ಬೆಂಗಳೂರು: ಮಾರತ್ತಹಳ್ಳಿ ಸಮೀಪ ಹೊರ ವರ್ತುಲ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಸ್ಕೈವಾಕ್ ಇಂದಿನಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ.
ಮಾರತ್ತಹಳ್ಳಿ ಸ್ಕೈವಾಕ್ ಇಂದಿನಿಂದ ಸಾರ್ವಜನಿಕರಿಗೆ ಮುಕ್ತ.. - ರವಿಂದ ಲಿಂಬಾವಳಿ
ಮಾರತ್ತಹಳ್ಳಿ ಸ್ಕೈವಾಕ್‌ನ ಎರಡು ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. 25 ಸಾವಿರಕ್ಕೂ ಹೆಚ್ಚು ಸಾರ್ವಜನಿಕರಿಗೆ ಈ ಮೇಲ್ಸುತುವೆಯಿಂದ ಅನುಕೂಲ ಆಗಲಿದೆ ಎಂದು ಉದ್ಘಾಟನೆ ಮಾಡಿದ ಬಳಿಕ ಅರವಿಂದ ಲಿಂಬಾವಳಿ ತಿಳಿಸಿದರು.
ಶಾಸಕ ಅರವಿಂದ ಲಿಂಬಾವಳಿ, ಪಾಲಿಕೆ ಸದಸ್ಯರಾದ ಎನ್. ರಮೇಶ್ ಮತ್ತು ಆಶಾ ಸುರೇಶ್, ನೂತನವಾಗಿ ನಿರ್ಮಿಸಿರುವ ಸ್ಕೈ ವಾಕ್ ಉದ್ಘಾಟಿಸಿದರು. ನಂತರ ಮಾತನಾಡಿದ ಲಿಂಬಾವಳಿ, ಮಾರತ್ತಹಳ್ಳಿ ಭಾಗದ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಸ್ಕೈವಾಕ್‌ನ ನಿರ್ಮಿಸಲಾಗಿದೆ. ಎರಡು ಕೋಟಿ ರೂ.ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. 25 ಸಾವಿರಕ್ಕೂ ಹೆಚ್ಚು ಸಾರ್ವಜನಿಕರಿಗೆ ಈ ಮೇಲ್ಸುತುವೆಯಿಂದ ಅನುಕೂಲ ಆಗಲಿದೆ ಎಂದರು.
ಮಾರತಹಳ್ಳಿ ಪಾಲಿಕೆ ಸದಸ್ಯ ಎನ್. ರಮೇಶ್ ಮಾತನಾಡಿ, ಹೊರವರ್ತುಲ ರಸ್ತೆಯ ಮಾರತ್ತಹಳ್ಳಿ ಸಮೀಪ ವಾಣಿಜ್ಯ ಕಟ್ಟಡಗಳು ಮತ್ತು ಐಟಿ ಬಿಟಿ ಸಂಸ್ಥೆಗಳು ಹೆಚ್ಚಾಗಿದ್ದು, ರಸ್ತೆ ದಾಟಲು ಹರಸಾಹಸ ಪಡುತ್ತಿದ್ದರು. ಮುಂದಿನ ದಿನಗಳಲ್ಲಿ ಆನಂದನಗರ, ಮಾರುತ್ತಹಳ್ಳಿಯಲ್ಲಿ ಸ್ಕೈವಾಕ್ ನಿರ್ಮಿಸಲು ಬೇಡಿಕೆ ಇದ್ದು, ಪೂಜೆ ಕಾರ್ಯಕ್ರಮ ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದರು.