ಕರ್ನಾಟಕ

karnataka

ETV Bharat / state

ಬಿಬಿಎಂಪಿ ಶಾಲಾ ಮಕ್ಕಳಿಗೆ ಸಮವಸ್ತ್ರದ ಜೊತೆಗೆ ಸಿಗಲಿದೆ ಬ್ಲೇಜರ್ - ಮಕ್ಕಳ ದಿನಾಚರಣೆ ವಿಶೇಷ

ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್ ಪಾಷಾ ಹಾಗೂ ಸದಸ್ಯರುಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಶಾಲಾ ಮಕ್ಕಳಿಗೆ ಬ್ಲೇಜರ್​ಗಳನ್ನು ವಿತರಣೆ ಮಾಡಿದರು.

Imran Pasha, ಇಮ್ರಾನ್ ಪಾಷ

By

Published : Nov 16, 2019, 9:59 PM IST

ಬೆಂಗಳೂರು :ಬಿಬಿಎಂಪಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಇನ್ನು ಮುಂದೆ ಸಮವಸ್ತ್ರದ ಜೊತೆಗೆ ಬ್ಲೇಜರ್ ಕೂಡಾ ಸಿಗಲಿದೆ.

ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಇಮ್ರಾನ್ ಪಾಷಾ ಹಾಗೂ ಸದಸ್ಯರುಗಳು ನಗರದ ಜೆ.ಜೆ.ಆರ್ ನಗರದ ಶಾಲೆಯ ಆವರಣದಲ್ಲಿ ಮಕ್ಕಳ ದಿನವನ್ನ ವಿಶೇಷವಾಗಿ, ಸಾಂಕೇತಿಕವಾಗಿ ಬ್ಲೇಜರ್​ಗಳನ್ನು ವಿತರಣೆ ಮಾಡಿದರು.

ಬಳಿಕ ಮಾತನಾಡಿದ ಅವರು, ಉಳಿದ ಪಾಲಿಕೆ ಶಾಲಾ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೂ ಸಹ ಬ್ಲೇಜರ್​ ವಿತರಣೆ ಮಾಡಲಾಗುತ್ತಿದ್ದು, ಸುಮಾರು ಒಂಬತ್ತು ಸಾವಿರ ವಿದ್ಯಾರ್ಥಿಗಳಿಗೆ ಈ ತಿಂಗಳ ಅಂತ್ಯದೊಳಗೆ ವಿತರಿಸಲು ಕ್ರಮಕೈಗೊಳ್ಳುವಂತೆ ಆದೇಶಿಸಲಾಗಿದೆ ಎಂದು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಇಮ್ರಾನ್ ಪಾಷಾ ತಿಳಿಸಿದರು.

ಕಾರ್ಯಕ್ರಮದಲ್ಲಿ ಮೇಯರ್ ಗೌತಮ್ ಕುಮಾರ್, ಉಪಮೇಯರ್ ರಾಮ್ ಮೋಹನ್ ರಾಜು ಭಾಗಿಯಾಗಿದ್ದರು.

ABOUT THE AUTHOR

...view details