ಬೆಂಗಳೂರು : ಒಡಿಶಾ ರಾಜ್ಯದ ಕಟಕ್ ಜಿಲ್ಲೆಯಲ್ಲಿ ಫಣಿ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜನ್ನು ಮರು ಸ್ಥಾಪಿಸುವಲ್ಲಿ ಸಫಲವಾಗಿರುವ ಬೆಸ್ಕಾಂ, ವಿವಿಧ ಗ್ರಾಮಗಳಲ್ಲಿರುವ ಸುಮಾರು 14,000 ಗ್ರಾಹಕರಿಗೆ ವಿದ್ಯುತ್ ಸಂಪರ್ಕವನ್ನು ಮರು ಕಲ್ಪಿಸಿದೆ.
ಒಡಿಶಾ ಫಣಿ ಪೀಡಿತ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ.. 14 ಸಾವಿರ ಕುಟುಂಬಗಳಿಗೆ ಬೆಳಕಾದ ಬೆಸ್ಕಾಂ! - undefined
ಫಣಿ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜನ್ನು ಮರು ಸ್ಥಾಪಿಸಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ಮೇ 13 ರಂದು 300 ಮಾನವ ಸಂಪನ್ಮೂಲ ತಂಡವನ್ನು (ಇಂಜಿನಿಯರ್ಗಳನ್ನೊಳಗೊಂಡಂತೆ) ನಿಯೋಜಿಸಿತ್ತು. ತಂಡವು 66 ವಿತರಣಾ ಪರಿವರ್ತಕಗಳ ಕೇಂದ್ರಗಳು, 29 ಕಿಮೀ 11 ಕೆವಿ ಲೈನ್ ಮತ್ತು 47 ಕಿಮೀ ಎಲ್‌ಟಿ ಲೈನ್‌ನ 42-43 ಡಿಗ್ರಿ ತಾಪಮಾನದ ವಾತಾವರಣದಲ್ಲಿ ನಿರ್ಮಿಸಿ, ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ಯಶ್ವಸಿಯಾಗಿದೆ.
ಫಣಿ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜನ್ನು ಮರು ಸ್ಥಾಪಿಸಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯಿಂದ ಮೇ 13ರಂದು 300 ಮಾನವ ಸಂಪನ್ಮೂಲ ತಂಡವನ್ನು (ಇಂಜಿನಿಯರ್ಗಳನ್ನೊಳಗೊಂಡಂತೆ) ನಿಯೋಜಿಸಲಾಗಿತ್ತು. ತಂಡವು 66 ವಿತರಣಾ ಪರಿವರ್ತಕಗಳ ಕೇಂದ್ರಗಳು, 29 ಕಿಮೀ 11 ಕೆವಿಲೈನ್ ಮತ್ತು 47 ಕಿಮೀ ಎಲ್‌ಟಿ ಲೈನ್‌ನ 42-43 ಡಿಗ್ರಿ ತಾಪಮಾನದ ವಾತಾವರಣದಲ್ಲಿ ನಿರ್ಮಿಸಿ, ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ಯಶ್ವಸಿಯಾಗಿದೆ. ಇದರಿಂದ ವಿವಿಧ ಗ್ರಾಮಗಳಲ್ಲಿರುವ ಸುಮಾರು 14,000 ಗ್ರಾಹಕರಿಗೆ ವಿದ್ಯುತ್ ಸಂಪರ್ಕವನ್ನು ಮರು ಕಲ್ಪಿಸಲಾಗಿದೆ ಎಂದು ಬೆಸ್ಕಾಂ ಪ್ರಕಟಣೆ ಮೂಲಕ ತಿಳಿಸಿದೆ.
ಕೆಲ ಹಳ್ಳಿಗಳಿಗೆ ರಸ್ತೆಯ ಮೂಲಕ ಪ್ರವೇಶಿಸಲು ಬಹಳ ಕಷ್ಟಕರವಾಗಿದ್ದರೂ ಸಹ ನಮ್ಮ ಬೆಂಗಳೂರು ವಿದ್ಯುತ್ ಕಂಪನಿಯ ಕೆಲಸಗಾರರು ಕಂಬಗಳು ಮುಂತಾದ ಸಾಮಾಗ್ರಿಗಳನ್ನು ತಾವೇ ಖುದ್ದಾಗಿ ತೆಗೆದುಕೊಂಡು ಹೋಗಿದ್ದಾರೆ. ರಾಜ್ಯದ ಬೆವಿಕಂ ತಂಡದ ಯಶಸ್ವಿ ಕಾಮಗಾರಿಗಳನ್ನು ಒಡಿಶಾದ ಕೇಂದ್ರ ವಿದ್ಯುತ್ ಸರಬರಾಜು ಯುಟಿಲಿಟಿರವರು ಪ್ರಶಂಶಿಸಿದ್ದಾರೆ. ಅಲ್ಲದೇ ತಂಡವು ತಮಗೆ ವಹಿಸಿದ್ದ ಎಲ್ಲಾ ಕಾಮಗಾರಿಗಳನ್ನೂ ಯಶ್ವಸಿಯಾಗಿ ಪೂರ್ಣಗೊಳಿಸಿ ಮರಳಿ ಬೆಂಗಳೂರನ್ನು ತಲುಪಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.