ಬೆಂಗಳೂರು: ಅಸಮರ್ಥ, ದುರ್ಬಲ ಪ್ರಧಾನಿ ಅಂದ್ರೆ ಮೋದಿ. ಕೋವಿಡ್ ಬಂದ ನಂತರ ದೆಹಲಿ ಬಿಟ್ಟು ಹೊರಬರುತ್ತಿಲ್ಲ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಟೀಕಿಸಿದ್ದಾರೆ.
ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶಾಸಕ ಎನ್ ಎ ಹ್ಯಾರಿಸ್, ಎಂಎಲ್ಸಿ ಪ್ರಕಾಶ್ ರಾಥೋಡ್ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಯಾವುದೇ ರಾಜ್ಯಕ್ಕೂ ಭೇಟಿ ಕೊಟ್ಟಿಲ್ಲ. ಜನರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಿಲ್ಲ. ಔಷಧ, ಇನ್ನಿತರ ಸೌಲಭ್ಯವನ್ನೂ ಒದಗಿಸುತ್ತಿಲ್ಲ. ಮೋದಿ ದೆಹಲಿಯಲ್ಲೇ ಠಿಕಾಣಿ ಹೂಡಿದ್ದಾರೆ. ಕೋವಿಡ್ಗೂ ಮುನ್ನ 108 ದೇಶಗಳಿಗೆ ಭೇಟಿ ಕೊಟ್ಟಿದ್ದರು. 37 ಅಧಿಕೃತ ಭೇಟಿಯನ್ನ ಕೊಟ್ಟಿದ್ದರು. ಆದರೆ, ಕೋವಿಡ್ ಬಂದ ನಂತರ ಅವರು ಹೊರಬರುತ್ತಿಲ್ಲ. ದೆಹಲಿ ಬಿಟ್ಟು ಹೊರಗೆ ಬಂದಿಲ್ಲ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಜಿ ಸಂಸದ ವಿ ಎಸ್ ಉಗ್ರಪ್ಪ ಮಾತನಾಡಿದರು ಪ್ರಧಾನಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. 66 ರೂ ಗೆ ಪೆಟ್ರೋಲ್, ಡಿಸೇಲ್ ಸಿಗುತ್ತಿತ್ತು. ಜನವರಿಯವರೆಗೆ ಬೆಲೆ ಇತ್ತು. ಅಲ್ಲಿಂದ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಇಂದು ಪ್ರತಿ ಬ್ಯಾರಲ್ ಬೆಲೆ 69 ಡಾಲರ್ ಇದೆ. ವಿದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಇದೆ. ಇಂದು ಲೀಟರ್ ಪೆಟ್ರೋಲ್ಗೆ 96 ರೂ ಇದೆ. ಕೆಲವು ರಾಜ್ಯಗಳಲ್ಲಿ 100 ರೂ ದಾಟಿದೆ. ಅಗತ್ಯ ಪದಾರ್ಥಗಳ ಬೆಲೆ ಗಗನಕ್ಕೆ ಏರಿವೆ. ಜನವರಿಯಿಂದ ಇಲ್ಲಿವರೆಗೆ 40 ಬಾರಿ ಬೆಲೆ ಏರಿಸಿದ್ದಾರೆ ಎಂದು ಖಂಡನೆ ವ್ಯಕ್ತಪಡಿಸಿದರು.
ಪ್ರಧಾನಿ ಗುಜರಾತ್ಗೆ 19 ಭಾರಿ ಭೇಟಿ ನೀಡಿದ್ದಾರೆ. ರಾಜ್ಯಕ್ಕೆ 7 ಭಾರಿ ಮಾತ್ರ ಭೇಟಿ ಕೊಟ್ಟಿದ್ದಾರೆ. ಇಸ್ರೋ ಪ್ರಧಾನಿ ಅವಾರ್ಡ್ ಕಾರ್ಯಕ್ರಮಕ್ಕೆ ಬಂದಿದ್ದರು. ಗುಜರಾತ್ನಲ್ಲಿ ಸೈಕ್ಲೋನ್ ಬಂದಿದೆ. ಹಾಗೆಯೇ ಹಲವು ರಾಜ್ಯಗಳಿಗೆ ಎಫೆಕ್ಟ್ ಆಗಿದೆ. ಆದರೆ ಪ್ರಧಾನಿ ಕಾಲ್ ಮಾಡಿದ್ದು ಮಾತ್ರ ಗುಜರಾತ್ ಸಿಎಂಗೆ ಎಂದರು.
ಗುಜರಾತ್ಗೆ 1 ಸಾವಿರ ಕೋಟಿ ನೆರವು ನೀಡಿದ್ದು, ಪಿಎಂ ಕೇರ್ಸ್ನಿಂದ 2 ಸಾವಿರ ಕೋಟಿ ಕೊಟ್ಟಿದ್ದಾರೆ. ಜಲಜೀವನ್ ಮಿಷನ್ನಲ್ಲಿ 883 ಕೋಟಿ ಒದಗಿಸಿದ್ದಾರೆ. ಪ್ರಧಾನಿ ಮಂತ್ರಿ ಆವಾಸ್ನಲ್ಲೂ ಹೆಚ್ಚು ಅನುದಾನ ನೀಡಿದ್ದಾರೆ. 900 ಮೆಟ್ರಿಕ್ ಟನ್ ಆಕ್ಸಿಜನ್ ಗುಜರಾತ್ ಗೆ ಪ್ರತಿದಿನ ಕೊಡ್ತಿದ್ದಾರೆ. ಕರ್ನಾಟಕಕ್ಕೆ 1200 ಮೆಟ್ರಿಕ್ ಟನ್ ಕೊಡಬೇಕು ಎಂದು ಕೋರ್ಟ್ ಹೇಳಿದೆ. ಆದರೆ ಕೊಡ್ತಿರುವುದು 867 ಮೆಟ್ರಿಕ್ ಟನ್ ಮಾತ್ರ. ರೆಮ್ಡೆಸಿವಿರ್ ರಾಜ್ಯಕ್ಕೆ 1 ಲಕ್ಷ ಕೊಡ್ತಾರೆ. ಗುಜರಾತ್ ಗೆ 5.16 ಲಕ್ಷ ವಯಲ್ಸ್ ನೀಡ್ತಾರೆ. ಇಲ್ಲಿಯವರೆಗೆ ರಾಜ್ಯಕ್ಕೆ ಕೊಟ್ಟಿದ್ದು 2.17 ಲಕ್ಷ ಮಾತ್ರ. ಇದು ಪ್ರಧಾನಿ ಮೋದಿ ಮಲತಾಯಿ ಧೋರಣೆ ಎಂದರು.
ಪ್ರಧಾನಿ ಹಿಂದಿ ಬೆಲ್ಟ್ಗೆ ಮಾತ್ರ ಗಮನಹರಿಸಿದ್ದಾರೆ. ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತಾಳ್ತಿದ್ದಾರೆ. 25 ಜನ ಬಿಜೆಪಿ ಸಂಸದರು ಆರಿಸಿ ಹೋಗಿದ್ದಾರೆ. ರಾಜ್ಯಕ್ಕೆ ಅವರು ಏನು ಮಾಡಿದ್ದಾರೆ. ಈಗಲಾದರೂ ಸೌಲಭ್ಯ ಪಡೆಯೋಕೆ ಬಾಯಿ ಬಿಡಬೇಕು. ಮೌನಿ ಬಾಬಾಗಳಾಗಿರುವ ಸಂಸದರು ಬಾಯಿಬಿಡಬೇಕು ಎಂದು ಒತ್ತಾಯಿಸಿದರು.
ಶಾಸಕ ಹ್ಯಾರಿಸ್ ಮಾತನಾಡಿ, ಬೆಂಗಳೂರಿನಲ್ಲಿ ಕೋವಿಡ್ ಕಡಿಮೆಯಾಗಿಲ್ಲ. ಸೋಂಕು ಕಡಿಮೆಯಾಗಿದೆ ಅನ್ನೋದು ಸುಳ್ಳು. ಕಡಿಮೆಯಾಗಿದ್ದರೆ ಹಾಸಿಗೆ ಸಿಗಬೇಕಿತ್ತು. ಇವತ್ತಿಗೂ ಹಾಸಿಗೆಗಳು ಸಿಗ್ತಿಲ್ಲ. ಟೆಸ್ಟ್ ರಿಸಲ್ಟ್ ಕಡಿಮೆ ಮಾಡ್ತಿದ್ದಾರೆ. ವ್ಯಾಕ್ಸಿನ್ ಸೆಕೆಂಡ್ ಡೋಸ್ ಸಿಗ್ತಿಲ್ಲ. ಹೊಸದಾಗಿ ತೆಗೆದುಕೊಳ್ಳುವವರಿಗೆ ಟೆಸ್ಟ್ ಮಾಡ್ತಾರೆ. ಟೆಸ್ಟ್ ಮಾಡಿ ಪಾಸಿಟಿವ್ ಬಂದರೆ ಲಸಿಕೆ ಕೊಡಲ್ಲ. ಯಾಕಂದ್ರೆ ಲಸಿಕೆಯೇ ಇನ್ನು ಬಂದಿಲ್ಲ. ಅದನ್ನ ಮುಚ್ಚಿಡೋಕೆ ಈ ರೀತಿ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಕಳೆದ ಬಾರಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಆದರೆ, 2 ಪರ್ಸೆಂಟ್ ಮಾತ್ರ ಆಗ ಸಿಕ್ಕಿದ್ದು. ಈಗ ಮತ್ತೆ 1250 ಕೋಟಿ ಘೋಷಣೆ ಮಾಡಿದ್ದಾರೆ. ಅದು ಯಾವಾಗ ತಲುಪುತ್ತೋ ಗೊತ್ತಿಲ್ಲ. ವರ್ಲ್ಡ್ ಬ್ಯಾಂಕ್ ಮೋದಿ ಧಿಕ್ಕು ತಪ್ಪಿಸುತ್ತಿದ್ದಾರೆ ಎಂದಿದೆ. ಭಾರತದ ಪ್ರಧಾನಿ ದಿಕ್ಕು ತಪ್ಪಿಸುತ್ತಿದ್ದಾರೆ ಎಂದಿದೆ. ಆರ್ಥಿಕವಾಗಿ ದೇಶ ಅಧೋಗತಿಯತ್ತ ಸಾಗುತ್ತಿದೆ. ಲಾಕ್ಡೌನ್ ಮಾಡಿ ಒಂದು ತಿಂಗಳಾಯ್ತು. ಆದರೆ, ಅವರು ಜೀವನ ಮಾಡೋಕೆ ಏನೂ ಕೊಟ್ಟಿಲ್ಲ ಎಂದರು.
ತಮಿಳುನಾಡಿನಲ್ಲಿ ದ್ವೇಷದ ರಾಜಕಾರಣವಿದೆ. ಆದರೆ, ಕಮಿಟಿ ಮಾಡಿ ಎಲ್ಲ ಪಕ್ಷ ಸೇರಿಸಿದ್ದಾರೆ. ಮೂರು ಕೋಟಿ ಕುಟುಂಬಕ್ಕೆ 2 ಸಾವಿರ ಕೊಟ್ಟಿದ್ದಾರೆ. ಅಧಿಕಾರ ಸ್ವೀಕರಿಸುತ್ತಲೇ ಸ್ಟಾಲಿನ್ ಕೊಟ್ಟಿದ್ದಾರೆ. ಅಂತಹ ಒಂದು ಕಮಿಟಿ ಇಲ್ಲಿ ಮಾಡಲಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬ್ಲಾಕ್ ಫಂಗಸ್ಗೆ ಔಷಧಿಯೇ ಸಿಗ್ತಿಲ್ಲ. ರಾಜ್ಯದಲ್ಲಿ 500 ಕೇಸ್ ದಾಖಲಾಗಿದೆ. ಇದರ ಚಿಕಿತ್ಸೆಗೆ ಇಲ್ಲಿ ಔಷಧವೇ ಸಿಗ್ತಿಲ್ಲ. ಮೆಡಿಕಲ್ ಆಕ್ಸಿಜನ್ ಪೂರೈಕೆಯಾಗ್ತಿಲ್ಲ. ಇಂಡಸ್ಟ್ರೀಸ್ ಆಕ್ಸಿಜನ್ ಕೊಡ್ತಿದ್ದಾರೆ. ಇದರಿಂದ ಇನ್ನಷ್ಟು ಸಾವುಗಳು ಆಗಲಿವೆ. ಸರ್ಕಾರ ಜನರಿಗೆ ಬೇಕಾದ್ದನ್ನ ತಲುಪಿಸುತ್ತಿಲ್ಲ. ಇವತ್ತು ಜನ ಬೀದಿಗಿಳಿದು ಪ್ರತಿಭಟಿಸುತ್ತಿದ್ರು. ಆದರೆ ಪ್ಯಾಂಡಮಿಕ್ನಿಂದ ಅದೂ ಸಾಧ್ಯವಾಗ್ತಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಎಂಎಲ್ಸಿ ಪ್ರಕಾಶ್ ರಾಥೋಡ್ ಮಾತನಾಡಿ, ಸಿರಂ ಇನ್ಸಿಟ್ಯೂಟ್ ಲಸಿಕೆ ಉತ್ಪಾದನೆ ಮಾಡುತ್ತೆ. ಆದರೆ, ಸರ್ಕಾರ ಇನ್ನೂ ಬಿಲ್ ಕೊಟ್ಟಿಲ್ಲ. ನೀವು ಬಿಲ್ ಕೊಟ್ರೆ ನಾವು ಪೂರೈಸ್ತೇವೆ ಅಂತ ಹೇಳಿದೆ. ಆಧಾರ್ ಪೂನಾವಾಲ ಹೇಳಿದ್ದಾರೆ. ಆದ್ರೂ ಸರ್ಕಾರ ಅವರ ಬಿಲ್ ಕಟ್ಟಿಲ್ಲ. ಪಂಜಾಬ್ ಸರ್ಕಾರ ಲಸಿಕೆ ಖರೀದಿಗೆ ಮುಂದಾಗಿದೆ. ಅಮೆರಿಕ ಅಸ್ಟರ್ ಕಂಪನಿಗೆ ಆರ್ಡರ್ ಮಾಡಿದೆ. ಆದರೆ, ಕಂಪನಿ ಕೇಂದ್ರದ ಅನುಮತಿ ಕೇಳುತ್ತಿದೆ ಎಂದರು.
ರಾಜ್ಯಗಳ ಖರೀದಿಗೆ ಅವಕಾಶ ಕೊಡ್ತಿಲ್ಲ. ಇವತ್ತು ಖಾಸಗಿಯಲ್ಲಿ ಲಸಿಕೆ ಲಭ್ಯವಾಗುತ್ತಿದೆ. ಆದರೆ, ಸರ್ಕಾರಕ್ಕೆ ಲಸಿಕೆ ಸಿಗ್ತಿಲ್ಲ. ಕೋವ್ಯಾಕ್ಸಿನ್ಗೆ ಅಪ್ರೂವಲ್ ಸಿಕ್ಕಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯೇ ಅಪ್ರೂವಲ್ ಕೊಟ್ಟಿಲ್ಲ. ಅಪ್ರೂವಲ್ ಸಿಕ್ಕಿರೋದು ಕೋವಿಶೀಲ್ಡ್ ಗೆ ಮಾತ್ರ. ಇದನ್ನ ಸರ್ಕಾರ ಯಾಕೆ ಅರ್ಥ ಮಾಡಿಕೊಳ್ತಿಲ್ಲ ಎಂದು ಕೇಳಿದರು.
ಓದಿ:ಕಾಗದದಲ್ಲಿ ಮಾತ್ರವೇ ಕೇಂದ್ರ ಸರ್ಕಾರ ಸಾವಿರಾರು ಕೋಟಿ ರೂ. ಖರ್ಚು ಮಾಡಿದೆ : ಸುಪ್ರೀಂ ಕಿಡಿ