ಕರ್ನಾಟಕ

karnataka

ETV Bharat / state

ಕೃಷಿ, ತೋಟಗಾರಿಕೆಗೆ ಉತ್ತೇಜನ ನೀಡಿದರೂ ಪರಿಪೂರ್ಣ ಯಶಸ್ಸು ಲಭಿಸಿಲ್ಲ: ನರೇಂದ್ರ ಸಿಂಗ್ ಥೋಮರ್ - ಕೃಷಿ ಮತ್ತು ತೋಟಗಾರಿಕೆ ಸಮ್ಮೇಳನ ಬೆಂಗಳೂರು

ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಗೆ ಉತ್ತೇಜನ ನೀಡಲಾಗಿದ್ದರೂ ಯಶಸ್ಸು ಲಭಿಸಿಲ್ಲ ಎಂದು ಕೇಂದ್ರ ಸಚಿವ ಥೋಮರ್​ ಅಸಮಾಧಾನ ವ್ಯಕ್ತಪಡಿಸಿದರು.

agriculture-and-horticulture inauguration
ಕೃಷಿ ಹಾಗೂ ತೋಟಗಾರಿಕೆಗೆ ಉತ್ತೇಜನ ನೀಡಿದರು ಪರಿಪೂರ್ಣ ಯಶಸ್ಸು ಲಭಿಸಿಲ್ಲ

By

Published : Jul 14, 2022, 2:52 PM IST

ಬೆಂಗಳೂರು: ರಾಷ್ಟ್ರ ಹಾಗೂ ರಾಜ್ಯಗಳು ಕೃಷಿ, ತೋಟಗಾರಿಕೆ ಇಲಾಖೆಗೆ ಎಷ್ಟೇ ಉತ್ತೇಜನ ನೀಡಿದರೂ ಪರಿಪೂರ್ಣ ಯಶಸ್ಸು ಇದುವರೆಗೂ ಲಭಿಸಿಲ್ಲ ಎಂದು ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ಥೋಮರ್ ಅಭಿಪ್ರಾಯ ಪಟ್ಟರು.

ನಗರದ ಖಾಸಗಿ ಹೋಟೆಲ್​​​​​ನಲ್ಲಿ ಆಯೋಜಿಸಿದ್ದ ಎರಡು ದಿನಗಳ ವಿವಿಧ ರಾಜ್ಯಗಳ ಕೃಷಿ ಮತ್ತು ತೋಟಗಾರಿಕೆ ಸಚಿವರ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ನಾವು ನಮ್ಮ ರಾಜ್ಯದಲ್ಲಿ ದೊಡ್ಡ ಸಾಧನೆ ಮಾಡಿದ್ದೇವೆ. ಸಾಕಷ್ಟು ಕೊಡುಗೆ, ಉತ್ತೇಜನ ಸಿಕ್ಕರೂ ಸಫಲತೆಯ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಯಶಸ್ವಿ ಉತ್ತೇಜನಕ್ಕೆ ಕೈಗೊಳ್ಳಬಹುದಾದ ಕ್ರಮದ ಕುರಿತು ಇನ್ನಷ್ಟು ಚರ್ಚೆ ಆಗಬೇಕಿದೆ.

ಪರಸ್ಪರ ರಾಜ್ಯ, ಕೇಂದ್ರ ಸರ್ಕಾರಗಳು ಸಹಕಾರ ನೀಡಿಕೊಂಡು ನಿರ್ಧಾರ ಕೈಗೊಳ್ಳಬೇಕು. ಯೋಜನೆ, ಅನುದಾನ ರೈತರ ಭೂಮಿಯವರೆಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದರು. ಆಮದು ವ್ಯವಸ್ಥೆ ಆಧರಿಸಿ ಸಬ್ಸಿಡಿ ಪ್ರಮಾಣ ಹೆಚ್ಚಿಸಿ. ಸ್ವಾವಲಂಬನೆ ಸಾಧಿಸಲು ಅಗತ್ಯ ಕ್ರಮ ಕೈಗೊಳ್ಳಿ. ನ್ಯಾನೊ ಯೂರಿಯಾ ಉತ್ತೇಜಿಸಿ. ಆಮದು ನಿಯಂತ್ರಿಸಿದರೆ ಹಣ ಉಳಿತಾಯವಾಗಲಿದೆ.

ಅಗತ್ಯ ಪ್ರಮಾಣದ ಉತ್ಪಾದನೆ ಆಗಬೇಕು. ಉತ್ಪಾದನೆ ಘಟಕ ತೆರೆದರೆ ಇಲ್ಲಿನ ಯುವಕರಿಗೆ ಉದ್ಯೋಗ ಸಿಗಲಿದೆ. ದೇಶ, ರೈತರ ಅನುಕೂಲ ಯಾವುದರಲ್ಲಿದೆ ಎನ್ನುವುದನ್ನು ಅರಿತು ಆ ಕ್ಷೇತ್ರಕ್ಕೆ ಉತ್ತೇಜನ ನೀಡಬೇಕು.

ಡಿಜಿಟಲ್‌ ಕೃಷಿ ವ್ಯವಸ್ಥೆಗೆ ಕೇಂದ್ರ ಒತ್ತುಕೊಟ್ಟಿದೆ. ಪಿಎಂ ಕಿಸಾನ್ ಯೋಜನೆ ಪ್ರತಿ ರೈತರನ್ನು ತಲುಪಬೇಕಿದೆ. ಸಿರಿ ಧಾನ್ಯಗಳ ಬಳಕೆ ಹೆಚ್ಚಳಕ್ಕೆ ಕ್ರಮ ಆಗಬೇಕಿದೆ. ಆಹಾರ ಪದ್ಧತಿಯಲ್ಲಿ ಸಿರಿಧಾನ್ಯ ಕಡಿಮೆ ಆಗಿರುವುದರಿಂದ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ. ನೈಸರ್ಗಿಕ ಕೃಷಿ ಪದ್ಧತಿಗೆ ಉತ್ತೇಜನ ಸಿಗಬೇಕಿದೆ. ಸಾಕಷ್ಟು ರಾಜ್ಯದಲ್ಲಿ ಇದರ ಸದ್ಬಳಕೆ ಆಗಿದೆ. ಕೇಂದ್ರದ ಸಹಕಾರ ಸಹ ರಾಜ್ಯಗಳಿಗೆ ಸಿಗಲಿದೆ ಎಂದು ವಿವರಿಸಿದರು.

ಈ ವೇಳೆ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾತನಾಡಿ, ಭಾರತೀಯರು ಕೃಷಿ, ಕೃಷಿಕ ಹಾಗೂ ತೋಟಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಗೌರವ ನೀಡಿದೆ. ಕೃಷಿಯಲ್ಲಿನ ಶೇ.1 ರಷ್ಟು ಪ್ರಗತಿ ನಾಲ್ಕರಷ್ಟು ಹಾಗೂ ಶೇ.10 ರಷ್ಟು ಉತ್ಪಾದನಾ ಕ್ಷೇತ್ರದ ಪ್ರಗತಿಗೆ ಸಮನಾಗಿರುತ್ತದೆ. 77 ಲಕ್ಷ ರೈತ ಕುಟುಂಬಕ್ಕೆ ಆಧಾರ್ ಕಾರ್ಡ್ ನೀಡಿದ್ದೇವೆ. ಯಾವುದೇ ಮಧ್ಯವರ್ತಿಗಳಿಲ್ಲದೇ ರೈತರು ನೇರವಾಗಿ ಸರ್ಕಾರದ ಸವಲತ್ತು ಪಡೆಯಬಹುದಾಗಿದೆ.

ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಮನ್ಸುಕ್ ಮಾನವೀಯ, ಭಗವಂತ ಖೂಬಾ, ಕೈಲಾಶ್ ಚೌಧರಿ, ಶೋಭಾ ಕರಂದ್ಲಾಜೆ, ಸಚಿವ ಬಿ.ಸಿ. ಪಾಟೀಲ್, ಮುನಿರತ್ನ, ಆರತಿ ಅಹೂಜಾ, ತ್ರಿಲೋಚನ್ ಮಹಾಪಾತ್ರ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಉತ್ತಮ ಸೇವೆಯಿಂದ ಬೆಳಗಾವಿಯ ಬಿಮ್ಸ್​​ ರಾಜ್ಯಕ್ಕೆ ಪ್ರಥಮ.. ದೇಶದಲ್ಲಿ ಎಷ್ಟನೇ ಸ್ಥಾನ?

For All Latest Updates

TAGGED:

ABOUT THE AUTHOR

...view details