ಬೆಂಗಳೂರು:ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಬಾಕಿ ಉಳಿದಿರುವ 24 ಸಚಿವ ಸ್ಥಾನಗಳಿಗೆ 80ಕ್ಕೂ ಹೆಚ್ಚು ಶಾಸಕರಿಂದ ಲಾಬಿ ಆರಂಭವಾಗಿದೆ. ದಿನಕ್ಕೊಬ್ಬರು ಸಿ ಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಹೈಕಮಾಂಡ್ ನಾಯಕರ ಮನೆ ಮುಂದೆ ತಮ್ಮದೇ ಆದ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ.
ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರಲ್ಲಿ ಪ್ರಮುಖರಲ್ಲಿ ಸದ್ಯ ಕೆ ಜೆ ಜಾರ್ಜ್, ಎಂ. ಬಿ. ಪಾಟೀಲ್, ಜಮೀರ್ ಅಹ್ಮದ್ ಖಾನ್, ಸತೀಶ್ ಜಾರಕಿಹೊಳಿ ಸಚಿವರಾಗಿದ್ದಾರೆ. ಆದರೆ ಪಟ್ಟಿ ಇನ್ನೂ ದೊಡ್ಡದಿದೆ. ಎಚ್. ಸಿ. ಮಹದೇವಪ್ಪ, ಬಸವರಾಜ ರಾಯರೆಡ್ಡಿ, ದಿನೇಶ್ ಗುಂಡೂರಾವ್, ಈ ತುಕಾರಾಂ, ರಹೀಮ್ ಖಾನ್, ಎಸ್ ಎಸ್ ಮಲ್ಲಿಕಾರ್ಜುನ, ಕೆ ಎಂ. ಶಿವಲಿಂಗೇಗೌಡ, ಈಶ್ವರ ಖಂಡ್ರೆ, ಅಜಯ್ ಸಿಂಗ್, ಕೃಷ್ಣ ಬೈರೇಗೌಡ, ವಿನಯ್ ಕುಲಕರ್ಣಿ, ಯು. ಟಿ. ಖಾದರ್, ಸಂತೋಷ್ ಲಾಡ್, ವಿಜಯಾನಂದ ಕಾಶಪ್ಪನವರ್, ಕೆ. ಎನ್. ರಾಜಣ್ಣ, ಶಾಮನೂರು ಶಿವಶಂಕರಪ್ಪ , ಎಂ ಕೃಷ್ಣಪ್ಪ, ಕೆ ಎನ್ ರಾಜಣ್ಣ, ಶಿವರಾ ತಂಗಡಗಿ, ಶ್ರೀನಿವಾಸ್ ಮಾನೆ, ರಿಜ್ವಾನ್ ಅರ್ಷದ್, ಎಚ್.ವೈ. ಮೇಟಿ ಇದ್ದಾರೆ.
ಇನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರಲ್ಲಿ ಪ್ರಮುಖರೆಂದರೆ, ಲಕ್ಷ್ಮಿ ಹೆಬ್ಬಾಳ್ಕರ್, ತನ್ವೀರ್ ಸೇಠ್, ಮಧು ಬಂಗಾರಪ್ಪ, ಕುಣಿಗಲ್ ರಂಗನಾಥ್, ಸಲೀಂ ಅಹ್ಮದ್, ಎನ್. ಎ. ಹ್ಯಾರೀಸ್ ಹಾಗೂ ಪೊನ್ನಣ್ಣ ಇದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬೀರುತ್ತಿರುವವರಲ್ಲಿ ಡಾ ಜಿ ಪರಮೇಶ್ವರ್, ಕೆ ಎಚ್ ಮುನಿಯಪ್ಪ, ರಾಮಲಿಂಗ ರೆಡ್ಡಿ ಹಾಗೂ ಪ್ರಿಯಾಂಕ್ ಖರ್ಗೆ ಸಚಿವರಾಗಿದ್ದಾರೆ. ಉಳಿದಂತೆ ಬಿ. ಕೆ. ಹರಿಪ್ರಸಾದ್, ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ಕಾಯುತ್ತಿದ್ದಾರೆ.