ಬೆಂಗಳೂರು: ಅಯೋಧ್ಯಾ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಕೂಡ ಸಮಾರಂಭಗಳನ್ನು ನಡೆಸಿ ಜನವರಿ 22 ರಂದು ಸಂಭ್ರಮಿಸಲು ರಾಮನ ಭಕ್ತರು ತಯಾರಿ ನೆಡೆಸಿದ್ದಾರೆ. ಇದರಿಂದ ನಗರದಲ್ಲಿ ಶ್ರೀರಾಮನ ಚಿತ್ರವಿರುವ ಬಂಟಿಂಗ್ಸ್, ಬಾವುಟ, ಶಾಲುಗಳು, ಟಿ ಶರ್ಟ್ ಸೇರಿದಂತೆ ಹಲವು ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿರುವುದು ಕಂಡು ಬರುತ್ತಿದೆ.
ರಾಜಧಾನಿ ಬೆಂಗಳೂರಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಎಲ್ಲ ಬಡಾವಣೆಗಳನ್ನು ಕೇಸರಿಮಯ ಮಾಡಲು ರಾಮನ ಭಕ್ತರು ಸಜ್ಜಾಗಿದ್ದಾರೆ. ಎಲ್ಲಡೆ ರಾಮನ ಚಿತ್ರ ಇರುವ ಕೇಸರಿ ಬಾವುಟಗಳನ್ನ ಹಾಕಿ, ಅದ್ಧೂರಿ ಆಚರಣೆ ಮಾಡಲು ಉತ್ಸುಕರಾಗಿದ್ದಾರೆ. ಕೇಸರಿ ಶಾಲು, ಶ್ರೀರಾಮನ ಭಾವಚಿತ್ರವಿರುವ ಬಂಟಿಗ್ಗಳನ್ನು ಕೊಂಡು ಕೊಳ್ಳಲು ಮುಂದಾಗಿದ್ದಾರೆ. ಆದ್ದರಿಂದ ಬಂಟಿಂಗ್ಸ್, ಬಾವುಟ, ಶಾಲುಗಳು, ಟಿ ಶರ್ಟ್ ಮಾರಾಟ ಮಾಡುವ ವರ್ತಕರು ಸಂಘ ಸಂಸ್ಥೆಗಳಿಂದ ದಿನಕ್ಕೆ 50 ಸಾವಿರಕ್ಕೂ ಹೆಚ್ಚಿನ ಆರ್ಡರ್ಗಳನ್ನು ತೆಗದುಕೊಳ್ಳುತ್ತಿದ್ದಾರೆ.
ಹುಬ್ಬಳ್ಳಿ, ಬೆಳಗಾವಿ, ಬೀದರ್, ಗುಲ್ಬರ್ಗಾ, ಚಾಮರಾಜನಗರ, ಮೈಸೂರು ಜಿಲ್ಲೆ ಸೇರಿದಂತೆ. ಕರ್ನಾಟಕದ ಹಲವು ಜಿಲ್ಲೆಗಳಿಂದ ರಾಮನ ಭಾವಚಿತ್ರವಿರುವ ಧ್ವಜ ಹಾಗೂ ಶಾಲುಗಳಿಗೆ ಅಡ್ವಾನ್ಸ್ ಬುಕ್ಕಿಂಗ್ ಆರ್ಡರ್ಗಳು ವರ್ತಕರಿಗೆ ಬಂದಿವೆ. ಆರ್ಡರ್ ಕೊಟ್ಟ ಗ್ರಾಹಕರಿಗೆ, ಟ್ರಾನ್ಸ್ಪೋರ್ಟ್ ವ್ಯವಸ್ಥೆಯನ್ನೂ ಸಹ ಮಾಡಿಕೊಡುತ್ತಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಹಬ್ಬದಂತೆ ಆಚರಣೆ ಮಾಡಲು ಜನ ತುದಿಗಾಲಲ್ಲಿ ನಿಂತಿರುವ ವಾತಾವರಣ ಕಾಣಸಿಗುತ್ತಿದೆ.