ಕರ್ನಾಟಕ

karnataka

ETV Bharat / state

ವಿಚ್ಛೇದನ, ಜೀವನಾಂಶ: ಹೈಕೋರ್ಟ್‌ ಹೊರಡಿಸಿದ ಪ್ರಮುಖ ಆದೇಶಗಳಿವು - ​ ETV Bharat Karnataka

ವಿಚ್ಛೇದನ, ಜೀವನಾಂಶ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಹಿಂದೂ ವಿವಾಹ ಕಾಯಿದೆಯಡಿ ಈ ವರ್ಷ ಹೈಕೋರ್ಟ್‌ ಮಹತ್ವದ ಆದೇಶಗಳನ್ನು ಹೊರಡಿಸಿದೆ. ಅವು ಯಾವುವು ನೋಡೋಣ.

ಹೈಕೋರ್ಟ್‌
ಹೈಕೋರ್ಟ್‌

By ETV Bharat Karnataka Team

Published : Dec 26, 2023, 9:58 PM IST

ಬೆಂಗಳೂರು:ವಿಚ್ಛೇದನ, ಜೀವನಾಂಶ ಕೋರಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳಿಗೆ ಸಂಬಂಧಿಸಿದಂತೆ ಪ್ರಮುಖ ಆದೇಶಗಳನ್ನು ಈ ವರ್ಷ ಹೈಕೋರ್ಟ್‌ ಹೊರಡಿಸಿದ್ದು, ಅವು ಹೀಗಿವೆ.

  • ಹಿಂದೂ ವಿವಾಹ ಕಾಯಿದೆ ಪ್ರಕಾರ ಎರಡನೇ ಮದುವೆ ಕಾನೂನು ಬಾಹಿರ. ಆದರೆ, ಅನೈತಿಕವಲ್ಲ.
  • ಪತಿಯಾದವರು ಪತ್ನಿ ಮತ್ತು ಮಗುವಿಗೆ ಜೀವನಾಂಶ ನೀಡುವುದು ಕರ್ತವ್ಯ. ಪತಿಗೆ ಯಾವುದೇ ಕೆಲಸವಿಲ್ಲದಿದ್ದರೆ, ಕೆಲಸ ಹುಡುಕಿಕೊಂಡು ದುಡಿದು ಜೀವನಾಂಶ ನೀಡಬೇಕು.
  • ಕುಟುಂಬ ಪಿಂಚಣಿಯಂತಹ ಸೌಲಭ್ಯಗಳನ್ನು ನೀಡುವ ಸಂದರ್ಭದಲ್ಲಿ ಎರಡನೇ ಪತ್ನಿಯ ಸಂಬಂಧವನ್ನು ಗುರುತಿಸುವುದು ಸಾರ್ವಜನಿಕ ಹಿತಾಸಕ್ತಿಗೆ ಹಾನಿಕಾರಕ.
  • ಭಾರತೀಯ ರೈಲ್ವೆ ಸೇವಾ ನಿಯಮಗಳ ಪ್ರಕಾರ ಒಬ್ಬ ಅಥವಾ ಹೆಚ್ಚಿನ ಪತ್ನಿಯರು ಕುಟುಂಬ ಪಿಂಚಣಿ ಪಡೆಯಲು ಅರ್ಹರು. ಸಾವನ್ನಪ್ಪಿದ ಉದ್ಯೋಗಿಯ ಪತ್ನಿಯರ ನಡುವೆ ಕುಟುಂಬ ಪಿಂಚಣಿಯು ಸಮಾನವಾಗಿ ಹಂಚಿಕೆಯಾಗಲಿದೆ.
  • ಹಿಂದೂ ವಿವಾಹ ಕಾಯಿದೆಯಡಿ ಪರಸ್ಪರ ಸಮ್ಮತಿಯ ವಿಚ್ಚೇದನಕ್ಕೆ 18 ತಿಂಗಳು ಕಾಯಲೇ ಬೇಕು.
  • ಮದುವೆ ಸಂಬಂಧದಿಂದ ಆಧಾರ್ ಕಾರ್ಡ್ ಸಂಖ್ಯೆ ಹೊಂದಿರುವವರ ಖಾಸಗಿ ಹಕ್ಕು, ಆಧಾರ್ (ಹಣಕಾಸು ಮತ್ತು ಇತರೆ ಸಬ್ಸಿಡಿಗಳು, ಸಹಾಯಧನ ಮತ್ತು ಸೇವೆಗಳ ಗುರಿ ಕೇಂದ್ರಿತ ತಲುಪಿಸುವಿಕೆ) ಕಾಯಿದೆ 2016ರ ಅಡಿ ಹಕ್ಕು ಮೊಟಕುಗೊಳಿಸಲಾಗದು.
  • ಗಂಡನ ಮೈಬಣ್ಣವನ್ನು ನಿಂದಿಸಿ ಅವಮಾನಿಸುವುದು ಕ್ರೌರ್ಯ ಎಂಬುದಾಗಿ ಪರಿಗಣಿಸಬಹುದು.
  • ಮಧುಮೇಹದಂತಹ ಪ್ರಪಂಚದ ಹಲವಾರು ಮಂದಿ ಎದುರಿಸುತ್ತಿದ್ದು, ನಿರ್ವಹಣೆ ಮಾಡುವಂತಹ ಕಾಯಿಲೆಯಾಗಿದೆ. ಇದೇ ಕಾರಣ ನೀಡಿ ಪತ್ನಿ ಮತ್ತು ಮಕ್ಕಳಿಗೆ ಜೀವನಾಂಶ ನಿರಾಕರಿಸಲಾಗದು.
  • ಪತ್ನಿ ಸಹಿ ಮಾಡಿದ್ದ ಬ್ಲ್ಯಾಂಕ್ ಚೆಕ್‌ಗಳನ್ನು ಆಕೆಯ ಗಮನಕ್ಕೆ ಬಾರದಂತೆ ಸಾಲ ಪಡೆಯಲು ಪತಿ ಬಳಕೆ ಮಾಡುಕೊಳ್ಳುವುದು ಮಾನಸಿಕ ಕ್ರೌರ್ಯಕ್ಕೆ ಸಮ.
  • ವಿವಾಹವಾಗಿದ್ದರೂ, ಮತ್ತೊಬ್ಬರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ಸಹಜೀವನ ನಡೆಸುತ್ತಿರುವ ಮಹಿಳೆಯು ಪತಿಯಿಂದ ಜೀವನಾಂಶ ನಿರೀಕ್ಷಿಸಲಾಗದು.
  • ದುಡಿಯಲು ಸಾಮರ್ಥ್ಯ ಹೊಂದಿರುವ ಪತಿ ಜೀವನಾಂಶ ನೀಡುವಂತೆ ಪತ್ನಿಗೆ ಆದೇಶಿಸಿದಲ್ಲಿ ಸೋಮಾರಿತನವನ್ನು ಬೆಂಬಲಿಸಿದಂತೆ ಎಂದು ಆದೇಶಿಸಿದ ಹೈಕೋರ್ಟ್.
  • ಹಿಂದೂ ವಿವಾಹ ಕಾಯಿದೆಯಡಿಯಲ್ಲಿ ಪತಿಯಿಂದ ವಿಚ್ಛೇದಿತ ಮಹಿಳೆಯರು ಜೀವನಾಂಶ ಕೋರಿ ಸಲ್ಲಿಸುವ ಅರ್ಜಿಗಳ ಕುರಿತು ಕಾಲಮಿತಿಯಲ್ಲಿ ತೀರ್ಮಾನ ಕೈಗೊಳ್ಳಲು ವಿಚಾರಣಾ ನ್ಯಾಯಾಲಯಗಳಿಗೆ ಮಾರ್ಗಸೂಚಿ ರಚಿಸಿದ ನ್ಯಾಯಪೀಠ.
  • ಪತಿಯ ವಿರುದ್ಧ ಸುಳ್ಳು ಆರೋಪದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಒಂದು ರೀತಿಯ ಹಿಂಸೆ ನೀಡುವ ಪ್ರಕ್ರಿಯೆಯಾಗಿದೆ.
  • ಪೌರತ್ವವನ್ನು ತ್ಯಜಿಸಲು 21 ವರ್ಷ ವಯಸ್ಸಾಗಬೇಕು ಎಂದು ಪಾಕಿಸ್ತಾನ ತಿಳಿಸಿರುವ ಸಂದರ್ಭದಲ್ಲಿ ಪಾಕಿಸ್ತಾನದ ತಂದೆ ಮತ್ತು ಭಾರತದ ತಾಯಿಗೆ ದುಬೈನಲ್ಲಿ ಜನಿಸಿರುವ ಇಬ್ಬರು ಅಪ್ರಾಪ್ತ ಮಕ್ಕಳಿಗೆ 21 ವರ್ಷಕ್ಕಿಂತಲೂ ಮುನ್ನ ಭಾರತದ ಪೌರತ್ವ ನೀಡಲು ನಿರ್ದೇಶನ.
  • ದಂಪತಿ ಒಂದೇ ಮನೆಯಲ್ಲಿ ನೆಲೆಸಿದ್ದಾರೆ ಎಂಬ ಕಾರಣ ನೀಡಿ ವಿಚ್ಛೇದನ ನಿರಾಕರಿಸುವುದಕ್ಕೆ ಅವಕಾಶವಿಲ್ಲ.
  • ಪತಿಯಿಂದ ವಿಚ್ಚೇದನ ನೋಟಿಸ್ ಬಂದ ಬಳಿಕ ತನ್ನ ಗಂಡನ ಸಂಬಂಧಿಗಳ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಲ್ಲಿ ಪ್ರಕರಣ ದಾಖಲಿಸಿದರೆ ಮಹತ್ವ ಕಳೆದುಕೊಳ್ಳಲಿದೆ.
  • ಪತಿ ಬ್ಯಾಂಕ್​ನಿಂದ ಪಡೆದ ಓವರ್ ಡ್ರಾಫ್ಟ್ ಸಾಲ (ಒಡಿ) ಮಾಸಿಕ ಕಂತುಗಳಲ್ಲಿ ಪಾವತಿಸುದ್ದಿದ್ದು, ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡಲಾಗುವುದಿಲ್ಲ ಎನ್ನಲಾಗದು.
  • ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಬಳಿಕ ವಿಚ್ಛೇದನವಾಗಿಲ್ಲದಿದ್ದರೂ ಪತಿಯಿಂದ ಎಲ್ಲ ಹಕ್ಕುಗಳನ್ನು ಕಳೆದುಕೊಂಡಂತೆ.

ABOUT THE AUTHOR

...view details