ಬೆಂಗಳೂರು: ಕೋವಿಡ್ ಲಾಕ್ಡೌನದಿಂದ ಮಂಕಾಗಿದ್ದ ಆಸ್ತಿ ನೋಂದಣಿ ಇದೀಗ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದೆ. ಹಣ ದುಬ್ಬರ, ದುಬಾರಿ ಬಡ್ಡಿದರ, ಅನಿಶ್ಚಿತತೆಯ ಹೊರತಾಗಿಯೂ ಪ್ರಸಕ್ತ 2022-23 ಸಾಲಿನಲ್ಲಿ ರಾಜ್ಯಾದ್ಯಂತ ಆಸ್ತಿ ಪತ್ರಗಳ ನೋಂದಣಿ ಪ್ರಮಾಣ ಗಣನೀಯ ಏರುಗತಿಯಲ್ಲಿದೆ.
ಕೋವಿಡ್ ಎಫೆಕ್ಟ್:ಕೋವಿಡ್ ದಿಂದಾಗಿ ಎರಡು ವರ್ಷ ಭೂ ವಹಿವಾಟು ಪಾತಾಳಕ್ಕೆ ಇಳಿದಿತ್ತು. ಭೂಮಿ ಖರೀದಿ-ಮಾರಾಟ ವಹಿವಾಟು ಸಂಪೂರ್ಣ ನೆಲಕಚ್ಚಿತ್ತು. ಇದರಿಂದ ರಾಜ್ಯಾದ್ಯಂತ ಆಸ್ತಿ ಪತ್ರಗಳ ನೋಂದಣಿ ಪ್ರಕ್ರಿಯೆಯಲ್ಲಿ ಬಹುತೇಕ ಕುಸಿತ ಕಂಡಿತ್ತು.
ಉಪ ನೋಂದಣಿ ಕಚೇರಿ:2020-21ರಲ್ಲಿ ಲಾಕ್ ಡೌನ್ ಇರುವ ಕಾರಣ 24 ಮಾರ್ಚ್ 2020ರಿಂದ 24 ಏಪ್ರಿಲ್ 2020 ವರೆಗೆ ಉಪನೋಂದಣಿ ಕಚೇರಿಗಳು ಮುಚ್ಚಿದ್ದವು. ಇನ್ನೂ 2021-22ರಲ್ಲಿಎರಡನೇ ಅಲೆ ವೇಳೆ ಸರ್ಕಾರ ಹೇರಿದ ಲಾಕ್ಡೌನ ಕಾರಣ ಮೇ 10 ರಿಂದ ಜೂ.7ರವರೆಗೆ ಉಪ ನೋಂದಣಿ ಕಚೇರಿಗಳು ಮುಚ್ಚಲ್ಪಟ್ಟಿದ್ದವು.
ಇದೀಗ ಆಸ್ತಿ ನೋಂದಣಿ ಪ್ರಮಾಣದಲ್ಲಿ ಗಣನೀಯ ಏರಿಕೆ ಕಾಣುತ್ತಿದೆ. ಬಹುತೇಕ ಸಹಜ ಸ್ಥಿತಿಗೆ ತಲುಪುತ್ತಿದೆ. ಹಣದುಬ್ಬರ, ದುಬಾರಿ ಬಡ್ಡಿದರ, ವೆಚ್ಚ ಹೆಚ್ಚಳದ ಹೊರತಾಗಿಯೂ ರಾಜ್ಯಾದ್ಯಂತ ಆಸ್ತಿ ಪತ್ರ ನೋಂದಣಿಯಲ್ಲಿ ಜಿಗಿತ ಕಂಡಿದೆ.
ಆಸ್ತಿ ನೋಂದಣಿ ಪ್ರಮಾಣ ಏರಿಕೆ: 2022-23 ಸಾಲಿನಲ್ಲಿ ನವೆಂಬರ್ ವರೆಗೆ ರಾಜ್ಯಾದ್ಯಂತ 16,32,727 ಆಸ್ತಿ ಪತ್ರಗಳು ನೋಂದಣಿಯಾಗಿವೆ. ಅದೇ ಕಳೆದ ವರ್ಷ ಇದೇ ಅವಧಿಗೆ 12,50,835 ಆಸ್ತಿ ಪತ್ರಗಳು ನೋಂದಣಿಯಾಗಿತ್ತು ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.
ಆಸ್ತಿ ನೋಂದಣಿ ದುಪ್ಪಟ್ಟು :ಹಿಂದಿನ ಅವಧಿಗೆ ಹೋಲಿಸಿದರೆ ಈ ಬಾರಿ ನವೆಂಬರ್ ವರೆಗೆ 3,81,892 ಕ್ಕಿಂತ ಹೆಚ್ಚು ಆಸ್ತಿ ಪತ್ರಗಳು ನೋಂದಣಿ ಆಗಿವೆ. ಮುಂದ್ರಾಂಕ ಹಾಗೂ ನೋಂದಣಿ ಶುಲ್ಕ ದ ಮೂಲಕ ನವೆಂಬರ್ ವರೆಗೆ ಸುಮಾರು 10,850 ಕೋಟಿ ರೂ. ಸಂಗ್ರಹವಾಗಿದೆ. ಗುರಿ ಮೀರಿ ಆದಾಯ ಸಂಗ್ರಹಿಸಲಾಗಿದೆ.
ರಿಯಾಯಿತಿ: ಮಾರ್ಗಸೂಚಿ ದರದ ಮೇಲೆ 10% ರಿಯಾಯಿತಿ ಆಸ್ತಿ ನೋಂದಣಿ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ. ಇತ್ತ ರಿಯಲ್ ಎಸ್ಟೇಟ್ ಚಟುವಟಿಕೆ ಮತ್ತೆ ಪುಟಿದೇಳುತ್ತಿರುವುದು ಈ ಅಂಕಿ ಅಂಶದಿಂದ ಗೊತ್ತಾಗುತ್ತಿದೆ. ಸರ್ಕಾರ ಜುಲೈ ವರೆಗೆ ಮಾರ್ಗಸೂಚಿ ದರದ ಮೇಲೆ 10% ರಿಯಾಯಿತಿ ನೀಡುತ್ತ ಬಂತು. ಜತೆಗೆ 45 ಲಕ್ಷ ರೂ ವರೆಗಿನ ಫ್ಲಾಟ್ ಗಳಿಗೆ ಮುದ್ರಾಂಕ ಶುಲ್ಕವನ್ನು 5% ದಿಂದ 3%ಗೆ ಇಳಿಕೆ ಮಾಡಿತ್ತು.
ಆಸ್ತಿ ನೋಂದಣಿ ಅಂಕಿ ಅಂಶ ವಿವರ: