ಕರ್ನಾಟಕ

karnataka

ETV Bharat / state

ಮೈತ್ರಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯಗಳು ಸಹಜ.. ಜೆಡಿಎಸ್‌ ನಾಯಕರಿಗೆ 'ವಿಶ್ವಾಸ' ಗೆಲ್ಲುವ ಕಾನ್ಫಿಡೆಂಟ್‌.. - undefined

ಸಮ್ಮಿಶ್ರ ಸರ್ಕಾರ ಸಂಪೂರ್ಣ ಅವಧಿ ಮುಗಿಸುತ್ತದೆ. ವಿಶ್ವಾಸ ಮತವನ್ನು ಸಾಬೀತುಪಡಿಸುತ್ತದೆ ಎಂದು ಪರಿಷತ್ ಸದಸ್ಯ ಟಿ.ಎ ಶರವಣ ಹಾಗೂ ಶಾಸಕ ಡಾ.ಕೆ ಅನ್ನದಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಟಿ.ಎಸ್.ಶರವಣ, ಶಾಸಕ ಡಾ.ಕೆ.ಅನ್ನದಾನಿ

By

Published : Jul 13, 2019, 10:17 PM IST

ಬೆಂಗಳೂರು: ಎಲ್ಲ ಪಕ್ಷಗಳಲ್ಲಿಯೂ ಭಿನ್ನಾಭಿಪ್ರಾಯಗಳು ಇರುತ್ತವೆ. ಅತೃಪ್ತ ಶಾಸಕರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ. ಇನ್ನೂ ನಾಲ್ಕು ವರ್ಷ ಹೆಚ್​ಡಿಕೆ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಟಿ ಎಸ್ ಶರವಣ ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್‌ ನಾಯಕರಿಗೆವಿಶ್ವಾಸ ಮತಯಾಚನೆಯಲ್ಲಿ ಪಾಸ್ ಆಗುವ ವಿಶ್ವಾಸ..

ಡಾ. ಸುಧಾಕರ್ ಮನವೊಲಿಕೆ‌ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಎಲ್ಲವೂ ಶುಭ ಸೂಚಕವಾಗಿದೆ. ವಿಶ್ವಾಸಮತ ಸಾಬೀತುಪಡಿಸುವುದಾಗಿ ಕುಮಾರಣ್ಣ ಹೇಳಿದ್ದಾರೆ ಎಂದರು.ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವವಹಿಸಿದ ಸೋನಿಯಾಗಾಂಧಿ, ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖದಲ್ಲಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗಿದೆ. ಅವರೆ ಅದರ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಮಳವಳ್ಳಿ ಶಾಸಕ ಡಾ.ಕೆ ಅನ್ನದಾನಿ ಹೇಳಿದರು. ಇಲ್ಲಿನ ದೇವನಹಳ್ಳಿ ಗಾಲ್ಫ್ ಶೈರ್ ರೆಸಾರ್ಟ್ ಬಳಿ ಮಾತನಾಡಿದ ಅವರು, ಎಲ್ಲ ಶಾಸಕರು ಇಲ್ಲೇ ಇದ್ದಾರೆ. ಅವರೇನೂ ವಿದೇಶಕ್ಕೆ ಹಾರಿಲ್ಲ. ಸಮಸ್ಯೆಗಳಿಗೆ ಕುಮಾರಣ್ಣ ಒಬ್ಬರೇ ಕಾರಣ ಎನ್ನುವುದು ತಪ್ಪು ಎಂದರು. ನಮ್ಮ ವೈಯಕ್ತಿಕ ಖರ್ಚಿನಲ್ಲೇ ರೆಸಾರ್ಟ್​ನಲ್ಲಿ ವಾಸವಿದ್ದೇವೆ. ಜನರ ತೆರಿಗೆ ಹಣವನ್ನು ಬಳಸಿಕೊಂಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

For All Latest Updates

TAGGED:

ABOUT THE AUTHOR

...view details