ಬೆಂಗಳೂರು: ಕಳೆದ ಶನಿವಾರದಿಂದ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ.
ಅಂದುಕೊಂಡಂತಿಲ್ಲ ಬೆಂಗಳೂರು: ಒಂದೇ ವಾರದಲ್ಲಿ 5,230 ಪಾಸಿಟಿವ್ ಪ್ರಕರಣ - ಕರ್ನಾಟಕದಲ್ಲಿ ಕೊರೊನಾ ವೈರಸ್
ಕಳೆದ ಒಂದು ವಾರದ ಅವಧಿಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ 5,230 ಆಗಿದೆ. ದೇಶದಲ್ಲಿ ಅತಿಹೆಚ್ಚು ಸೋಂಕಿತ ನಗರಗಳ ಪೈಕಿ ಕೋಲ್ಕತ್ತಾವನ್ನೂ ಮೀರಿ ನಾಲ್ಕನೇ ಸ್ಥಾನಕ್ಕೆ ಬೆಂಗಳೂರು ಏರಿಕೆಯಾಗಿದೆ.
![ಅಂದುಕೊಂಡಂತಿಲ್ಲ ಬೆಂಗಳೂರು: ಒಂದೇ ವಾರದಲ್ಲಿ 5,230 ಪಾಸಿಟಿವ್ ಪ್ರಕರಣ Covid cases](https://etvbharatimages.akamaized.net/etvbharat/prod-images/768-512-7884104-thumbnail-3x2-covid.jpg)
ಕೊರೊನಾ ವೈರಸ್
ಕಳೆದ ಒಂದು ವಾರದ ಅವಧಿಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ 5,230 ಆಗಿದೆ. ದೇಶದಲ್ಲಿ ಅತಿಹೆಚ್ಚು ಸೋಂಕಿತ ನಗರಗಳ ಪೈಕಿ ಕೋಲ್ಕತ್ತಾವನ್ನೂ ಮೀರಿ ನಾಲ್ಕನೇ ಸ್ಥಾನಕ್ಕೆ ಬೆಂಗಳೂರು ಏರಿಕೆಯಾಗಿದೆ.
ಕಳೆದ ಶನಿವಾರ 596, ಭಾನುವಾರ 783, ಸೋಮವಾರ 738, ಮಂಗಳವಾರ 503, ಬುಧವಾರ 735, ಗುರುವಾರ 881 ಹಾಗೂ ಶುಕ್ರವಾರ 994 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ನಗರದಲ್ಲಿ 11.89 ಪ್ರಮಾಣದಲ್ಲಿ ಕೊರೊನಾ ಹರಡುತ್ತಿದೆ. ಕಳೆದ 24 ಗಂಟೆಯಲ್ಲಿ ಶಾಂತಲಾನಗರ, ಚಾಮರಾಜಪೇಟೆ, ಗಾಂಧಿನಗರ, ಧರ್ಮರಾಯ ಸ್ವಾಮಿ ಟೆಂಪಲ್ ಮತ್ತು ಆರ್.ಆರ್. ನಗರದಲ್ಲಿ ಅತಿಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.