ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಕಾಲಿಟ್ಟ ಮೊದ ಮೊದಲು ವಿದೇಶಿ ಸೋಂಕಿತರ ಸಂಖ್ಯೆ ಹೆಚ್ಚಿತ್ತು. ಇದಾದ ಬಳಿಕ ಸ್ವಲ್ಪ ನಿಯಂತ್ರಣದಲ್ಲಿತ್ತು. ಆದರೆ ಮೈಸೂರು ಜಿಲ್ಲೆಯ ನಂಜನಗೂಡಿನ ಫಾರ್ಮಾಸಿಟಿಕಲ್ ಕಂಪನಿಯಲ್ಲಿ ಯಾವಾಗ ಕೊರೊನಾ ಪತ್ತೆ ಆಯಿತೋ ಆಗಿನಿಂದ ಸೋಂಕಿನ ಮೂಲ ನಿಗೂಢವಾಗಿಯೇ ಉಳಿದಿದೆ.
ಕಂಪನಿಗೆ ವಿದೇಶಿಯರು ಬಂದಿದ್ದು, ಅವರಿಂದ ಹರಡಿರಬಹುದು ಎಂದು ಅಂದಾಜಿಸಲಾಗಿತ್ತು. ಹೀಗಾಗಿ ನಂಜನಗೂಡಿನ ಕಂಪನಿಗೆ ಬಂದಿದ್ದ ವಿದೇಶಿಯರ ಬಗ್ಗೆ ಮಾಹಿತಿ ಕೋರಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿತ್ತು. ಇದಕ್ಕೆ ವಿದೇಶಾಂಗ ಸಚಿವಾಲಯ ಉತ್ತರ ನೀಡಿದ್ದು, 10 ಜನರಲ್ಲಿ 9 ಜನರನ್ನು ಸಂಪರ್ಕ ಮಾಡಲಾಗಿದೆ. ಎಲ್ಲಾ 9 ಜನರಿಗೂ ಯಾವುದೇ ಸೋಂಕು ಇಲ್ಲ. ಅವರೆಲ್ಲ ಆರೋಗ್ಯದಿಂದಿದ್ದಾರೆ. ಆದರೆ ಜರ್ಮನಿಯ ಸ್ಟೆಫನಿ ಒಬ್ಬರನ್ನು ಹೊರತುಪಡಿಸಿ ಎಲ್ಲರನ್ನೂ ಸಂಪರ್ಕ ಮಾಡಲಾಗಿದೆ ಎಂದು ತಿಳಿಸಿದೆ.
ಜುಬಿಲಂಟ್ನಲ್ಲೇ ಅತಿ ಹೆಚ್ಚು ಸೋಂಕಿತರು:
ನಂಜನಗೂಡಿನ ಬಳಿ ಇರುವ ಜುಬಿಲಂಟ್ ಜನರಿಕ್ ಫಾರ್ಮಾಸಿಟಿಕಲ್ ಕಂಪನಿಯ ನೌಕರರು ಹಾಗೂ ಅವರ ಕುಟುಂಬ ವರ್ಗದ 62 ಜನರಲ್ಲಿ ಇಲ್ಲಿಯವರೆಗೆ ಸೋಂಕು ಇರುವುದು ದೃಢಪಟ್ಟಿದ್ದು, ಉಳಿದ 8 ಮಂದಿ ತಬ್ಲಿಘಿ ಜಮಾಅತ್ ಸಂಪರ್ಕ ಹೊಂದಿದ್ದವರು. ಇನ್ನು 2 ಮಂದಿ ವಿದೇಶಿ ಪ್ರವಾಸದ ಹಿನ್ನಲೆ ಹೊಂದಿದ್ದರೆ ಮತ್ತೊಂದು ದೇಶದಿಂದ ಮರಳಿದವರ ನಂಟು ಹೊಂದಿದವರಾಗಿದ್ದಾರೆ. ಕೊನೆಯದಾಗಿ ಒಬ್ಬ ವೃದ್ಧನ ಕುಟುಂಬದ ಮೂರು ಜನರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ.
ಅವರೆಲ್ಲರಲ್ಲಿ ಕೊರೊನಾ ಗುಣಲಕ್ಷಣಗಳು ಕಾಣದ ಹಿನ್ನೆಲೆಯಲ್ಲಿ ವೈದ್ಯಕೀಯ ಚಿಕಿತ್ಸೆ ಕೊಡಿಸುವ ಪ್ರಸಂಗವೇ ಕಂಡು ಬಂದಿಲ್ಲವೆಂದು ಕೇಂದ್ರ ಸರ್ಕಾರದಿಂದ ಮಾಹಿತಿ ರವಾನೆಯಾಗಿದೆ. ಅಲ್ಲಿಗೆ ನಂಜನಗೂಡಿನ ಪ್ರಕರಣಗಳಿಗೆ ವಿದೇಶಿಯರ ಭೇಟಿ ಬಹುತೇಕ ಕಾರಣವಲ್ಲವಾ? ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಸುರೇಶ್ ಕುಮಾರ್, ಈ ವಿದೇಶಿಯರಿಗೆ ಪಾಸಿಟಿವ್ ಬಾರದೆ ಇರಬಹುದು. ಆದರೆ ಇವರೆಲ್ಲರು ಕ್ಯಾರಿಯರ್ಸ್ ಇರಬಹುದು. ರೋಗ ನಿರೋಧಕ ಶಕ್ತಿ ಹೆಚ್ಚು ಇರುವುದರಿಂದ ರೋಗ ಲಕ್ಷಣಗಳು ಕಾಣದೆ ಇರಬಹುದು ಎಂದು ತಿಳಿಸಿದ್ದಾರೆ.
ಸೊಂಕಿತರ ಟ್ರಾವೆಲ್ ಹಿಸ್ಟರಿ-(372-384)
- ರೋಗಿ-372 : ಬಾಗಲಕೋಟೆಯ 32 ವರ್ಷದ ವ್ಯಕ್ತಿಗೆ ಸೋಂಕು. P-263 ಸಂಪರ್ಕ ಹೊಂದಿದ್ದು, ಬಾಗಲಕೋಟೆಯಲ್ಲಿ ಚಿಕಿತ್ಸೆ
- ರೋಗಿ-373 : ಬಾಗಲಕೋಟೆಯ 32 ವರ್ಷದ ವ್ಯಕ್ತಿಗೆ ಸೋಂಕು. P-263 ಸಂಪರ್ಕ ಹೊಂದಿದ್ದು, ಬಾಗಲಕೋಟೆಯಲ್ಲಿ ಚಿಕಿತ್ಸೆ
- ರೋಗಿ-374 : ವಿಜಯಪುರದ 42 ವರ್ಷದ ವ್ಯಕ್ತಿಗೆ ಸೋಂಕು. P-306 ರ ಸಂಪರ್ಕ ಹೊಂದಿದ್ದು, ವಿಜಯಪುರದಲ್ಲಿ ಚಿಕಿತ್ಸೆ ಮುಂದುವರಿದಿದೆ
- ರೋಗಿ-375: ನಂಜನಗೂಡು ಮೈಸೂರು ನಿವಾಸಿ 26ವರ್ಷದ ಮಹಿಳೆಗೆ ಸೋಂಕು. P-52 ರ ದ್ವಿತೀಯ ಸಂಪರ್ಕ (ಪತ್ನಿ) ಮೈಸೂರಿನಲ್ಲಿ ಚಿಕಿತ್ಸೆ
- ರೋಗಿ-376: ಬೆಂಗಳೂರಿನ 55 ವರ್ಷದ ಮಹಿಳೆಗೆ ಸೋಂಕು.P-167 ರ ಸಂಪರ್ಕ ಬೆಂಗಳೂರಿನಲ್ಲಿ ಚಿಕಿತ್ಸೆ
- ರೋಗಿ-378: ಬೆಂಗಳೂರಿನ 21 ವರ್ಷದ ಯುವತಿಗೆ ಕೊರೊನಾ. P-167 ರ ಸಂಪರ್ಕ, ಬೆಂಗಳೂರಿನಲ್ಲಿ ಚಿಕಿತ್ಸೆ
- ರೋಗಿ-379: ಬಾಗಲಕೋಟೆ 43 ವರ್ಷದ ವ್ಯಕ್ತಿಗೆ ಸೋಂಕು. P-263 ಸಂಪರ್ಕ ಹೊಂದಿದ್ದು, ಬಾಗಲಕೋಟೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
- ರೋಗಿ-380 : ಬಾಗಲಕೋಟೆ 43 ವರ್ಷದ ವ್ಯಕ್ತಿಗೆ ಸೋಂಕು.P-263 ಸಂಪರ್ಕ ಹೊಂದಿದ್ದು, ಬಾಗಲಕೋಟೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
- ರೋಗಿ-381 :ಬಾಗಲಕೋಟೆ 47 ವರ್ಷದ ವ್ಯಕ್ತಿಗೆ ಸೋಂಕು.ಬಾಗಲಕೋಟೆ ಯಲ್ಲಿ ಚಿಕಿತ್ಸೆ ಪ್ರಗತಿಯಲ್ಲಿದೆ
- ರೋಗಿ-382: ನಂಜನಗೂಡು ಮೈಸೂರು ನಿವಾಸಿ 30 ವರ್ಷದ ವ್ಯಕ್ತಿಗೆ ಸೋಂಕು.P-52 ರ ದ್ವಿತೀಯ ಸಂಪರ್ಕಿತರಿಗೆ ಮೈಸೂರಿನಲ್ಲಿ ಚಿಕಿತ್ಸೆ
- ರೋಗಿ-383 : ನಂಜನಗೂಡು ಮೈಸೂರು ನಿವಾಸಿ 36 ವರ್ಷದ ವ್ಯಕ್ತಿಗೆ ಸೋಂಕು. P-52 ರ ದ್ವಿತೀಯ ಸಂಪರ್ಕಿತರಿಗೆ ಮೈಸೂರಿನಲ್ಲಿ ಚಿಕಿತ್ಸೆ
- ರೋಗಿ-384 : ನಂಜನಗೂಡು ಮೈಸೂರು ನಿವಾಸಿ 28 ವರ್ಷದ ವ್ಯಕ್ತಿಗೆ ಸೋಂಕು. P-52 ರ ದ್ವಿತೀಯ ಸಂಪರ್ಕಿತರಿಗೆ ಮೈಸೂರಿನಲ್ಲೇ ಚಿಕಿತ್ಸೆ
ಜಿಲ್ಲಾವಾರು ಕೋವಿಡ್-19 ಮಾಹಿತಿ:
- ಬೆಂಗಳೂರು - 89 ಪ್ರಕರಣ
- ಮೈಸೂರು - 80 ಪ್ರಕರಣ
- ದಕ್ಷಿಣ ಕನ್ನಡ - 12 ಪ್ರಕರಣ
- ಬೆಳಗಾವಿ - 42 ಪ್ರಕರಣ
- ಉತ್ತರ ಕನ್ನಡ - 11 ಪ್ರಕರಣ
- ಚಿಕ್ಕಬಳ್ಳಾಪುರ - 16 ಪ್ರಕರಣ
- ಕಲಬುರಗಿ - 22 ಪ್ರಕರಣ
- ಬೆಂಗಳೂರು ಗ್ರಾಮಾಂತರ - 12 ಪ್ರಕರಣ
- ಬೀದರ್ - 14 ಪ್ರಕರಣ
- ದಾವಣಗೆರೆ - 7 ಪ್ರಕರಣ
- ಉಡುಪಿ - 3 ಪ್ರಕರಣ
- ಬಳ್ಳಾರಿ - 13 ಪ್ರಕರಣ
- ಕೊಡಗು - 1 ಪ್ರಕರಣ
- ಧಾರವಾಡ - 7 ಪ್ರಕರಣ
- ತುಮಕೂರು - 2 ಪ್ರಕರಣ
- ಬಾಗಲಕೋಟೆ - 21ಪ್ರಕರಣ
- ಮಂಡ್ಯ - 12 ಪ್ರಕರಣ
- ಗದಗ - 3 ಪ್ರಕರಣ
- ವಿಜಯಪುರ - 21 ಪ್ರಕರಣ
- ಚಿತ್ರದುರ್ಗ- 1 ಪ್ರಕರಣ