ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಆರ್ಭಟ ಹೇಗೆ ಇದೆ ಅನ್ನೋದು ಗೊತ್ತಿರುವ ವಿಷಯವೇ. ಕೇವಲ ಒಂದೇ ತಿಂಗಳಲ್ಲಿ ಇಡೀ ವಾತಾವರಣವೇ ಬದಲಾಗಿ ಹೋಗಿದೆ. ನೂರರಲ್ಲಿ ಇದ್ದ ಸೋಂಕಿತರ ಸಂಖ್ಯೆ ಇದೀಗ 50 ಸಾವಿರ ಗಡಿ ದಾಟಿಯಾಗಿದೆ. ಇದೊಂದು ರೀತಿಯ ಆತಂಕವಾದರೆ ಮತ್ತೊಂದು ಕಡೆ ರಾಜ್ಯದಲ್ಲಿ ಕೊರೊನಾ ಸಾವುಗಳು ಹೆಚ್ಚಾಗುತ್ತಿವೆ. ಅದು ಕೂಡ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುವ ಮುನ್ನವೇ ಮನೆಯಲ್ಲೇ ಪ್ರಾಣ ಬಿಡುವಂತಾಗಿದೆ.
ಇಷ್ಟಕ್ಕೂ ಇದಕ್ಕೆ ಕಾರಣ, ಆರಂಭದಲ್ಲೇ ಎಚ್ಚರ ವಹಿಸದ ಪರಿಣಾಮ ಸಾವುಗಳು ಹೆಚ್ಚಾಗುತ್ತಿವೆ. ರೋಗದ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಟೆಸ್ಟ್ ಮಾಡಿಸಿ ಚಿಕಿತ್ಸೆ ಪಡೆಯಬೇಕಿದೆ. ಇಲ್ಲದೇ ಹೋದರೆ ಸೋಂಕು ಗಂಭೀರ ಸ್ವರೂಪ ಪಡೆದುಕೊಳ್ಳಲ್ಲಿದೆ. ಆಕ್ಸಿಜನ್ ಸ್ಯಾಚುರೇಷನ್ ಕಡಿಮೆ ಆಗೋಕೆ ಶುರುವಾಗಿ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಮೃತರಾಗುತ್ತಿದ್ದಾರೆ.
ಕೊರೊನಾ ಸಾವಿನ "ಮನೆ":
ದಿನಾಂಕ | ಮನೆಯಲ್ಲಿ ಸಾವು | ಮಾರ್ಗಮಧ್ಯೆ ಸಾವು |
ಮೇ 1 | 15 | 3 |
ಮೇ 2 | 02 | 03 |
ಮೇ 3 | 02 | 03 |
ಮೇ 4 | 11 | 08 |
ಮೇ 5 | 00 | 14 |
ಮೇ 6 | 51 | 03 |
ಮೇ 7 | 58 | 11 |
ಒಟ್ಟು | 139 | 45 |