ಬೆಂಗಳೂರು :ಬಿಜೆಪಿ ಸರ್ಕಾರದಲ್ಲಿ ಹೆಣ್ಮಕ್ಕಳಾಗಲಿ, ಗಂಡು ಮಕ್ಕಳಾಗಲಿ ಸೇಫ್ ಇಲ್ಲ. ಇದಕ್ಕೆ ಮೈಸೂರು ಗ್ಯಾಂಗ್ರೇಪ್ ಪ್ರಕರಣವೇ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೋಡಿ ಪಾಪ ಗೃಹ ಸಚಿವರು ಹೊಸದಾಗಿ ಮಂತ್ರಿಯಾಗಿದ್ದಾರೆ. ಅವರ ಮೇಲೇನೆ ಮಾತನಾಡುವಂಥದ್ದಲ್ಲ. ಒಂದು ಸರ್ಕಾರ ಕಾರಣವಾಗುತ್ತದೆ. ಓರ್ವ ಗೃಹ ಸಚಿವ ಮಾತ್ರ ಅಲ್ಲ ಎಂದು ತಿಳಿಸಿದರು.