ಬೆಂಗಳೂರು:ಕೊರೊನಾ ಪಾಸಿಟಿವ್ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಪಾದರಾಯನಪುರದ ಕಾರ್ಪೊರೇಟರ್ ಇಮ್ರಾನ್ ಪಾಷಾ ಇಂದು ಬಿಡುಗಡೆ ಹೊಂದಿದ್ದಾರೆ. ಬಿಡುಗಡೆಯಾದ ಅವರಿಗೆ ಅಭಿಮಾನಿಗಳು ಕೊರೊನಾ ಭೀತಿ ಮರೆತು, ಸಾಮಾಜಿಕ ಅಂತರವಿಲ್ಲದೆ ಅವರ ನೂರಾರು ಬೆಂಬಲಿಗರು ಸಂಭ್ರಮಾಚರಣೆ ಮಾಡಿದ್ದಾರೆ.
ಕೊರೊನಾದಿಂದ ಗುಣಮುಖರಾಗಿದ್ದಕ್ಕೆ ಅದ್ದೂರಿ ಮೆರವಣಿಗೆ.. ರೀ ಇಮ್ರಾನ್ ಪಾಷ ಇದೆಲ್ಲ ಬೇಕಿತ್ತೇನ್ರೀ.. - Imran Pasha released from hospital
ಜವಾಬ್ದಾರಿಯುತ ಜನಪ್ರತಿನಿಧಿಯಾಗಿರೋ ಕಾರ್ಪೊರೇಟರ್ ಇಮ್ರಾನ್ ಪಾಷ, ಇವತ್ತು ನಡೆದುಕೊಂಡು ರೀತಿ ನಿಜಕ್ಕೂ ಸರಿಯಾದುದಲ್ಲ. ಬರೀ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿರೋದಕ್ಕೆ ಏನೋ ಯುದ್ಧದಿಂದ ಗೆದ್ದು ಬಂದವರಂತೆ ವರ್ತಿಸಿರೋ ನಡೆ ಯಾರಿಗೂ ಒಳ್ಳೇದಲ್ಲ.
ಆಸ್ಪತ್ರೆಯಿಂದ ಇಮ್ರಾನ್ ಪಾಷಾ ಬಿಡುಗಡೆ
ಸಿರ್ಸಿ ಸರ್ಕಲ್ ಬಳಿ ಪಟಾಕಿ ಸಿಡಿಸಿ, ಹೂ ಮಾಲೆ ಹಾಕಿ ಅದ್ದೂರಿ ಸ್ವಾಗತ ಮಾಡಿದ್ದಾರೆ. ಇದೇ ವೇಳೆ ಡಾ. ರಾಜ್ಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ್ದಾರೆ ಇಮ್ರಾನ್ ಪಾಷ. ಜೈಕಾರ ಹಾಕಿ, ಬೆಂಬಲಿಗರು ಸ್ವಾಗತ ಮಾಡಿದ್ದು, ಇಮ್ರಾನ್ ಪಾಷಾರ ಈ ವರ್ತನೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.