ಬೆಂಗಳೂರು: ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್ (Sparsh Group of Hospitals) ಇಂದು ತನ್ನ ವಿಶೇಷ ಮಹಿಳಾ ಮತ್ತು ಮಕ್ಕಳ ಆರೈಕೆ ಕ್ಷೇತ್ರ (Women and Child Care) ಆರಂಭಿಸಿರುವುದಾಗಿ ಘೋಷಿಸಿದೆ. ಬೆಂಗಳೂರಿನ ಇನ್‍ಫೆಂಟ್ರಿ ರಸ್ತೆಯಲ್ಲಿರುವ (Infantry Road,Bangalore)ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ (Shri Shivaratri Desi Kendra Swamiji ) ಉದ್ಘಾಟಿಸಿದರು.
ಈ ವೇಳೆ ಸಚಿವ ಸುಧಾಕರ್(Minister Sudhakar), ಶಾಸಕ ಶಾಮನೂರು ಶಿವಶಂಕರಪ್ಪ, ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ್ ವಿ ಪಾಟೀಲ್, ಶಾಸಕ ಎನ್ ಎ ಹ್ಯಾರಿಸ್ ಮತ್ತಿತರರು ಹಾಜರಿದ್ದರು. ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೊಸ 50-ಹಾಸಿಗೆ ಸೌಲಭ್ಯವು ಮಹಿಳೆಯರು ಮತ್ತು ಮಕ್ಕಳಿಗೆ ಆರೋಗ್ಯ ರಕ್ಷಣೆಯ ವಲಯದಾದ್ಯಂತ 360-ಡಿಗ್ರಿ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ.
ಈ ಸೌಲಭ್ಯವು ನವಜಾತ ಶಿಶುಗಳ ತೀವ್ರ ನಿಗಾ ಹಾಸಿಗೆಗಳು (ಎನ್‍ಐಸಿಯು), ಶಿಶುಗಳು ಮತ್ತು ಮಕ್ಕಳಿಗಾಗಿ ಪೀಡಿಯಾಟ್ರಿಕ್ ಇಂಟೆನ್ಸಿವ್ ಕೇರ್ ಬೆಡ್‍ಗಳು (Pediatric Intensive Care Bed) (ಪಿಐಸಿಯು), ಗರ್ಭಿಣಿ ಮಹಿಳೆಯರಿಗಾಗಿ ಹೆಚ್ಚಿನ ಅವಲಂಬನೆ ಘಟಕ (ಎಚ್‍ಡಿಯು) ಸೇರಿದಂತೆ ಅಲ್ಟ್ರಾ-ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ.