ಬೆಂಗಳೂರು:ಮಹಾಲಕ್ಷ್ಮಿಪುರ ಕಾಂಗ್ರೆಸ್ ಅಭ್ಯರ್ಥಿ ಎಂ. ಶಿವರಾಜು, ಕಾಮಾಕ್ಷಿ ಪಾಳ್ಯ ವಾರ್ಡ್ನಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಚಾರ ಕಛೇರಿ ಉದ್ಘಾಟನೆ ಮಾಡಿದ್ದು, ಬೆಳ್ಳಂಬೆಳಗ್ಗೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಚುನಾವಣಾ ಪ್ರಚಾರ ಕಚೇರಿ ಉದ್ಘಾಟನೆ: ಕೈ ಅಭ್ಯರ್ಥಿಯಿಂದ ಮತಬೇಟೆ - ಕಾಮಾಕ್ಷಿ ಪಾಳ್ಯ ವಾರ್ಡ್ನಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಚಾರ
ಮಹಾಲಕ್ಷ್ಮೀಪುರ ಕಾಂಗ್ರೆಸ್ ಅಭ್ಯರ್ಥಿ ಎಂ. ಶಿವರಾಜು, ಕಾಮಾಕ್ಷಿ ಪಾಳ್ಯ ವಾರ್ಡ್ನಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಚಾರ ಕಛೇರಿ ಉದ್ಘಾಟನೆ ಮಾಡಿದ್ದು, ಬೆಳಗ್ಗೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
![ಚುನಾವಣಾ ಪ್ರಚಾರ ಕಚೇರಿ ಉದ್ಘಾಟನೆ: ಕೈ ಅಭ್ಯರ್ಥಿಯಿಂದ ಮತಬೇಟೆ](https://etvbharatimages.akamaized.net/etvbharat/prod-images/768-512-5130980-thumbnail-3x2-sanju.jpg)
ಮಹಾಲಕ್ಷ್ಮೀಪುರ,ನಾಗಪುರ ವಾರ್ಡ್ಗಳಲ್ಲಿ, ವೀರಾಂಜನೇಯ ದೇವಸ್ಥಾನ,ನಾಗಪುರ ಪ್ರದೇಶದಲ್ಲಿ ಮನೆಗಳಿಗೆ ತೆರಳಿ ಮತಯಾಚನೆ ಮಾಡಿದ್ದು, ಡಿ.ಸಿ.ಸಿ.ಕಾಂಗ್ರೆಸ್,ಮಹಿಳಾ ಕಾಂಗ್ರೆಸ್ ,ಯುವ ಕಾಂಗ್ರೆಸ್ ಕಾರ್ಯಕರ್ತರು ಕ್ಯಾಂಪೇನ್ ವೇಳೆ ಭಾಗವಹಿಸಿದ್ದರು.
ಬೆಂಗಳೂರು ನಗರ ಗುಂಡಿಗಳ ನಗರ, ಕಸಗಳ ರಾಶಿಯಿಂದ ಗಾರ್ಬೇಜ್ ಸಿಟಿಯಾಗಿದೆ .ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ನಗರ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿತ್ತು. ಆದರೆ ಇಂದು ಬೆಂಗಳೂರು ನಗರ ಅಧ್ವಾನಗಳ ನಗರವಾಗಿದೆ. ಬೆಂಗಳೂರು ನಗರ ಅಭಿವೃದ್ದಿಯ ಜೊತೆಯಲ್ಲಿ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ ಬಹುಮತದಿಂದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಮತದಾರರಿಗೆ ಮನವಿ ಮಾಡಿದರು.