ಬೆಂಗಳೂರು:ಕೋವಿಡ್ ಕಾರಣದಿಂದ ಬಂದ್ ಆಗಿದ್ದ ಸಸ್ಯಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಲಾಲ್ಬಾಗ್ ಆರಂಭಗೊಂಡಿದೆ. ಆದರೆ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಿದೆ.
ಈ ಹಿಂದೆ ವಯಸ್ಕರಿಗೆ 25 ರೂ.ಪಾಯಿ ಇತ್ತು.ಇದೀಗ 30 ರೂ. ಮಾಡಿದೆ. ಮಕ್ಕಳಿಗೆ ಈ ಹಿಂದೆ ಉಚಿತ ಪ್ರವೇಶವಿತ್ತು. ಆದರೆ, ಇದೀಗ ಆರು ವರ್ಷದೊಳಿಗೆ ಮಕ್ಕಳಿಗಷ್ಟೇ ಫ್ರೀ ಎಂಟ್ರಿ ಹಾಗೂ 12 ವರ್ಷದೊಳಗಿನ ಮಕ್ಕಳಿಗೆ 10 ರೂ. ದರ, ಇನ್ನು 12 ವರ್ಷ ಮೇಲ್ಪಟ್ಟವರಿಗೆ 30 ರೂಪಾಯಿ ಶುಲ್ಕ ನಿಗದಿಪಡಿಸಿದೆ.