ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಅಬ್ಬರ ಶುರುವಾಯ್ತಾ ಅನ್ನೋ ಪ್ರಶ್ನೆ ಇದೀಗ ಕಾಡ್ತಿದೆ. ನಾಲ್ಕನೇ ಅಲೆಗೆ ಸಾಕ್ಷಿ ಎಂಬಂತೆ ಎರಡಂಕಿಯಿಂದ ಮೂರಂಕಿಗೆ ಸೋಂಕಿತರ ಸಂಖ್ಯೆ ಜಿಗಿದಿದೆ. ರಾಜ್ಯದಲ್ಲಿಂದು 9,714 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, 100 ಮಂದಿಗೆ ಸೋಂಕು ದೃಢಪಟ್ಟಿದೆ.
ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 39,46,645ಕ್ಕೆ ಏರಿಕೆ ಆಗಿದೆ. ಪಾಸಿಟಿವ್ ದರವು 1.02% ಕ್ಕೆ ಏರಿಕೆ ಕಂಡಿದೆ. ಇತ್ತ 49 ಸೋಂಕಿತರು ಗುಣಮುಖರಾಗಿದ್ದು, ಈ ತನಕ 39,04,996 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಯಾರೂ ಸೋಂಕಿಗೆ ಬಲಿಯಾಗಿಲ್ಲ. ಇಲ್ಲಿಯವರೆಗೆ ಒಟ್ಟು 40,057 ಮೃತಪಟ್ಟಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 1,550 ರಷ್ಟಿದೆ. ವಿಮಾನ ನಿಲ್ದಾಣದಿಂದ 3,412 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ.