ಬೆಂಗಳೂರು :ಚುನಾವಣೆ ಮುಂದೂಡುವುದು ಸರ್ಕಾರದ ಉದ್ದೇಶ ಅಲ್ಲ. ಅವಧಿಯಂತೆ ಬಿಬಿಎಂಪಿ ಚುನಾವಣೆ ನಡೆಸುವುದು ಸರ್ಕಾರದ ಉದ್ದೇಶವಾಗಿದೆ. ಇದಕ್ಕೆ ಬೇಕಾದ ತಯಾರಿ ನಡೆಸಲು ಸಮಿತಿ ರಚಿಸಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಬೊಮ್ಮನಹಳ್ಳಿ-ಬಿಟಿಎಂ ಲೇಔಟ್ ಸಂಪರ್ಕಿಸುವ ರಸ್ತೆ ಹಾಗೂ ಸೇತುವೆ ಉದ್ಘಾಟಿಸಿ ಮಾತನಾಡಿದ ಅವರು, ಬೊಮ್ಮನಹಳ್ಳಿ-ಬಿಟಿಎಂ ಲೇಔಟ್ ರಸ್ತೆ ನಿರ್ಮಾಣದ ಕೆಲಸ ಅರ್ಧ ಬಾಕಿ ಇರುವಾಗಲೇ ಉದ್ಘಾಟನೆ ಮಾಡಲಾಗಿದೆ. ಸಿಲ್ಕ್ ಬೋರ್ಡ್ ರಸ್ತೆದಟ್ಟಣೆ ತಪ್ಪಿಸಲು ಇದು ಸಹಕಾರಿ. ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಈ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದರು.