ಬೆಂಗಳೂರು: ಬೆಂಗಳೂರು ವಿವಿ ಮುಂಭಾಗದಲ್ಲಿ ಬುದ್ದ ಹಾಗು ಸರಸ್ವತಿಯ ಪ್ರತಿಮೆ ಸ್ಥಾಪನೆ ವಿಚಾರವಾಗಿ ವಿವಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ನಡುವೆ ಅಸಮಾಧಾನ ಭುಗಿಲೆದ್ದಿದೆ.
ವಿದ್ಯಾದೇವಿ ಸರಸ್ವತಿಯೋ? ಶಾಂತಿಪ್ರಿಯ ಬುದ್ದನೋ? ಬೆಂಗಳೂರು ವಿವಿಯಲ್ಲಿ ಪ್ರತಿಮೆ ವಿವಾದ - undefined
ಸರಸ್ವತಿ ಮತ್ತು ಬುದ್ಧನ ಪ್ರತಿಮೆ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿಶ್ವವಿದ್ಯಾಲಯದ ಮುಂಭಾಗ ಬೃಹತ್ ಪ್ರತಿಭಟನೆ ನಡೆದಿದೆ.

ವಿವಿ ಪ್ರಧಾನ ಕಚೇರಿ ಮುಂಭಾಗ 1,973 ರ ಕಾಲಾವಧಿಯಲ್ಲಿ ಸರಸ್ವತಿ ದೇವಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಆದರೆ ಹಳೆಯದಾದ ಸರಸ್ವತಿ ವಿಗ್ರಹ ವಿರೂಪಗೊಂಡ ಹಿನ್ನೆಲೆಯಲ್ಲಿ,ಹೊಸ ವಿಗ್ರಹ ಕೂರಿಸಲು ವಿ.ವಿ ಏರ್ಪಾಡು ಮಾಡಿತ್ತು.
ಸರಸ್ವತಿಯ ನೂತನ ವಿಗ್ರಹ ಸ್ಥಾಪನೆಗೆ 2.50 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದ್ದು, ಉದ್ಘಾಟನೆಗೆ ದಿನ ನಿಗದಿಯೂ ಆಗಿತ್ತು. ಆದರೆ ಕೆಲ ವಿದ್ಯಾರ್ಥಿಗಳು ಸರಸ್ವತಿ ವಿಗ್ರಹವನ್ನು ತೆರವು ಮಾಡಿರುವ ಜಾಗದಲ್ಲಿ ಬುದ್ಧನ ವಿಗ್ರಹವನ್ನಿಟ್ಟಿದ್ದಾರೆ. ಬುದ್ದನ ಮೂರ್ತಿಯನ್ನು ತೆರವು ಮಾಡಲು ವಿವಿ ಸಿಬ್ಬಂದಿ ಮುಂದಾದಾಗ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಒಟ್ಟು ಸೇರಿದ ಕೆಲ ವಿದ್ಯಾರ್ಥಿಗಳು ಬುದ್ದನ ಮೂರ್ತಿ ಪ್ರತಿಷ್ಟಾಪಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಿದರು.