ಕರ್ನಾಟಕ

karnataka

ETV Bharat / state

ಪೆಟ್ರೋಲ್‌, ಡೀಸೆಲ್‌ಗಿಂತಲೂ ಕೆಲವು ತರಕಾರಿ ದುಬಾರಿ: ಟೊಮೆಟೋ ಪ್ರತಿ ಕೆ.ಜಿಗೆ 100 ರೂಪಾಯಿ!

ರಾಜ್ಯದಲ್ಲಿ ತರಕಾರಿ ಬೆಲೆಗಳು (Vegetable rates increased) ಗಗನಕ್ಕೇರುತ್ತಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆ, ಅಗತ್ಯ ಪ್ರಮಾಣದಲ್ಲಿ ಮಾರುಕಟ್ಟೆಗೆ ಪೂರೈಕೆಯಾಗದ ತರಕಾರಿ, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿಸಿದೆ.

Incessant rains increase vegetable rates in Karnataka
ಪೆಟ್ರೋಲ್‌, ಡೀಸೆಲ್‌ಗಿಂತಲೂ ಟೊಮೆಟೋ ದುಬಾರಿ: ಪ್ರತಿ ಕೆ.ಜಿಗೆ 100 ರೂಪಾಯಿ!

By

Published : Nov 21, 2021, 11:12 AM IST

Updated : Nov 21, 2021, 1:21 PM IST

ಬೆಂಗಳೂರು:ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆ ರಾಜ್ಯದಲ್ಲಿ ತರಕಾರಿ ಬೆಲೆಗಳನ್ನು (Vegetable rates in Karnataka) ಗಗನಕ್ಕೇರಿಸಿದೆ. ವಿಶೇಷವಾಗಿ, ಬೆಂಗಳೂರಿನಲ್ಲಿ 1 ಕೆ.ಜಿ ಟೊಮೆಟೋ ಬೆಲೆ ಇದೀಗ 100ರ (tomato price hits century) ಗಡಿ ದಾಟಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆ, ಅಗತ್ಯ ಪ್ರಮಾಣದಲ್ಲಿ ಮಾರುಕಟ್ಟೆಗೆ ಪೂರೈಕೆಯಾಗದ ತರಕಾರಿ ಈ ಬೆಲೆ ಏರಿಕೆಯಾಗಲು ಕಾರಣವಾಗಿದೆ.

ರಾಜ್ಯದೆಲ್ಲೆಡೆ ಕಳೆದ 15 ದಿನಗಳಿಂದ ಯಥೇಚ್ಛವಾಗಿ ಮಳೆಯಾಗುತ್ತಿದೆ. ವರ್ಷಧಾರೆಗೆ ರೈತರ ಹೊಲದಲ್ಲೆಲ್ಲಾ ನೀರು ತುಂಬಿ ತರಕಾರಿ ಬೆಳೆಗಳು ಕೊಳೆಯುತ್ತಿವೆ.

ಸದ್ಯ ಮಾರುಕಟ್ಟೆಗಳಲ್ಲಿ ಟೊಮೆಟೋ ಪ್ರತಿ ಕೆ.ಜಿಗೆ 100 ರಿಂದ 110 ರೂಪಾಯಿಗೆ (tomato price hits Rs 100 in Bengaluru) ಬಿಕರಿಯಾಗುತ್ತಿದೆ. ಈರುಳ್ಳಿ ಕೆ.ಜಿಗೆ 40 ರಿಂದ 60 ರೂಪಾಯಿ ಇದೆ. ಸೀಮೆ ಬದನೆಕಾಯಿ, ಸೊರೆಕಾಯಿ, ಮೂಲಂಗಿ ಮಳೆಗೂ ಮುನ್ನ ಕೆ.ಜಿಗೆ 15-30 ರೂಪಾಯಿ ಇದ್ದಿದ್ದು, ಈಗ 30 ರಿಂದ 60ಕ್ಕೆ ಏರಿಕೆಯಾಗಿದೆ.ಇನ್ನು, ಬೀನ್ಸ್ ಕೆ.ಜಿಗೆ 72 ರೂಪಾಯಿ ಇದೆ. ಬದನೆಕಾಯಿ(ಬಿಳಿ) 99, ಕ್ಯಾಪ್ಸಿಕಂ 130 ಮಾರಾಟವಾಗುತ್ತಿದೆ. ಅಚ್ಚರಿ ಅಂದ್ರೆ, 15 ಕೆ.ಜಿ ಟೊಮೆಟೋ ಬಾಕ್ಸ್‌ಗೆ ಈಗ 1500 ರಿಂದ 2,000 ರೂಪಾಯಿ ಕೊಡಬೇಕಿದೆ!.

ಆಲೂಗಡ್ಡೆ ಕೆ.ಜಿಗೆ 30 ರಿಂದ 50 ರೂಪಾಯಿ ಇದೆ. ಇದೇ ರೀತಿ ಮಳೆ ಮುಂದುವರೆದರೆ ಟೊಮೆಟೋ ಬೆಲೆ 150 ರೂಪಾಯಿ ತಲುಪಿದರೂ ಅಚ್ಚರಿ ಇಲ್ಲ ಎನ್ನುತ್ತಿದ್ದಾರೆ ತರಕಾರಿ ಮಾರಾಟಗಾರರು.

ಈ ಮಳೆಯ ಮಧ್ಯೆಯೂ ತರಕಾರಿ ಅದರಲ್ಲೂ ಟೊಮೆಟೋ ಬೆಳೆದು ಮಾರುಕಟ್ಟೆಗೆ ತಲುಪಿಸುವಲ್ಲಿ ಯಶಸ್ವಿಯಾದ ರೈತರು ಒಳ್ಳೆಯ ಲಾಭ ಗಳಿಸುತ್ತಿದ್ದಾರೆ.

ಇದನ್ನೂ ಓದಿ:'ಮೊದಲು ನಿಮ್ಮ ಮಕ್ಕಳನ್ನು ಗಡಿಗೆ ಕಳುಹಿಸಿ, ಬಳಿಕ ಉಗ್ರರ ದೇಶದ ಪ್ರಧಾನಿಯನ್ನು ನಿಮ್ಮ ದೊಡ್ಡಣ್ಣನೆಂದು ಕರೆಯಿರಿ'

Last Updated : Nov 21, 2021, 1:21 PM IST

ABOUT THE AUTHOR

...view details