ಬೆಂಗಳೂರು:ರಾಜ್ಯದಲ್ಲಿ ಕೋವಿಡ್-19 ಸೋಂಕಿತರು ಹಾಗೂ ಮೃತರ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರ್‍ಯಾಂಡಮ್ ಟೆಸ್ಟ್ ನಡೆಸಲು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಕೋವಿಡ್-19 ಸೋಂಕಿತರ ಸಂಖ್ಯೆ ಗಣನೀಯ ಏರಿಕೆ: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರ್‍ಯಾಂಡಮ್ ಟೆಸ್ಟ್
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಎಲ್ಲಾ ಜಿಲ್ಲೆಗಳಲ್ಲಿ ರ್‍ಯಾಂಡಮ್ ಟೆಸ್ಟ್ ನಡೆಸಲು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಪ್ರಮುಖವಾಗಿ ಕೊಳೆಗೇರಿಗಳಲ್ಲಿ, ಮಾರುಕಟ್ಟೆ, ಮಾಲ್, ಸೂಪರ್ ಮಾರ್ಕೆಟ್ಗಳ ವ್ಯಾಪಾರಿಗಳು, ಕೆಲಸಗಾರರಿಗೆ, ಫುಡ್ ಡೆಲಿವರಿ, ಕೊರಿಯರ್ ಸಿಬ್ಬಂದಿಗೆ ರ್‍ಯಾಂಡಮ್ ಕೊರೊನಾ ಟೆಸ್ಟ್ ನಡೆಸಲು ಸೂಚಿಸಲಾಗಿದೆ. ಅದರಲ್ಲೂ ಪ್ರಮುಖವಾಗಿ 50 ವರ್ಷ ಮೇಲ್ಪಟ್ಟವರಿಗೆ ಆದ್ಯತೆಯಲ್ಲಿ ಕೊರೊನಾ ಪರೀಕ್ಷೆ ನಡೆಸಬೇಕೆಂದು ಸೂಚಿಸಿದೆ.
ಸಾವಿರಾರು ಜನರಿಗೆ ಕೊರೊನಾ ಹರಡುವ ಮೊದಲೇ ಅವರನ್ನು ಟೆಸ್ಟ್ ಮಾಡಿ, ಸೋಂಕಿದ್ದರೆ ಚಿಕಿತ್ಸೆ ಕೊಡಿಸುವ ಸಲುವಾಗಿ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಯುಕ್ತರು, ಉಪಾಯುಕ್ತರು ರ್‍ಯಾಂಡಮ್ ಟೆಸ್ಟ್ ನಡೆಸಬೇಕಾದ ಸ್ಥಳಗಳನ್ನು, ವ್ಯಕ್ತಿಗಳನ್ನು ಗುರುತಿಸಿ, ಮಾರ್ಗಸೂಚಿಯಂತೆ ಟೆಸ್ಟ್ ನಡೆಸಬೇಕೆಂದು ಸುತ್ತೋಲೆ ಹೊರಡಿಸಲಾಗಿದೆ.