ಬೆಂಗಳೂರು:ಈಗ ಅನ್‌ಲಾಕ್ ನೈಟ್ ಕರ್ಫ್ಯೂ ಜಾರಿಯಾಗಿದ್ದು, ಮಹಾಮಾರಿ ಕೊರೊನಾ ಕಟ್ಟಿಹಾಕಲು ರಾಜ್ಯ ಸರ್ಕಾರದ ಪರ್ಯಾಯ ಪ್ಲಾನ್ ಇದಾಗಿದೆ. ಅನ್‌ಲಾಕ್ ಬೆನ್ನಲ್ಲೇ ಇಂದಿನಿಂದ ನೈಟ್ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲಿಸುವಂತೆ ಜನರಿಗೆ ಈಗಾಗಲೇ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹಾಗೂ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮನವಿ ಮಾಡಿದ್ದಾರೆ.
ನೈಟ್ ಕರ್ಫ್ಯೂ ಜಾರಿಯಾಗಿ ಗಂಟೆಗಳು ಕಳೆದರೂ ನಿಲ್ಲದ ವಾಹನ ಸಂಚಾರ - Incessant traffic in Bangalore city
ರಾತ್ರಿ 7 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಇರಲಿದೆ. ಆದರೆ, ನೈಟ್ ಕರ್ಫ್ಯೂ ಜಾರಿಯಾದರೂ ವಾಹನ ಸಂಚಾರ ಕಡಿಮೆಯಾಗಿಲ್ಲ. ನಗರದ ಯಶವಂತಪುರ, ಗೊರಗುಂಟೆ ಪಾಳ್ಯ ಫ್ಲೈ ಓವರ್ನಲ್ಲಿ ವಾಹನಗಳ ಸಂಚಾರ ರಾತ್ರಿ 8 ಗಂಟೆಯಾದರೂ ಹೆಚ್ಚಾಗಿದ್ದದ್ದು ಕಂಡು ಬಂತು.
![ನೈಟ್ ಕರ್ಫ್ಯೂ ಜಾರಿಯಾಗಿ ಗಂಟೆಗಳು ಕಳೆದರೂ ನಿಲ್ಲದ ವಾಹನ ಸಂಚಾರ incessant-traffic-in-bangalore-city](https://etvbharatimages.akamaized.net/etvbharat/prod-images/768-512-12133638-thumbnail-3x2-sanju.jpg)
ನಗರದಲ್ಲಿ ನಿಲ್ಲದ ವಾಹನ ಸಂಚಾರ
ನಗರದಲ್ಲಿ ನಿಲ್ಲದ ವಾಹನ ಸಂಚಾರ
ರಾತ್ರಿ 7 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಇರಲಿದೆ. ಆದರೆ, ನೈಟ್ ಕರ್ಫ್ಯೂ ಜಾರಿಯಾದರೂ ವಾಹನ ಸಂಚಾರ ಕಡಿಮೆಯಾಗಿಲ್ಲ. ನಗರದ ಯಶವಂತಪುರ, ಗೊರಗುಂಟೆ ಪಾಳ್ಯ ಫ್ಲೈ ಓವರ್ನಲ್ಲಿ ವಾಹನಗಳ ಸಂಚಾರ ರಾತ್ರಿ 8 ಗಂಟೆಯಾದರೂ ಹೆಚ್ಚಾಗಿದೆ. ನಗರದ ಫ್ಲೈ ಓವರ್ ಬಂದ್ ಮಾಡುತ್ತಿರುವ ಪೊಲೀಸರ ದೃಶ್ಯಗಳು ಲಭ್ಯವಾಗಿವೆ. ಇಂದಿನಿಂದ ಜೂನ್ 21ವರೆಗೂ ಪ್ರತಿದಿನ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ.
ಓದಿ:ಕಲ್ಯಾಣ ಮಂಟಪ ಪ್ರಕರಣಕ್ಕೆ ಕ್ಲೀನ್ಚಿಟ್: ಚಾಲೆಂಜ್ ಗೊತ್ತಿದೆಯಾ ಎಂದು ಸಿಂಧೂರಿ ವಿರುದ್ದ ಸಾ ರಾ ಮಹೇಶ್ ಗುಡುಗು