ಬೆಂಗಳೂರು:ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಭಾರತದಿಂದ STEM ಕ್ಷೇತ್ರಗಳಲ್ಲಿ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರ) ಉನ್ನತ ಸಾಧನೆ ಮಾಡಿದ 10,000 ನಿವೃತ್ತ ಶಿಕ್ಷಕರಿಂದ ಶಾಲಾ ಶಿಕ್ಷಕರಿಗೆ ತರಬೇತಿ ನೀಡಲು ವರ್ಷಕ್ಕೆ ಒಂದು ಬಿಲಿಯನ್ ಡಾಲರ್ ಖರ್ಚು ಮಾಡಬೇಕು ಎಂದು ಸಾಫ್ಟ್‌ವೇರ್ ಐಕಾನ್ ಎನ್‌ಆರ್ ನಾರಾಯಣ ಮೂರ್ತಿ ಸಲಹೆ ನೀಡಿದ್ದಾರೆ.
"ನಾವು ನಮ್ಮ ಶಿಕ್ಷಕರು ಮತ್ತು ಸಂಶೋಧಕರಿಗೆ ಉತ್ತಮ ಸೌಲಭ್ಯಗಳನ್ನು ನೀಡಬೇಕು. ಸರಿಯಾದ ಸಂಬಳ ಕೊಡಬೇಕು. ನಾವು ಅವರನ್ನು ಗೌರವಿಸಬೇಕು. ಅವರು ನಮ್ಮ ಯುವಜನತೆಗೆ ಮಾದರಿಯಾಗಿದ್ದಾರೆ. ಅದಕ್ಕಾಗಿಯೇ ನಾವು 2009ರಲ್ಲಿ ಇನ್ಫೋಸಿಸ್ ಪ್ರಶಸ್ತಿಯನ್ನು ಸ್ಥಾಪಿಸಿದ್ದೇವೆ. ಭಾರತದಲ್ಲಿ ಸಂಶೋಧನೆಯನ್ನು ಹೆಚ್ಚಿಸಲು ಇದು ನಮ್ಮ ಸಣ್ಣ ಕೊಡುಗೆಯಾಗಿದೆ" ಎಂದು ಅವರು ಹೇಳಿದರು.
ಠದೇಶದ 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಿಕ್ಷಕರಿಗೆ ತರಬೇತಿ ನೀಡಲು 2,500 'ಟ್ರೇನ್ ದಿ ಟೀಚರ್' ಕಾಲೇಜುಗಳನ್ನು ಸ್ಥಾಪಿಸಬೇಕು. ಶಿಕ್ಷಕರಿಗೆ ತರಬೇತಿ ಕೊಡುವ ಈ ಕಾಲೇಜುಗಳಿಗೆ 10,000 ನುರಿತ ಶಿಕ್ಷಕರನ್ನು ಆಹ್ವಾನಿಸುವುದು NEP ಯ (ರಾಷ್ಟ್ರೀಯ ಶಿಕ್ಷಣ ನೀತಿ) ಫಲಿತಾಂಶವನ್ನು ವೇಗಗೊಳಿಸುವ ಮಾರ್ಗವಾಗಿದೆ. ಈ ತರಬೇತಿ ಕಾರ್ಯಕ್ರಮವು ವರ್ಷಪೂರ್ತಿ ಇರಬೇಕು" ಎಂದು ಪತ್ರಿಕಾಗೋಷ್ಠಿಯಲ್ಲಿ ಮೂರ್ತಿ ತಿಳಿಸಿದರು. ಈ ಸಂದರ್ಭದಲ್ಲಿ ಇನ್ಫೋಸಿಸ್ ಸೈನ್ಸ್ ಫೌಂಡೇಶನ್ ಆರು ವಿಭಾಗಗಳಲ್ಲಿ ಇನ್ಫೋಸಿಸ್ ಪ್ರಶಸ್ತಿ - 2023 ಅನ್ನು ಘೋಷಿಸಿತು.
ಇದನ್ನೂ ಓದಿ:'ವರ್ಗ' ನಿರ್ಧರಿಸುವುದು ನೀವು ಮಾಡುವ ಕೆಲಸದಿಂದಲೇ ಹೊರತು ಹಣದಿಂದಲ್ಲ : ಸುಧಾ ಮೂರ್ತಿ