ಕರ್ನಾಟಕ

karnataka

ETV Bharat / state

500ರ ಗಡಿ ದಾಟಿದ ಕೊರೊನಾ‌ ಸೋಂಕಿತರ ಸಂಖ್ಯೆ: ಬೆಂಗಳೂರಲ್ಲಿ 80 ಸಕ್ರಿಯ ಪ್ರಕರಣಗಳು - coronavirus cases in Karnataka

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮಹಾಮಾರಿ ಕೊರೊನಾಗೆ ಬೆಂಗಳೂರು ತತ್ತರಿಸಿದ್ದು, ನಗರವೊಂದರಲ್ಲೇ 80 ಸಕ್ರಿಯ ಪ್ರಕರಣಗಳು ದಾಖಲಾಗಿವೆ.

Increase of coronavirus cases in Karnataka
ಸಾಂದರ್ಭಿಕ ಚಿತ್ರ

By

Published : Apr 25, 2020, 7:03 PM IST

ಬೆಂಗಳೂರು:ರಾಜ್ಯದಲ್ಲಿ ಇಂದು ಹೊಸ 26 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 500ರ ಗಡಿದಾಟಿದೆ. ಬೆಂಗಳೂರಿನಲ್ಲೇ 133 ಸೋಂಕಿತರ ಪೈಕಿ, 49 ಜನರು ಗುಣಮುಖರಾಗಿ ಡಿಸ್ಜಾರ್ಜ್ ಆಗಿದ್ದರೆ, 80 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಈವರೆಗೆ ನಾಲ್ವರು‌ ಕೊರೊನಾಗೆ ಮೃತಪಟ್ಟಿದ್ದಾರೆ.‌ 500 ಸೋಂಕಿತರ ಪೈಕಿ 324 ವ್ಯಕ್ತಿಗಳಲ್ಲಿ ಒಬ್ಬರು‌ ಗರ್ಭಿಣಿಯಾಗಿದ್ದು, 7 ಜನರನ್ನ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಟ್ರಾವೆಲ್​ ಹಿಸ್ಟರಿ ಹೀಗಿದೆ:

  • ರೋಗಿ-490: ಬೆಂಗಳೂರಿನ 52 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, p-419ರ ದ್ವಿತೀಯ ಸಂಪರ್ಕ ಹೊಂದಿದ್ದಾಳೆ ಎನ್ನಲಾಗುತ್ತಿದೆ. ಈ ಮಹಿಳೆಗೆ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
  • ರೋಗಿ-491: ಬೆಂಗಳೂರಿನ 6 ವರ್ಷದ ಗಂಡು ಮಗುವಿಗೂ ಸೋಂಕು ತಗುಲಿದೆ. ‌p-419ರ ದ್ವಿತೀಯ ಸಂಪರ್ಕ ಹೊಂದಿದ್ದು, ಮಗುವಿಗೆ ಬೆಂಗಳೂರಿನಲ್ಲಿಯೇ ಚಿಕಿತ್ಸೆ ಕೊಡಿಸಲಾಗುತ್ತಿದೆ.
  • ರೋಗಿ-492: ಬೆಂಗಳೂರಿನ 90 ವರ್ಷದ ವೃದ್ಧನಲ್ಲಿ ಸೋಂಕು ಕಾಣಿಸಿಕೊಂಡಿದೆ. ‌p-419ರ ದ್ವಿತೀಯ ಸಂಪರ್ಕದಿಂದ ಸೋಂಕು ತಗುಲಿದೆ ಎನ್ನಲಾಗುತ್ತಿದೆ. ಇವರು ಸಹ ಬೆಂಗಳೂರಿನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
  • ರೋಗಿ-493:ಬೆಂಗಳೂರಿನ 27 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದ್ದು, ‌p-419ರ ದ್ವಿತೀಯ ಸಂಪರ್ಕ ಹೊಂದಿದ್ದಾಳೆ. ಮಹಿಳೆಗೆ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
  • ರೋಗಿ-494: ಹಿರೇಬಾಗೇವಾಡಿಯ (ಬೆಳಗಾವಿ) 20 ವರ್ಷದ ಯುವಕನಿಗೆ ಸೋಂಕು ಕಾಣಿಸಿಕೊಂಡಿದ್ದು, P-128ರ ದ್ವಿತೀಯ ಸಂಪರ್ಕದಿಂದ ಸೋಂಕು ಹರಡಿದೆ. ಬೆಳಗಾವಿಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
  • ರೋಗಿ-495: ಹಿರೇಬಾಗೇವಾಡಿಯ ಮತ್ತೊಬ್ಬ 8 ವರ್ಷದ ಬಾಲಕನಲ್ಲಿ ಸೋಂಕು ಪತ್ತೆಯಾಗಿದೆ. P-128ರ ದ್ವಿತೀಯ ಸಂಪರ್ಕ ಹೊಂದಿದ್ದಾನೆ. ಬೆಳಗಾವಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
  • ರೋಗಿ-496: ಹಿರೇಬಾಗೇವಾಡಿಯ ಮತ್ತೊಬ್ಬ 30 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, P-128ರ ದ್ವಿತೀಯ ಸಂಪರ್ಕ ಹೊಂದಿದ್ದಾರೆ. ಬೆಳಗಾವಿಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
  • ರೋಗಿ-497: ನಂಜನಗೂಡಿನ 50 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, p-382ರ ಸಂಪರ್ಕ ಇದೆ. ಇವರು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
  • ರೋಗಿ-498: ಬೆಂಗಳೂರಿನ 27 ವರ್ಷದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದ್ದು, P-465ರ ಸಂಪರ್ಕ ಇದೆ. ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
  • ರೋಗಿ-499: 27 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ‌P-465 ರ ಸಂಪರ್ಕ ಹೊಂದಿದ್ದಾನೆ. ಇವರು ಬೆಂಗಳೂರಿನವರಾಗಿದ್ದು ಇಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
  • ರೋಗಿ-500: 66 ವರ್ಷದ ವೃದ್ಧನಲ್ಲಿ ಸೋಂಕು ಪತ್ತೆಯಾಗಿದ್ದು, ‌P-465 ರ ಸಂಪರ್ಕ ಇದೆ. ಇವರು ಸಹ ಬೆಂಗಳೂರಿನವರೇ ಆಗಿದ್ದು ಇಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details