ಕರ್ನಾಟಕ

karnataka

ETV Bharat / state

'ಮಹಾನಗರಗಳ ಪಟ್ಟಿಗೆ ಬೆಂಗಳೂರು ಸೇರಿಸಿ, ಮಧ್ಯಮ ವರ್ಗದ ಸಂಬಳದಾರರ ಮನೆ ಬಾಡಿಗೆ ಭತ್ಯೆ ಹೆಚ್ಚಿಸಿ' - ಮಧ್ಯಮ ವರ್ಗದ ಸಂಬಳದಾರ

ಬೆಂಗಳೂರನ್ನು ಮಹಾನಗರಗಳ ಪಟ್ಟಿಗೆ ಸೇರ್ಪಡೆಗೊಳಿಸಿ ಮಧ್ಯಮ ವರ್ಗದ ಸಂಬಳದಾರರ ಮನೆ ಬಾಡಿಗೆ ಭತ್ಯೆ ಹೆಚ್ಚಿಸಬೇಕೆಂದು ಕೇಂದ್ರ ಸರ್ಕಾರವನ್ನು ಸಂಸದ ತೇಜಸ್ವಿ ಸೂರ್ಯ ಒತ್ತಾಯಿಸಿದ್ದಾರೆ.

include-bengaluru-in-metro-cities-under-it-rules-urge-tejasvi-surya
ಮಹಾನಗರಗಳ ಪಟ್ಟಿಗೆ ಬೆಂಗಳೂರು ಸೇರಿಸಿ, ಮಧ್ಯಮ ವರ್ಗದ ಸಂಬಳದಾರರ ಮನೆ ಬಾಡಿಗೆ ಭತ್ಯೆ ಹೆಚ್ಚಿಸಿ: ತೇಜಸ್ವಿ ಸೂರ್ಯ

By

Published : Dec 13, 2022, 10:49 PM IST

ಬೆಂಗಳೂರು:ರಾಜಧಾನಿಬೆಂಗಳೂರು ಮತ್ತು ವೇಗವಾಗಿ ಬೆಳೆಯುತ್ತಿರುವ ಇತರ ನಗರಗಳನ್ನು ಮಹಾನಗರಗಳ ಪಟ್ಟಿಗೆ ಸೇರ್ಪಡೆಗೊಳಿಸಿ ಮಧ್ಯಮ ವರ್ಗದ ಸಂಬಳದಾರ ವರ್ಗದ ಹಿತಾಸಕ್ತಿ ಕಾಯುವಂತೆ ಸಂಸದ ತೇಜಸ್ವಿ ಸೂರ್ಯ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರಿಗೆ ಮನವಿ ಮಾಡಿದ್ದಾರೆ.

ಲೋಕಸಭೆಯ ಶೂನ್ಯ ವೇಳೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ವಿಷಯಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೆಹಲಿ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾಗಳ ಸಾಲಿಗೆ ಬೆಂಗಳೂರನ್ನು ಕೂಡ ಸೇರಿಸಿದಲ್ಲಿ ಕೋಟ್ಯಂತರ ಮಧ್ಯಮ ವರ್ಗದ ಸಂಬಳದಾರರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು. ಜೊತೆಗೆ, ಆದಾಯ ತೆರಿಗೆ ನಿಯಮಗಳಿಗೆ ತಿದ್ದುಪಡಿ ತಂದು ಮನೆ ಬಾಡಿಗೆ ಭತ್ಯೆಯನ್ನು ಶೇ.40 ರಿಂದ 50ಕ್ಕೆ ಏರಿಸುವಂತೆ ಕೋರಿದ್ದೇನೆ ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡಲು ಸಜ್ಜಾಗಿರುವ ಸರ್ಕಾರ: ಸಂಪುಟ ಉಪಸಮಿತಿ ರಚನೆ

ABOUT THE AUTHOR

...view details