ಬೆಂಗಳೂರು:ಕಾಮುಕನೊಬ್ಬ ರೈಲಿನಲ್ಲಿ ನಿದ್ರಿಸುತ್ತಿದ್ದ ಯುವತಿಯನ್ನು ಮುಟ್ಟಿದ್ದಲ್ಲದೇ ಅಸಭ್ಯವಾಗಿ ವರ್ತಿಸಿ ವಿಕೃತಿ ಮೆರೆದ ಘಟನೆ ನಡೆದಿದೆ.
ರೈಲಿನಲ್ಲಿ ಯುವಕನ ಅಸಭ್ಯ ವರ್ತನೆ .. ಫೇಸ್ಬುಕ್ನಲ್ಲಿ ನೋವು ತೋಡಿಕೊಂಡ ಯುವತಿ - etv bharat
ಕಾಮುಕನೊಬ್ಬ ರೈಲಿನಲ್ಲಿ ನಿದ್ರಿಸುತ್ತಿದ್ದ ಯುವತಿ ಟಚ್ ಮಾಡಿದ ಯುವಕ ಅಸಭ್ಯವಾಗಿ ವರ್ತಿಸಿ ವಿಕೃತಿ ಮೆರೆದ ಘಟನೆ ನಡೆದಿದೆ.
ಮೇ 18ರ ಸಂಜೆ ಕಾಡುಗೋಡಿ ಬಳಿ ಚಲಿಸುತ್ತಿದ್ದ ರೈಲಿನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಯುವತಿಯು ಅಂದು ತನ್ನ ಕೆಲಸ ಮುಗಿಸಿಕೊಂಡು ರೈಲಿನಲ್ಲಿ ಹೋಗುತ್ತಿದ್ದಾಗ ಅದೇ ಬೋಗಿಯಲ್ಲಿದ್ದ ಕಾಮುಕ, ಅವಳು ನಿದ್ರೆಗೆ ಜಾರುತ್ತಿದ್ದಂತೆ ಆಕೆಯನ್ನು ಮುಟ್ಟಿ ವಿಕೃತಿ ಮೆರೆದಿದ್ದಾನೆ ಎನ್ನಲಾಗಿದೆ. ಇಷ್ಟಕ್ಕೇ ಸುಮ್ಮನಿರದ ಕಾಮುಕ, ತೀರಾ ಅಸಭ್ಯವಾಗಿ ವರ್ತಿಸಿದ್ದಾನಂತೆ. ಇದರಿಂದ ಗಾಬರಿಗೊಂಡ ಯುವತಿ, ತನ್ನ ಗೆಳತಿಯನ್ನ ಕರೆಯುತ್ತಿದ್ದಂತೆ ಕಾಮುಕ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ದೂರು ಕೊಡಲು ಠಾಣೆಯಿಂದ ಠಾಣೆಗೆ ಅಲೆದಾಡಿದ ಯುವತಿ, ತನ್ನ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಫೇಸ್ಬುಕ್ನಲ್ಲಿ ಅಳಲು ತೋಡಿಕೊಂಡಿದ್ದಾಳೆ. ಅಲ್ಲದೇ ಇದನ್ನು ರೈಲ್ವೆ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಸಚಿವಾಲಯಕ್ಕೆ ಯುವತಿ ಟ್ಯಾಗ್ ಕೂಡಾ ಮಾಡಿದ್ದಾಳೆ.