ಭವಿಷ್ಯಕ್ಕಾಗಿ ಸ್ವೀಡನ್-ಭಾರತ ಬಾಹ್ಯಾಕಾಶ ತಂತ್ರಜ್ಞಾನ ಸಹಯೋಗ' ಸಂವಾದ ಕಾರ್ಯಕ್ರಮ ನಡೆಯಿತು. ಎರಡೂ ದೇಶಗಳ ಹಲವು ಪರಿಣತರು ಸಂವಾದದಲ್ಲಿ ಭಾಗವಹಿಸಿದ್ದರು.

India Sweden Conference on space technology
ಬೆಂಗಳೂರು ತಂತ್ರಜ್ಞಾನ ಮೇಳ-2020

By

Published : Nov 20, 2020, 11:13 PM IST

ಬೆಂಗಳೂರು : ಶುಕ್ರಗ್ರಹ ಅನ್ವೇಷಣೆಗಾಗಿ ಇಸ್ರೋ ಕೈಗೊಳ್ಳುತ್ತಿರುವ ಯೋಜನೆಯಲ್ಲಿ ಸ್ವೀಡನ್ ಕೈಜೋಡಿಸಲಿದೆ ಎಂದು ಸ್ವೀಡನ್ ರಾಯಭಾರಿ ಕ್ಲಾಸ್ ಮೊಲೀನ್ ತಿಳಿಸಿದ್ದಾರೆ.

ಬೆಂಗಳೂರು ತಂತ್ರಜ್ಞಾನ ಮೇಳ-2020 ರ 'ಸುಸ್ಥಿರ ಭವಿಷ್ಯಕ್ಕಾಗಿ ಸ್ವೀಡನ್-ಭಾರತ ಬಾಹ್ಯಾಕಾಶ ತಂತ್ರಜ್ಞಾನ ಸಹಯೋಗ' ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿರುವ ಭಾರತ ಹಾಗೂ ಸ್ವೀಡನ್ ದೇಶಗಳ ಸಹಯೋಗ ಇನ್ನಷ್ಟು ಬೆಳೆಯಲಿದೆ ಎಂದರು.

ಬಾಹ್ಯಾಕಾಶ ಕ್ಷೇತ್ರವು ಜಗತ್ತಿನಾದ್ಯಂತ ಹಲವು ದೇಶಗಳ ಅರ್ಥವ್ಯವಸ್ಥೆಗೆ ಕೊಡುಗೆ ನೀಡುತ್ತಿದೆ. ಇದು ಭಾರತದಲ್ಲೂ ಸಾಧ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಖಾಸಗಿ ಸಂಸ್ಥೆಗಳು ಪೂರೈಕೆದಾರರಷ್ಟೇ ಆಗಿ ಉಳಿಯದೆ ಮುಂದಿನ ದಿನಗಳಲ್ಲಿ ಇಸ್ರೋದ ಸಹ ಪ್ರಯಾಣಿಕರಾಗಿಯೂ ಬೆಳೆಯಲು ಈ ಕ್ರಮಗಳು ನೆರವಾಗಲಿವೆ ಎಂದು ಇಸ್ರೋದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್‌ನ ಮುಖ್ಯಸ್ಥ ಜಿ. ನಾರಾಯಣನ್ ಹೇಳಿದರು.

ಅನಗತ್ಯವಾಗಿ ಕಸ ಉತ್ಪಾದನೆಯಾಗದಂತೆ ತಡೆಯುವ 'ಸರ್ಕ್ಯುಲರ್ ಇಕಾನಮಿ' ಪರಿಕಲ್ಪನೆಗೆ ಗಗನಯಾನಿಗಳ ಜೀವನಶೈಲಿ ಅತ್ಯುತ್ತಮ ಉದಾಹರಣೆಯಾಗಿದೆ. ಅವರು ಇರುವ ಪರಿಸ್ಥಿತಿಯಲ್ಲಿ ಯಾವ ವಸ್ತುವೂ ವ್ಯರ್ಥವಾಗುವಂತೆಯೇ ಇಲ್ಲ. ಭೂಮಿಯ ಮೇಲೆ ವಾಸಿಸುವ ನಾವು ಇದರಿಂದ ಕಲಿಯಬೇಕಾದ್ದು ಬಹಳಷ್ಟಿದೆ. ಆಧುನಿಕ ನಗರಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸುವುದರಿಂದ ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂದು ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಅಂಬ್ಲಿಕಲ್ ಡಿಸೈನ್ ಸಿಇಓ ಸಿಸಿಲಿಯಾ ಹರ್ಟ್ಸ್ ಅಭಿಪ್ರಾಯಪಟ್ಟರು.

ಇಸ್ರೋ ಯೋಜಿಸುತ್ತಿರುವ 'ಗಗನಯಾನ' ಇಡೀ ದೇಶಕ್ಕೇ ಹೊಸ ಪ್ರೇರಣೆ ನೀಡಬಲ್ಲದು ಎಂದು ಸ್ವೀಡನ್​ನ ಗಗನಯಾನಿ ಪ್ರೊ. ಕ್ರಿಸ್ಟರ್ ಫ್ಯೂಗಲ್‌ಸಾಂಗ್ ಅಭಿಪ್ರಾಯಪಟ್ಟರು. ಎರಡೂ ದೇಶಗಳ ಹಲವು ಪರಿಣತರು ಸಂವಾದದಲ್ಲಿ ಭಾಗವಹಿಸಿದ್ದರು.

ABOUT THE AUTHOR

...view details