ಬೆಂಗಳೂರು: ಸೇಂಟ್ ಮಾರ್ಕ್ಸ್ ರಸ್ತೆಯ ಎಸ್.ಬಿ.ಐ. ವೃತ್ತದ ಬಳಿ ನಗರ ಸಂಚಾರ ಪೊಲೀಸರು ವಾಸ್ವಾನಿ ಸಂಸ್ಥೆಯ ಸಹಯೋಗದೊಂದಿಗೆ ಮಕ್ಕಳ ಸಂಚಾರ ಪೊಲೀಸ್ ಉದ್ಯಾನವನ್ನ ಸೋಮವಾರ ಗೃಹ ಸಚಿವ ಬಸವಾರಾಜ್ ಬೊಮ್ಮಯಿ, ಡಿಜಿ ಪ್ರವೀಣ್ ಸೂದ್, ಟ್ರಾಫಿಕ್ ಆಯುಕ್ತ ರವಿಕಾಂತೇಗೌಡ ಉದ್ಘಾಟಿಸಿದರು.
ಮಕ್ಕಳ ಸಂಚಾರ ಪೊಲೀಸ್ ಉದ್ಯಾನವನ ಉದ್ಘಾಟನೆ... ಇದರ ವಿಶೇಷತೆ ಏನು ಗೊತ್ತಾ? - ಬಸವಾರಾಚ್ ಬೊಮ್ಮಾಯಿ, ಡಿಜಿ ಪ್ರವೀಣ್ ಸೂದ್, ಟ್ರಾಫಿಕ್ ಆಯುಕ್ತ ರವಿಕಾಂತೇಗೌಡ
ಸೇಂಟ್ ಮಾರ್ಕ್ಸ್ ರಸ್ತೆಯ ಎಸ್.ಬಿ.ಐ. ವೃತ್ತದ ಬಳಿ ನಗರ ಸಂಚಾರ ಪೊಲೀಸರು ವಾಸ್ವಾನಿ ಸಂಸ್ಥೆಯ ಸಹಯೋಗದೊಂದಿಗೆ ಮಕ್ಕಳ ಸಂಚಾರ ಪೊಲೀಸ್ ಉದ್ಯಾನವನ್ನ ಇಂದು ಗೃಹ ಸಚಿವ ಬಸವಾರಾಜ್ ಬೊಮ್ಮಾಯಿ, ಡಿಜಿ ಪ್ರವೀಣ್ ಸೂದ್, ಟ್ರಾಫಿಕ್ ಆಯುಕ್ತ ರವಿಕಾಂತೇಗೌಡ ಉದ್ಘಾಟಿಸಿದ್ದಾರೆ.
ಚಿಕ್ಕ ವಯಸ್ಸಿನಿಂದಲೇ ಮಕ್ಕಳ ಮನಸ್ಸಿನಲ್ಲಿ ಟ್ರಾಫಿಕ್ ಬಗ್ಗೆ ಅರಿವು ಮೂಡಿಸಲು ಈ ಮಕ್ಕಳ ಟ್ರಾಫಿಕ್ ಪಾರ್ಕ್ನ್ನು ಮಾಡಲಾಗಿದೆ. ಇಲ್ಲಿ ಟ್ರಾಫಿಕ್ ಸಿಗ್ನಲ್, ಟ್ರಾಫಿಕ್ ನಿಯಮದ ಅರಿವು , ರಸ್ತೆಯನ್ನು ಉಪಯೋಗಿಸುವ ರೀತಿ, ಸಂಚಾರ ನಿಯಮಗಳನ್ನು ಅರ್ಥಮಾಡಿಕೊಂಡು ಅನುಸರಿಸುವಂತೆ ಮಕ್ಕಳನ್ನು ಪ್ರೇರೇಪಿಸುವ ಸಲುವಾಗಿ, ರಸ್ತೆಯಲ್ಲಿ ಸುರಕ್ಷತೆಯನ್ನು ಪಾಲಿಸುವ ಕೌಶಲ್ಯ ಬೆಳೆಸಲು ರಸ್ತೆಗಳ ಮಾರ್ಕಿಂಗ್ಗಳು, ಕಡ್ಡಾಯ ಮತ್ತು ಮಾಹಿತಿ ಚಿಹ್ನೆಗಳು, ಸಿಗ್ನಲ್ ಲೈಟ್ಗಳನ್ನ ಪಾರ್ಕ್ನಲ್ಲಿ ಸ್ಥಾಪಿಸಲಾಗಿದೆ.
ಇನ್ನು ಗೃಹ ಸಚಿವ ಬಸವಾರಾಜ್ ಬೊಮ್ಮಾಯಿ ಮಾತನಾಡಿ, ಮುಂದಿನ ದಿನಗಳಲ್ಲಿ ಈ ಪ್ರದೇಶಗಳ ಸಂಚಾರ ದಟ್ಟಣೆ ನಿಯಂತ್ರಿಸಿ ಪಾರ್ಕಿಂಗ್ ಪ್ರದೇಶ ಸೇರಿ ಹಲವು ಸೌಲಭ್ಯ ಕಲ್ಪಿಸಿ, ಸುಗಮ ಹಾಗೂ ಸರಳವಾಗಿ ವಾಹನ ಸಂಚರಿಸಲು ಕ್ರಮ ಕೈಗೊಳ್ಳಲಾಗುವುದು. ನಗರದಲ್ಲಿ ನಿತ್ಯ 5 ಸಾವಿರ ವಾಹನಗಳು ರಸ್ತೆಗಿಳಿಯುತ್ತಿದ್ದು, ಇದರ ಜತೆಗೆ ಜನ ಸಂಖ್ಯೆಯ ಪ್ರಮಾಣವೂ ಏರಿಕೆಯಾಗುತ್ತಿದೆ. ಸಂಚಾರ ದಟ್ಟಣೆ ನಿಯಂತ್ರಿಸುವುದು ಸಂಚಾರ ಪೊಲೀಸರಿಗೆ ಸವಾಲಾಗಿದೆ ಎಂದರು.