ಬೆಂಗಳೂರು:ರಾಜ್ಯದಲ್ಲಿಂದು 301 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಓರ್ವ ಸೋಂಕಿತ ಮೃತಪಟ್ಟಿದ್ದಾನೆ. 21,413 ಜನರ ಕೋವಿಡ್ ಪರೀಕ್ಷೆ ನಡೆಸಲಾಗಿದೆ. 146 ಮಂದಿ ವೈರಸ್‌ನಿಂದ ಗುಣಮುಖರಾಗಿದ್ದಾರೆ. ಸದ್ಯ 2,414 ಸಕ್ರಿಯ ಪ್ರಕರಣಗಳಿವೆ.
ರಾಜ್ಯದಲ್ಲಿ 301 ಜನರಿಗೆ ತಗುಲಿದ ಕೊರೊನಾ: ಸೋಂಕಿಗೆ ಓರ್ವ ಬಲಿ - ಕರ್ನಾಟಕದ ಕೊರೊನಾ ಸುದ್ದಿ
ರಾಜ್ಯದಲ್ಲಿ ಭಾನುವಾರ 301 ಜನರಲ್ಲಿ ಕೊರೊನಾ ಪತ್ತೆಯಾಗಿದ್ದು, 146 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಓರ್ವ ಸೋಂಕಿಗೆ ಬಲಿಯಾಗಿದ್ದಾನೆ.
ಕೊರೊನಾ
ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಶೇ.1.40ರಷ್ಟಿದ್ದು, ವಾರದ ಸೋಂಕಿತರ ಪ್ರಮಾಣ ಶೇ.1.33ರಷ್ಟಿದೆ. ಈ ವಾರದ ಸಾವಿನ ಪ್ರಮಾಣ ಶೇ.0.11 ಇದೆ. ಬೆಂಗಳೂರಿನಲ್ಲಿ ಭಾನುವಾರ 291 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಒಬ್ಬರು ಕೋವಿಡ್ಗೆ ಬಲಿಯಾಗಿದ್ದಾರೆ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 17,88,895ಕ್ಕೆ ಏರಿಕೆ ಆಗಿದೆ. ಇಂದು 142 ಮಂದಿ ಬಿಡುಗಡೆಯಾಗಿದ್ದಾರೆ. ಈವರೆಗೂ ಕೋವಿಡ್ ಸಾವಿನ ಸಂಖ್ಯೆ 16,964 ಇದೆ. ರಾಜಧಾನಿಯಲ್ಲಿ 2,294 ಸಕ್ರಿಯ ಪ್ರಕರಣಗಳಿವೆ.
ಇದನ್ನೂ ಓದಿ:'ಅಪ್ಪು' ಪುತ್ಥಳಿ ಅನಾವರಣದ ವೇಳೆ ಅಭಿಮಾನಿಗಳ ಮಧ್ಯೆ ಹೊಡೆದಾಟ