ಬೆಂಗಳೂರು:ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಇನ್ಫೋಸಿಸ್ ಫೌಂಡೇಶನ್‌ನ ಡಾ. ಸುಧಾಮೂರ್ತಿ ಅವರು ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಇಂದು ಕರ್ನಾಟಕ ಇಂಟರ್ ನ್ಯಾಷನಲ್ ಟೂರಿಸಂ ಎಕ್ಸ್‌ಪೋ-2019ನ್ನು ಉದ್ಘಾಟಿಸಿದರು.
ಕರ್ನಾಟಕ ಇಂಟರ್ ನ್ಯಾಷನಲ್ ಟೂರಿಸಂ ಎಕ್ಸ್‌ಪೋ-2019 ಉದ್ಘಾಟಿಸಿದ ಸಿಎಂ.. - Lalit Ashok Hotel
ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಇಂದು ಕರ್ನಾಟಕ ಇಂಟರ್ ನ್ಯಾಷನಲ್ ಟೂರಿಸಂ ಎಕ್ಸ್‌ಪೋ-2019ನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಇನ್ಫೋಸಿಸ್ ಫೌಂಡೇಶನ್‌ನ ಡಾ. ಸುಧಾಮೂರ್ತಿ ಅವರು ಉದ್ಘಾಟಿಸಿದರು.
ಕರ್ನಾಟಕ ಇಂಟರ್ ನ್ಯಾಷನಲ್ ಟೂರಿಸಂ ಎಕ್ಸ್‌ಪೋ ಅಗಸ್ಟ್27ರವರೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 29 ರಾಷ್ಟ್ರದ ಪ್ರತಿನಿಧಿಗಳು, 100ಕ್ಕೂ ಹೆಚ್ಚು ಖಾಸಗಿ ಹಾಗೂ ಸರ್ಕಾರಿ ಪ್ರದರ್ಶಕರು ಕರ್ನಾಟಕದ ವಿವಿಧ ಪ್ರವಾಸಿ ತಾಣಗಳನ್ನು ಹಾಗೂ ಅಲ್ಲಿನ ವಾಸ್ತವ್ಯವನ್ನು ಪ್ರದರ್ಶನ ಮಾಡಲಿದ್ದಾರೆ. ಈ ಸಮ್ಮೇಳನದಲ್ಲಿ 10000ಕ್ಕೂ ಹೆಚ್ಚು ವ್ಯಾವಹಾರಿಕ ಸಭೆಗಳು ಈಗಾಗಲೇ ನಿಗದಿಯಾಗಿದೆ. ಇದರಿಂದ ಅಂತರ್ ರಾಷ್ಟ್ರ ಹಾಗೂ ಭಾರತದ ನಡುವೆ ವ್ಯಾವಹಾರಿಕ ಒಪ್ಪಂದಗಳು ನಡೆಯಲಿದೆ.
ಈ ಸಂದರ್ಭದಲ್ಲಿ ಸಚಿವ ಗೋವಿಂದ ಎಂ.ಕಾರಜೋಳ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಕಾರ್ಯಪಡೆ ಅಧ್ಯಕ್ಷರಾದ ಡಾ. ಸುಧಾಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.