ಕರ್ನಾಟಕ

karnataka

ETV Bharat / state

ಕೋವಿಡ್‌ ಮರಣ ಮೃದಂಗ - ವಿದ್ಯುತ್​ ಚಿತಾಗಾರಗಳಲ್ಲಿ ಹೆಚ್ಚಿದ ಕೆಲಸದೊತ್ತಡ - latest hyc news

ಕೋವಿಡ್​ ಪ್ರಕರಣಗಳ ಜತೆಗೆ ಮೃತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅಂತ್ಯ ಸಂಸ್ಕಾರ ನಡೆಸುವುದೇ ಕಷ್ಟಕರವಾಗಿದೆ. ‌ಅನೇಕ ಕಡೆಗಳಲ್ಲಿ ವಿದ್ಯುತ್​ ಚಿತಾಗಾರಗಳು ಕಾರ್ಯಾಚರಣೆ ನಡೆಸುತ್ತಿದೆ. ಮೃತರ ಸಂಖ್ಯೆ ಏರುತ್ತಿರುವುದರಿಂದ ಅವುಗಳ ಮೇಲೂ ತೀವ್ರ ಸ್ವರೂಪದ ಒತ್ತಡವಿದೆ. ಇನ್ನೂ ಕೆಲವೆಡೆ ವಿದ್ಯುತ್​ ಚಿತಾಗಾರಗಳಿಲ್ಲದೇ ಅಂತ್ಯಕ್ರಿಯೆಗೆ ಸಮಸ್ಯೆಯಾಗಿದೆ.

Increased work pressure on electric cemetery
ವಿದ್ಯುತ್​ ಚಿತಾಗಾರಗಳಲ್ಲಿ ಹೆಚ್ಚಿದ ಕೆಲಸದೊತ್ತಡ

By

Published : May 17, 2021, 9:59 PM IST

ಬೆಂಗಳೂರು/ಬೆಳಗಾವಿ/ಮೈಸೂರು: ಕೋವಿಡ್​​ಗೆ ತುತ್ತಾಗಿ ಪ್ರಾಣ ಕಳೆದುಕೊಂಡವರು ಅದೆಷ್ಟೋ ಮಂದಿ. ಕೋವಿಡ್​ ಸೃಷ್ಟಿಸಿರುವ ಸಮಸ್ಯೆಗಳ ನಡುವೆ ಇದೀಗ ಚಿತಾಗಾರಗಳ ಸಮಸ್ಯೆಯೂ ಉದ್ಬವಿಸಿದೆ. ಮೃತರ ಸಂಖ್ಯೆ ಒಂದೇ ಸಮನೆ ಏರ್ತಿರೋದ್ರಿಂದ ವಿದ್ಯುತ್​ ಚಿತಾಗಾರಗಳಲ್ಲಿ ದಿನದ 24 ಗಂಟೆಗಳೂ ಕೆಲಸ ಮಾಡಬೇಕಿದೆ. ಬೆಂಗಳೂರಿನಲ್ಲಿ ಕೋವಿಡ್​ ತಾಂಡವವಾಡುತ್ತಿದ್ದು, ಮೃತರ ಸಂಖ್ಯೆ ಹೆಚ್ಚಿದೆ. ಇದ್ರಿಂದ ಕೋವಿಡ್ ವಿದ್ಯುತ್ ಚಿತಾಗಾರಗಳು ಹಾಗೂ ತಾತ್ಕಾಲಿಕ ಚಿತಾಗಾರಗಳ ಮೇಲೆ ತೀವ್ರ ಕೆಲಸದೊತ್ತಡವಿದೆ. ಚಿತಾಗಾರಗಳ ಎದುರು ಕ್ಯೂ ನಿಂತು ಅಂತ್ಯಕ್ರಿಯೆ ಕೈಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿದ್ಯುತ್​ ಚಿತಾಗಾರಗಳಲ್ಲಿ ಹೆಚ್ಚಿದ ಕೆಲಸದೊತ್ತಡ

ಮೈಸೂರು ಜಿಲ್ಲೆಯ ವಿಜಯನಗರದ 4ನೇ ಹಂತದ ಮುಕ್ತಿಧಾಮದಲ್ಲಿ 2 ವಿದ್ಯುತ್ ಚಿತಾಗಾರ, 1 ಅನಿಲ ಚಿತಾಗಾರವಿದ್ದು, ಆಯಾ ಧರ್ಮಗಳ ಪದ್ಧತಿಗೆ ಅನುಗುಣವಾಗಿ ಅಂತ್ಯಸಂಸ್ಕಾರ ನೆರವೇರಿಸುಲ ವ್ಯವಸ್ಥೆ ಇದೆ. ಪರಿಸ್ಥಿತಿ ಮತ್ತಷ್ಟು ಹದಗೆಟ್ಟು ಮೃತಪಟ್ಟವರ ಪ್ರಕರಣಗಳು ಹೆಚ್ಚಾದ್ರೆ, ಅದಕ್ಕಾಗಿಯೇ ಉರುವಲು ಚಿತಾಗಾರದ ವ್ಯವಸ್ಥೆಯೂ ಇದೆ ಎನ್ನುತ್ತಾರೆ ಪಾಲಿಕೆ ಆಯುಕ್ತರು.

ವಿದ್ಯುತ್​ ಚಿತಾಗಾರಗಳಲ್ಲಿ ಹೆಚ್ಚಿದ ಕೆಲಸದೊತ್ತಡ

ಸ್ಮಾರ್ಟ್‍ಸಿಟಿ ಹಾಗೂ ಅಮೃತ್ ಸಿಟಿಯಂತಹ ಯೋಜನೆಗಳಿಗೆ ಬೆಳಗಾವಿ ಒಳಪಟ್ಟರೂ ಕೂಡ ಇಲ್ಲಿ ಒಂದೇ ಒಂದು ವಿದ್ಯುತ್ ಚಿತಾಗಾರವಿಲ್ಲ. ಸೌದೆಯ ಮೂಲಕವೇ ಅಂತ್ಯಸಂಸ್ಕಾರ ನಡೆಸಲಾಗುತ್ತಿದ್ದು, ವಾಯುಮಾಲಿನ್ಯ ಹೆಚ್ಚಾಗಿದೆ ಎಂದು ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಅಂತ್ಯಕ್ರಿಯೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಮಶಾನಗಳ ಎದುರು ಮೃತದೇಹ ಹಿಡಿದು ಕಾಯುವ ದಯನೀಯ ಪರಿಸ್ಥಿತಿ ನೋಡಲು ಸಾಧ್ಯವಿಲ್ಲ.

ಇದನ್ನೂ ಓದಿ: ಮೃತದೇಹ ದಹನಕ್ಕೂ ಎದುರಾದ ಸವಾಲುಗಳು; ಉರುವಲಿಗೆ ಹೆಚ್ಚಿತು ಬೇಡಿಕೆ

ವಿದ್ಯುತ್ ಚಿತಾಗಾರಗಳಲ್ಲಿ ಮೃತದೇಹ ಬೇಗ ದಹಿಸುತ್ತದೆಯಾದ್ರೂ ಜನರು ಕಟ್ಟಿಗೆಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ವಿದ್ಯುತ್ ಚಿತಾಗಾರಗಳ ಕೊರತೆಯೂ ಕೂಡ ಕೆಲ ಸಮಸ್ಯೆಗಳನ್ನು ಸೃಷ್ಟಿಸಿದೆ. ಸಾವಿನ ಪ್ರಮಾಣ ತಗ್ಗುವವರೆಗೂ ಇಂತಹ ಸಮಸ್ಯೆಗಳು ತಪ್ಪಿದ್ದಲ್ಲ. ಹಾಗಾಗಿ ಸೋಂಕು ನಿಯಂತ್ರಣಕ್ಕೆ ಸರ್ಕಾರಕ್ಕೆ ಸಾರ್ವಜನಿಕರ ಸಹಕಾರ ಅತಿ ಅಗತ್ಯ.

ABOUT THE AUTHOR

...view details